ಪಂಜಾಬ್: ಮದ್ಯಪಾನ ಮಾಡಬೇಡ ಎಂದಿದ್ದಕ್ಕೆ ಹೆತ್ತವರನ್ನೇ ಕೊಚ್ಚಿ ಕೊಂದ ಮಗ

|

Updated on: Nov 09, 2023 | 1:16 PM

ಕುಡಿತದ ಚಟವನ್ನು ಹೆಗಲೇರಿಸಿಕೊಂಡರೆ, ಸಂಬಂಧಗಳಿಗೆ ಕೊಳ್ಳಿ ಇಡಬೇಕಾದೀತು, ಕುಡಿದಾಗ ತಾವು ಏನು ಮಾಡುತ್ತಿದ್ದೇವೆ, ಯಾರನ್ನು ಬೈಯ್ಯುತ್ತಿದ್ದೇವೆ ಯಾವುದರ ಬಗ್ಗೆಯೂ ಪ್ರಜ್ಞೆ ಇರುವುದಿಲ್ಲ. ಅಮೃತಸರದಲ್ಲಿ ಹೆತ್ತವರನ್ನೇ ಮಗ ಹತ್ಯೆ ಮಾಡಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ. ಕುಡಿತ ಒಳ್ಳೆಯದಲ್ಲ ಬಿಟ್ಟು ಬಿಡು ಎಂದಿದ್ದಕ್ಕೆ ಪೋಷಕರನ್ನೇ ಆತ ಕೊಲೆ ಮಾಡಿದ್ದಾನೆ.

ಪಂಜಾಬ್: ಮದ್ಯಪಾನ ಮಾಡಬೇಡ ಎಂದಿದ್ದಕ್ಕೆ ಹೆತ್ತವರನ್ನೇ ಕೊಚ್ಚಿ ಕೊಂದ ಮಗ
ಅಪರಾಧ
Image Credit source: Indian Express
Follow us on

ಕುಡಿತದ ಚಟವನ್ನು ಹೆಗಲೇರಿಸಿಕೊಂಡರೆ, ಸಂಬಂಧಗಳಿಗೆ ಕೊಳ್ಳಿ ಇಡಬೇಕಾದೀತು, ಕುಡಿದಾಗ ತಾವು ಏನು ಮಾಡುತ್ತಿದ್ದೇವೆ, ಯಾರನ್ನು ಬೈಯ್ಯುತ್ತಿದ್ದೇವೆ ಯಾವುದರ ಬಗ್ಗೆಯೂ ಪ್ರಜ್ಞೆ ಇರುವುದಿಲ್ಲ. ಅಮೃತಸರದಲ್ಲಿ ಹೆತ್ತವರನ್ನೇ ಮಗ ಹತ್ಯೆ ಮಾಡಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ. ಕುಡಿತ ಒಳ್ಳೆಯದಲ್ಲ ಬಿಟ್ಟು ಬಿಡು ಎಂದಿದ್ದಕ್ಕೆ ಪೋಷಕರನ್ನೇ ಆತ ಕೊಲೆ ಮಾಡಿದ್ದಾನೆ.

ಕುಡಿಬೇಡ ಎಂದಿದ್ದಕ್ಕೆ ಹರಿತವಾದ ಆಯುಧಗಳಿಂದ ಹೆತ್ತವರನ್ನು ಕೊಚ್ಚಿ ಕೊಂದಿದ್ದಾನೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತರನ್ನು ಗುರ್ಮೀತ್ ಸಿಂಗ್ ಮತ್ತು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.

ಗ್ರಾಮದಲ್ಲಿ ಮದುವೆ ಕಾರ್ಯ ನಡೆಯುತ್ತಿತ್ತು, ಆ ಸಮಯದಲ್ಲಿ ಪ್ರೀತ್ಪಾಲ್ ಮದ್ಯ ಸೇವಿಸಿ ಬಂದಿದ್ದನು, ಹೀಗಾಗಿ ಪೋಷಕರು ಮದುವೆಗೆ ಹೋಗದಂತೆ ತಡೆದಿದ್ದರು.

ಮತ್ತಷ್ಟು ಓದಿ: ಕೋಲಾರದಲ್ಲಿ ಬಾಲಕನ ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!

ಇದರಿಂದ ಇಬ್ಬರಿಗೂ ತೀವ್ರವಾಗಿ ಥಳಿಸಿದ್ದಾನೆ. ಇದರಿಂದ ಗುರ್ಮೀತ್ ಸಿಂಗ್ ಮತ್ತು ಕುಲ್ವಿಂದರ್ ಕೌರ್ ಸಾವನ್ನಪ್ಪಿದ್ದಾರೆ. ಆರೋಪಿ ಪ್ರೀತ್ಪಾಲ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ