ಉತ್ತರ ಪ್ರದೇಶ: ಹಿಂದೂ ಯುವತಿಯನ್ನು ಪ್ರೇಮಿಸಿದ ಮುಸ್ಲಿಂ ಯುವಕನ ಹೆತ್ತವರನ್ನು ಹೊಡೆದುಕೊಂದ ಜನ

ಗ್ರಾಮಸ್ಥರ ಪ್ರಕಾರ ಮೃತ ದಂಪತಿಯ ಪುತ್ರ ಹಾಗೂ ಶೌಕತ್ ರಾಂಪಾಲ್ ಅವರ ಪುತ್ರಿ ರೂಬಿ ನಡುವೆ ಪ್ರೇಮ ಸಂಬಂಧವಿತ್ತು. ಶೌಕತ್ 2020 ರಲ್ಲಿ ರೂಬಿಯನ್ನು ಅಪಹರಿಸಿದ್ದರು. ಆಗ ರೂಬಿ ಅಪ್ರಾಪ್ತ ವಯಸ್ಸಿನವಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಶೌಕತ್ ನನ್ನು ಜೈಲಿಗೆ ಕಳುಹಿಸಿದ್ದರು. ಇದಾದ ನಂತರ ಮತ್ತೆ ಜೂನ್‌ನಲ್ಲಿ ರೂಬಿಯನ್ನು ಅಪಹರಿಸಿ ಮದುವೆಯಾದರು ಎಂದು ಚಕ್ರೇಶ್ ಮಿಶ್ರಾ ಹೇಳಿದ್ದಾರೆ.

ಹತ್ಯೆಗೀಡಾದ ದಂಪತಿImage Credit source: NDTV
Follow us
ರಶ್ಮಿ ಕಲ್ಲಕಟ್ಟ
|

Updated on:Aug 20, 2023 | 11:38 AM

ಸೀತಾಪುರ: ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ (Sitapur) ಮುಸ್ಲಿಂ ದಂಪತಿಯನ್ನು ಅಕ್ಕಪಕ್ಕದ ಮನೆಯವರು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹೊಡೆದು ಕೊಂದ ಪ್ರಕರಣ ವರದಿ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಸಂತ್ರಸ್ತೆಯ ಮಗ ಮತ್ತು ಆರೋಪಿಗಳ ಮಗಳ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ ನಡೆದ ದಾಳಿಯಲ್ಲಿ ದಂಪತಿಗಳಾದ ಅಬ್ಬಾಸ್ ಮತ್ತು ಅವರ ಪತ್ನಿ ಕಮರುಲ್ ನಿಶಾ ಸ್ಥಳದಲ್ಲೇ ಸಾವಿಗೀಡಾದಿದ್ದು, ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಅಬ್ಬಾಸ್ ಅವರ ಮಗ ಪಕ್ಕದ ಮನೆಯ ಹುಡುಗಿಯೊಂದಿಗೆ ಓಡಿಹೋಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಬ್ಬಾಸ್ ಪುತ್ರನನ್ನು ಜೈಲಿಗೆ ಕಳುಹಿಸಲಾಗಿತ್ತು ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಅಬ್ಬಾಸ್ ಅವರ ಮಗ ಜೈಲಿನಿಂದ ಹೊರಬಂದಾಗ, ಕುಟುಂಬದ ಕೆಲವು ಸದಸ್ಯರು ದಂಪತಿಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ ಮೃತ ದಂಪತಿಯ ಪುತ್ರ ಹಾಗೂ ಶೌಕತ್ ರಾಂಪಾಲ್ ಅವರ ಪುತ್ರಿ ರೂಬಿ ನಡುವೆ ಪ್ರೇಮ ಸಂಬಂಧವಿತ್ತು. ಶೌಕತ್ 2020 ರಲ್ಲಿ ರೂಬಿಯನ್ನು ಅಪಹರಿಸಿದ್ದರು. ಆಗ ರೂಬಿ ಅಪ್ರಾಪ್ತ ವಯಸ್ಸಿನವಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಶೌಕತ್ ನನ್ನು ಜೈಲಿಗೆ ಕಳುಹಿಸಿದ್ದರು. ಇದಾದ ನಂತರ ಮತ್ತೆ ಜೂನ್‌ನಲ್ಲಿ ರೂಬಿಯನ್ನು ಅಪಹರಿಸಿ ಮದುವೆಯಾದರು ಎಂದು ಚಕ್ರೇಶ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ:  ರಾಜೀವ್ ಗಾಂಧಿ 79ನೇ ಜನ್ಮದಿನ: ಲಡಾಖ್‌ನ ಪಾಂಗಾಂಗ್ ಸರೋವರ ದಡದಲ್ಲಿ ಗೌರವ ನಮನ ಸಲ್ಲಿಸಿದ ರಾಹುಲ್ ಗಾಂಧಿ

ತನಿಖೆ ನಡೆಯುತ್ತಿದೆ.ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sun, 20 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್