ಚೆನ್ನೈ: ಕುಡಿದ ಮತ್ತಿನಲ್ಲಿ ಜಗಳವಾಡಿ ಗೆಳೆಯನನ್ನು ಕೊಂದ ಇಬ್ಬರು ಯುವಕರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಐಟಿ ಉದ್ಯೋಗಿಯಾಗಿದ್ದ ಚೆನ್ನೈನ ಮರೈಮಲೈ ನಗರದ ನಿವಾಸಿ 26 ವರ್ಷದ ಟಿ. ವಿಘ್ನೇಶ್ ಎಂಬಾತನನ್ನು ಕೊಲೆ ಮಾಡಿದ್ದ ಬಿಹಾರ ಮೂಲದ ವಿಶ್ವನಾಥನ್ (23) ಮತ್ತು ದಿಲ್ಕುಶ್ ಕುಮಾರ್ (22) ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಪ್ರಾಪ್ತನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಶೋಲಿಂಗನಲ್ಲೂರಿನ ಐಟಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವಿಘ್ನೇಶ್ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಾಪತ್ತೆಯಾಗಿದ್ದರು. ಆತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಮರೈಮಲೈ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಆತನ ಸ್ನೇಹಿತ ವಿಶ್ವನಾಥನನ್ನು ಬಂಧಿಸಲಾಗಿದೆ. ಆತನ ವಿಚಾರಣೆ ವೇಳೆ ವಿಘ್ನೇಶ್‌ನ ಮೊಬೈಲ್‌ಗೆ ಕೊನೆಯ ಕರೆ ವಿಶ್ವನಾಥನ್‌ನಿಂದ ಎಂದು ತಿಳಿದುಬಂದಿದೆ. ಅವರು ಆರಂಭದಲ್ಲಿ ತಾವು ಕೊಲೆ ಮಾಡಿಲ್ಲ ಎಂದು ನಿರಾಕರಿಸಿದರು. ಆದರೆ, ನಂತರ ಅದನ್ನು ಒಪ್ಪಿಕೊಂಡರು.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ನಡೆಸಿ 13 ವರ್ಷದ ಬಾಲಕಿಯ ಕೊಲೆ; ಹರಿದ್ವಾರ ಹೆದ್ದಾರಿಯಲ್ಲಿ ಶವ ಪತ್ತೆ
ಪೊಲೀಸರ ಪ್ರಕಾರ ವಿಘ್ನೇಶ್, ವಿಶ್ವನಾಥನ್ ಮತ್ತು ದಿಲ್ಕುಶ್ ಕುಮಾರ್ ಇತ್ತೀಚೆಗೆ ಒಟ್ಟಿಗೆ ಮದ್ಯ ಸೇವಿಸಿದ್ದರು. ಆಗ ವಿಘ್ನೇಶ್ ಮತ್ತು ದಿಲ್ಕುಶ್ ಕುಮಾರ್ ನಡುವೆ ವಾಗ್ವಾದ ನಡೆದಿತ್ತು. ಇದೇ ವೇಳೆ ವಿಘ್ನೇಶ್ ದಿಲ್ಕುಶ್ ಕುಮಾರ್ಗೆ ಥಳಿಸಿದ್ದಾನೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ವಿಶ್ವನಾಥನ್ ಮತ್ತು ದಿಲ್ಕುಶ್ ಕುಮಾರ್ ವಿಘ್ನೇಶ್‌ನನ್ನು ಕೊಲ್ಲಲು ಪ್ಲಾನ್ ಮಾಡಿದ್ದರು. ಆಗ ಕುಡಿತಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.
ನಂತರ ಮೃತದೇಹವನ್ನು ಮರೈಮಲೈ ನಗರದ ಕೆರೆಯ ದಡದಲ್ಲಿ ಹೂತು ಹಾಕಿದ್ದಾರೆ. ನಂತರ ದಿಲ್ಕುಶ್ ಕುಮಾರ್ ಅವರನ್ನು ಕೂಡ ಬಂಧಿಸಲಾಗಿದ್ದು, ಅವರೊಂದಿಗಿದ್ದ ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ