AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆಗೆ ಯತ್ನ, ಮನೆಗೆ ನುಗ್ಗಿ ಇಬ್ಬರ ಹತ್ಯೆ; ಕಮಿಷನರ್ ಕಮಲ್ ಪಂತ್ ಸ್ಥಳಕ್ಕೆ ದೌಡು

ದರೋಡೆ ಮಾಡುವ ಸಲುವಾಗಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಡರಾತ್ರಿ ಸುಮಾರು 1.30ಕ್ಕೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆಗೆ ಯತ್ನ, ಮನೆಗೆ ನುಗ್ಗಿ ಇಬ್ಬರ ಹತ್ಯೆ; ಕಮಿಷನರ್ ಕಮಲ್ ಪಂತ್ ಸ್ಥಳಕ್ಕೆ ದೌಡು
ಮಮತಾ ಬಸು ಮತ್ತು ದೇವ ವ್ರಥಾ ಮೆಹರ
Follow us
ಆಯೇಷಾ ಬಾನು
|

Updated on:Apr 08, 2021 | 12:55 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ದುಷ್ಕರ್ಮಿಗಳು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ 75 ವರ್ಷದ ಮಮತಾ ಬಸು ಮತ್ತು ದೇವ ವ್ರಥಾ ಮೆಹರ(41) ಎಂಬುವವರನ್ನು ಹತ್ಯೆಗೈದಿದ್ದಾರೆ.ಘಟನಾ ಸ್ಥಳಕ್ಕೆ ಎಫ್​ಎಸ್​ಎಲ್ ಮತ್ತು ಶ್ವಾನ ದಳ ಭೇಟಿ ನೀಡಿದೆ. ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದರೋಡೆ ಮಾಡುವ ಸಲುವಾಗಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಡರಾತ್ರಿ ಸುಮಾರು 1.30ಕ್ಕೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಡರೋಡೆ ನಡೆಸಲಿಕ್ಕೆಯೇ ಕೊಲೆ ಮಾಡಿರುವ ಶಂಕೆ ಉಂಟಾಗಿದೆ. ಇನ್ನು ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಡರೋಡೆಕೋರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Bengaluru Double murder

ಘಟನಾ ಸ್ಥಳಕ್ಕೆ ಎಫ್​ಎಸ್​ಎಲ್ ಮತ್ತು ಶ್ವಾನ ದಳ ಭೇಟಿ

ಇನ್ನು ಇಂತಹದ್ದೇ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಬೆಂಗಳೂರಿನ ಮತ್ತೊಂದು ದಿಕ್ಕಿನಲ್ಲಿರುವ ಯಲಹಂಕದಲ್ಲಿ ದರೋಡೆಕೋರರು ಮಾರಕಾಸ್ತ್ರಗಳನ್ನ ತೋರಿಸಿ ಮಹಿಳೆ, ಮಕ್ಕಳಿಗೆ ಬೆದರಿಸಿ ಮನೆಯಲ್ಲಿದ್ದವರನ್ನ ಕೂಡಿಹಾಕಿ ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಯಲಹಂಕ ತಾಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಅಚ್ಚಲಾಲ್ ವಿಶ್ವಕರ್ಮ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಮಂಕಿ ಕ್ಯಾಪ್ ಧರಿಸಿ ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿದ ಮೂವರು ಅಪರಿಚಿತರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Bengaluru Double murder

ಘಟನೆ ನಡೆದ ಸ್ಥಳ

ಸಿಸಿಟಿವಿಯಲ್ಲಿ ಸೆರೆಯಾಯ್ತು ಹಂತಕನ ಹೆಜ್ಜೆ ಘಟನೆ ನಡೆದ ಎದುರು ಮನೆಯ ಹೊರಗೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಓರ್ವ ವ್ಯಕ್ತಿ ಹತ್ಯೆ ನಡೆದ ಮನೆಗೆ ಬಂದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಕೊಲೆ ನಡೆದ ಮನೆಯಲ್ಲೂ ಸಹ ಸಿಸಿಟಿವಿ ಇತ್ತು. ಕೊಲೆ ನಡೆಸಿದ ಬಳಿಕ ಚಾಲಾಕಿ ಹಂತಕ ಸಿಸಿಟಿವಿ ಡಿವಿಆರ್ ಸಹ ತೆಗೆದುಕೊಂಡು ಹೋಗಿದ್ದಾನೆ.

Bengaluru Double murder

ಘಟನೆ ನಡೆದ ಮನೆ

Bengaluru Double murder

ಘಟನೆ ನಡೆದ ಸ್ಥಳ

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್ ಪಾಲು

(Dacoity Intention Double Murder in JP Nagar Puttenahalli)

Published On - 10:00 am, Thu, 8 April 21