Crime News: ಕುಡಿದು ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಬರ್ಬರ ಹತ್ಯೆ; ಪೊಲೀಸರೆದುರು ತಾನೇ ಶರಣಾದ ಮಹಿಳೆ

|

Updated on: Jun 26, 2024 | 10:15 PM

ದಿನವೂ ಕುಡಿದು ಬಂದು ಚಿತ್ರಹಿಂಸೆ ಕೊಡುತ್ತಿದ್ದ ಗಂಡನನ್ನು ಕೊಲೆ ಮಾಡಿದ ಆರೋಪದಡಿ ಮಹಿಳೆ ಮತ್ತು ಅವಳ ಕುಟುಂಬದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರಿಬ್ಬರನ್ನು ಇಂದು (ಬುಧವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Crime News: ಕುಡಿದು ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಬರ್ಬರ ಹತ್ಯೆ; ಪೊಲೀಸರೆದುರು ತಾನೇ ಶರಣಾದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಸಿಲ್ಚಾರ್: ಅಸ್ಸಾಂನ (Assam Crime News) ಜೋರ್ಹತ್ ಜಿಲ್ಲೆಯಲ್ಲಿ 26 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಮಚ್ಚಿನಿಂದ ಇರಿದು ಕೊಂದು (Murder), ನಂತರ ಪೊಲೀಸರ ಎದುರು ಶರಣಾಗಿದ್ದಾಳೆ ಎಂದು ಪೊಲೀಸರು ಇಂದು (ಬುಧವಾರ) ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಜೋರ್ಹತ್‌ನ ಮರಿಯಾನಿ ಪಟ್ಟಣದ ಸಮೀಪದ ಹಿಲಿಖಾ ಟೀ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದೆ.

ಗಂಡನನ್ನು ಕೊಲೆ ಮಾಡಿದ ಬಳಿಕ ಆ ಮಹಿಳೆ ಮರಿಯಾನಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪದಡಿ ಮಹಿಳೆ ಮತ್ತು ಅವರ ಕುಟುಂಬದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋರ್ಹತ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಶ್ವೇತಾಂಕ್ ಮಿಶ್ರಾ ತಿಳಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್​ ವರದಿ ಮಾಡಿದೆ. ಲಖಿಮೋನಿ ರವಿದಾಸ್ ಎಂದು ಗುರುತಿಸಲಾದ ಮಹಿಳೆ ತಾನೇ ತನ್ನ ಪತಿಯನ್ನು ಕೊಂದಿದ್ದೇನೆ ಎಂದು ಹೇಳಿದ್ದಾಳೆ. ನನ್ನ ಗಂಡ ಆಗಾಗ ಕುಡಿದು ಮನೆಗೆ ಬಂದು ಪೀಡಿಸುತ್ತಿದ್ದ. ನನಗೆ ಆತನ ಹಿಂಸೆಯನ್ನು ಸಹಿಸಲಾಗಲಿಲ್ಲ. ಹೀಗಾಗಿ, ಈ ಕೊಲೆ ಮಾಡಿದೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: Shocking News: ಬಸ್​ನಲ್ಲಿ ಮಗಳ ಮೈ ಮುಟ್ಟಿದ ಕುಡುಕನ ಮೂಗು ಮುರಿದ ತಾಯಿ

ನನ್ನ ಪತಿ ಪ್ರತಿದಿನ ಕುಡಿದ ಅಮಲಿನಲ್ಲಿ ನನಗೆ ಹೊಡೆಯುತ್ತಿದ್ದರು. ಆತನ ದೌರ್ಜನ್ಯ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ನಾನು ಆತನ ಕುತ್ತಿಗೆಯ ಬಳಿ ಹರಿತವಾದ ಆಯುಧದಿಂದ ಇರಿದಿದ್ದಾಳೆ. ಇದರಿಂದ ಆತ ಸಾವನ್ನಪ್ಪಿದ್ದಾನೆ. ನೆರೆಹೊರೆಯವರ ಪ್ರಕಾರ, ಅವರು ಸುಜಿತ್ ರವಿದಾಸ್ ಆತನ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದರು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದರು.

ಅಷ್ಟರಲ್ಲಾಗಲೇ ಆ ಮಹಿಳೆ ತಾನೇ ಗಂಡನನ್ನು ಕೊಲೆ ಮಾಡಿದ್ದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ. ಪೊಲೀಸರ ತಂಡವನ್ನು ಮನೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಅವರು ಸುಜಿತ್​ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ನಡೆಸಿ 13 ವರ್ಷದ ಬಾಲಕಿಯ ಕೊಲೆ; ಹರಿದ್ವಾರ ಹೆದ್ದಾರಿಯಲ್ಲಿ ಶವ ಪತ್ತೆ

ನಾವು ವ್ಯಕ್ತಿಯನ್ನು ಕೊಂದ ಮಹಿಳೆ ಮತ್ತು ಇನ್ನೊಬ್ಬ ಕುಟುಂಬದ ಸದಸ್ಯರನ್ನು ಬಂಧಿಸಿದ್ದೇವೆ. ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿದ್ದರೂ ಆಕೆ ಹೇಳುತ್ತಿರುವುದು ಸತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮಿಶ್ರಾ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕಡ್ಡಾಯ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ