Crime News: ಆನ್​ಲೈನ್​ ಕ್ಲಾಸ್​ ವೇಳೆಯೇ ಶಿಕ್ಷಕನ ಹತ್ಯೆ; ಮೊಬೈಲ್​ನಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ!

ಹಲ್ಲೆ ವೇಳೆ ಜೂಮ್ ಸೆಷನ್ ನಡೆಸುತ್ತಿದ್ದ ಕೃಷ್ಣ ಕುಮಾರ್ ಯಾದವ್ ಅವರ ಮೊಬೈಲ್ ಫೋನ್ ಕೆಳಗೆ ಬಿದ್ದಿತು. ಆದರೆ ಮೊಬೈಲ್​ನಲ್ಲಿ ಎಲ್ಲವೂ ರೆಕಾರ್ಡ್​ ಆಗುತ್ತಲೇ ಇತ್ತು.

Crime News: ಆನ್​ಲೈನ್​ ಕ್ಲಾಸ್​ ವೇಳೆಯೇ ಶಿಕ್ಷಕನ ಹತ್ಯೆ; ಮೊಬೈಲ್​ನಲ್ಲಿ ಸೆರೆಯಾಯ್ತು ಸಂಪೂರ್ಣ ಘಟನೆ!
ಸಾಂದರ್ಭಿಕ ಚಿತ್ರ

Updated on: Feb 01, 2023 | 4:20 PM

ನೊಯ್ಡಾ: ಆನ್​ಲೈನ್​ನಲ್ಲಿ ತನ್ನ ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡುತ್ತಿದ್ದ ಶಿಕ್ಷಕನನ್ನು ಇಬ್ಬರು ಸೇರಿ ಕೊಲೆ (Murder) ಮಾಡಿದ್ದು, ಆ ಘಟನೆ ಆಕೆಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ (Uttar Pradesh) ಗೊಂಡಾ ಎಂಬಲ್ಲಿ ಸೋಮವಾರ ಸಂಜೆ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕನನ್ನು ಕೊಲೆ ಮಾಡಲಾಗಿದೆ. ಆನ್​ಲೈನ್ ಕ್ಲಾಸ್​​ನ (Online Class) ರೆಕಾರ್ಡಿಂಗ್ ಆಗುತ್ತಿದ್ದ ಕಾರಣ ಮೃತ ಶಿಕ್ಷಕನ ಮೊಬೈಲ್ ಫೋನ್‌ನಲ್ಲಿ ಕೊಲೆ ಮಾಡಿರುವ ದೃಶ್ಯ ಸೆರೆಯಾಗಿದೆ.

ಅಂಬೇಡ್ಕರ್‌ನಗರ ಮೂಲದ 35 ವರ್ಷದ ಕೃಷ್ಣಕುಮಾರ್ ಯಾದವ್ ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದು, ಸಂಜೆ ಗಣಿತ ಮತ್ತು ಹಿಂದಿಯಲ್ಲಿ ಪಾಠ ಮಾಡುತ್ತಿದ್ದರು. ಸೋಮವಾರ ಸಂಜೆ ಸಂದೀಪ್ ಕುಮಾರ್ ಮತ್ತು ಜಗ್ಗ ಮಿಶ್ರಾ ಎಂಬ ಆರೋಪಿಗಳು ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆದಾಗ ಶಿಕ್ಷಕ ಕೃಷ್ಣ ಕುಮಾರ್ ಒಬ್ಬ ಬಾಲಕಿಗೆ ಆನ್​ಲೈನ್​ನಲ್ಲಿ ಪಾಠ ಹೇಳುತ್ತಿದ್ದರು.

ಇದನ್ನೂ ಓದಿ: Crime News: ಅಪ್ಪ-ಅಮ್ಮ ಬೈದರೆಂದು ಮನೆಯಿಂದ ಓಡಿಹೋಗಿದ್ದ ಅಪ್ರಾಪ್ತೆ ಮೇಲೆ ರೈಲಿನಲ್ಲೇ ಅತ್ಯಾಚಾರ

ಹಲ್ಲೆ ವೇಳೆ ಜೂಮ್ ಸೆಷನ್ ನಡೆಸುತ್ತಿದ್ದ ಕೃಷ್ಣ ಕುಮಾರ್ ಯಾದವ್ ಅವರ ಮೊಬೈಲ್ ಫೋನ್ ಕೆಳಗೆ ಬಿದ್ದಿತು. ಆದರೆ ಮೊಬೈಲ್​ನಲ್ಲಿ ಎಲ್ಲವೂ ರೆಕಾರ್ಡ್​ ಆಗುತ್ತಲೇ ಇತ್ತು. ಆಗ ಅವರ ಮೇಲೆ ಆರೋಪಿಗಳಿಬ್ಬರು ದಾಳಿ ಮಾಡಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ರೆಕಾರ್ಡಿಂಗ್​ನಿಂದಾಗಿ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರಿಗೆ ಸಹಾಯವಾಯಿತು.

ಇದನ್ನೂ ಓದಿ: Murder: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; 18 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು

ಈ ಬಗ್ಗೆ ವಿಚಾರಣೆ ನಡೆಸಿದಾಗ ಸಂದೀಪ್‌ ಕುಮಾರ್‌ ತಪ್ಪೊಪ್ಪಿಕೊಂಡಿದ್ದಾನೆ. ತಾವು ಕೃಷ್ಣ ಕುಮಾರ್ ಅವರ ಸಹೋದರಿಯನ್ನು ಹಿಂಬಾಲಿಸುತ್ತಿದ್ದುದು ಗೊತ್ತಾಗಿ ಕೃಷ್ಣ ಕುಮಾರ್ ತಮ್ಮನ್ನು ಹೆದರಿಸಿದ್ದ. ಇನ್ನೊಮ್ಮೆ ನನ್ನ ತಂಗಿಗೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದ. ಇದರಿಂದ ಕೋಪಗೊಂಡು ಆತನನ್ನು ಕೊಲೆ ಮಾಡಿರುವುದಾಗಿ ಸಂದೀಪ್ ಹೇಳಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ