ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ದನದ ಮಾಂಸ ತಿನ್ನಿಸಿದ ಯುವಕರು

|

Updated on: Sep 08, 2023 | 12:59 PM

ಉತ್ತರ ಪ್ರದೇಶದ ಹೋಟೆಲ್​ವೊಂದರಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಮುಸ್ಲಿಂ ಯುವಕರಿಬ್ಬರು ಅದನ್ನು ವಿಡಿಯೋ ಮಾಡಿಕೊಂಡು, ಆಕೆ ಮದುವೆಯಾಗಬೇಕಾಗಿದ್ದ ವರನಿಗೆ ಕಳುಹಿಸಿದ್ದಾರೆ. ಅಲ್ಲದೆ, ಆಕೆಗೆ ಒತ್ತಾಯವಾಗಿ ದನದ ಮಾಂಸ ತಿನ್ನಿಸಿದ್ದಾರೆ.

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ದನದ ಮಾಂಸ ತಿನ್ನಿಸಿದ ಯುವಕರು
ಪ್ರಾತಿನಿಧಿಕ ಚಿತ್ರ
Follow us on

ನೊಯ್ಡಾ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಬಳಿಕ ಇಬ್ಬರು ಮುಸ್ಲಿಂ ವ್ಯಕ್ತಿಗಳು, ಆ ಘಟನೆಯನ್ನು ವಿಡಿಯೋ ಮಾಡಿ, ಆಕೆಗೆ ಬಲವಂತವಾಗಿ ದನದ ಮಾಂಸವನ್ನು ತಿನ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಆರೋಪಿಗಳ ಸ್ನೇಹಿತೆಯಾಗಿದ್ದ ಮುಸ್ಲಿಂ ಮಹಿಳೆಯೂ ಈ ಕೃತ್ಯಕ್ಕೆ ಸಹಾಯ ಮಾಡಿದ್ದಳು.

ಮುಸ್ಲಿಂ ಮಹಿಳೆ ತನ್ನಿಬ್ಬರು ಸ್ನೇಹಿತರನ್ನು ಹೋಟೆಲ್​ಗೆ ಕರೆದಿದ್ದಳು. ಅಲ್ಲಿ ಆಕೆ ದಲಿತ ಮಹಿಳೆಯನ್ನು ಕರೆಸಿದ್ದಳು. ಆಕೆಯ ಮೇಲೆ ಮುಸ್ಲಿಂ ಯುವಕರಿಬ್ಬರು ಅತ್ಯಾಚಾರ ನಡೆಸಿದ್ದಾರೆ. ಬಿ ಫಾರ್ಮಾ ವಿದ್ಯಾರ್ಥಿ ಶೋಯೆಬ್ ಮತ್ತು ಕ್ಷೌರಿಕನಾಗಿ ಕೆಲಸ ಮಾಡುವ ನಾಜಿಮ್ ಎಂದು ಗುರುತಿಸಲಾದ ಆರೋಪಿಗಳು ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ತಂಗಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ ದುಷ್ಟ ಅಣ್ಣನಿಗೆ ರಕ್ಷಾ ಬಂಧನದಂದೇ ಶಿಕ್ಷೆ ಪ್ರಕಟಿಸಿದ ಹೈಕೋರ್ಟ್​

ಅದಕ್ಕೆ ಆಕೆ ಒಪ್ಪದಿದ್ದಾಗ ಆ ಮಹಿಳೆಯ ಜೊತೆ ಮದುವೆ ನಿಶ್ಚಯವಾಗಿದ್ದ ವರನಿಗೆ ಆ ವಿಡಿಯೋವನ್ನು ಕಳುಹಿಸಿದ್ದಾರೆ. ಬಳಿಕ ಸಿಕ್ಕಿ ಬೀಳುತ್ತೇವೆಂಬ ಭಯದಲ್ಲಿ ನಾಜಿಮ್ ಅವರ ಅಂಗಡಿ ಇರುವ ಕಾಶ್ಮೀರಕ್ಕೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ನಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆ ದಲಿತ ಮಹಿಳೆ ತನ್ನ ಮುಸ್ಲಿಂ ಸ್ನೇಹಿತೆಯಿಂದ ಸ್ವಲ್ಪ ಹಣವನ್ನು ಸಾಲ ಪಡೆದಿದ್ದಳು. ನಂತರ ಅದನ್ನು ಹಿಂದಿರುಗಿಸಲು ಬಯಸಿದ್ದಳು. ಅದಕ್ಕಾಗಿ ಆಕೆಯನ್ನು ಭೇಟಿಯಾಗಲು ಸೆಪ್ಟೆಂಬರ್ 2ರಂದು ಹೋಟೆಲ್​ಗೆ ಬಂದಿದ್ದಳು. ಆಗ ಆ ಮುಸ್ಲಿಂ ಮಹಿಳೆ ತನ್ನಿಬ್ಬರು ಗೆಳೆಯರನ್ನು ಕರೆಸಿ, ಸಾಮೂಹಿಕ ಅತ್ಯಾಚಾರಕ್ಕೆ ಪ್ರಚೋದನೆ ನೀಡಿದ್ದಾಳೆ ಎನ್ನಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ