ರಾಜೀವ್ ಗಾಂಧಿ 79ನೇ ಜನ್ಮದಿನ: ಲಡಾಖ್‌ನ ಪಾಂಗಾಂಗ್ ಸರೋವರ ದಡದಲ್ಲಿ ಗೌರವ ನಮನ ಸಲ್ಲಿಸಿದ ರಾಹುಲ್ ಗಾಂಧಿ
Rajiv Gandhi's79th birth anniversary: ರಾಹುಲ್ ಗಾಂಧಿ ಶೇರ್ ಮಾಡಿದ ವಿಡಿಯೊ ಕ್ಲಿಪ್ ರಾಜೀವ್ ಗಾಂಧಿ ಕ್ಯಾಮೆರಾವನ್ನು ನಿರ್ವಹಿಸುತ್ತಿರುವ ಚಿತ್ರದೊಂದಿಗೆ ಪ್ರಾರಂಭವಾಗುತ್ತದೆ.ರಾಹುಲ್ ಭೇಟಿ ನೀಡುತ್ತಿರುವ ಪ್ಯಾಂಗಾಂಗ್ ಲೇಕ್ ಸೇರಿದಂತೆ ಅವರು ಸೆರೆಹಿಡಿದ ಹಲವಾರು ಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ವಿಡಿಯೊ ತುಣುಕು ರಾಜೀವ್ ಗಾಂಧಿಯವರ ಮಾತಿನೊಂದಿಗೆ ಕೊನೆಗೊಳ್ಳುತ್ತದೆ. ಬಲಿಷ್ಠ, ಸ್ವತಂತ್ರ, ಸ್ವಾವಲಂಬಿ ಮತ್ತು ಮನುಕುಲದ ಸೇವೆಯಲ್ಲಿ ವಿಶ್ವದ ರಾಷ್ಟ್ರಗಳ ಮುಂಚೂಣಿಯಲ್ಲಿರುವ ಭಾರತದ ಕನಸನ್ನು ನಾನು ಹೊಂದಿದ್ದೇನೆ ಎಂದು ಹೇಳುವ ರಾಜೀವ್ ಗಾಂಧಿಯ ಮಾತು ಇಲ್ಲಿದೆ.
ದೆಹಲಿ ಆಗಸ್ಟ್ 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ 79ನೇ ಜನ್ಮದಿನವಾದ (79th birth anniversary) ಇಂದು (ಭಾನುವಾರ) ಕಾಂಗ್ರೆಸ್ (Congress) ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಅಪ್ಪ ಕ್ಲಿಕ್ಕಿಸಿದ ಚಿತ್ರಗಳನ್ನು ಜೋಡಿಸಿ ಒಂದು ನಿಮಿಷದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪಾಪಾ, ನೀವು ಭಾರತಕ್ಕಾಗಿ ಕಂಡ ಕನಸುಗಳು ಈ ಅಮೂಲ್ಯ ನೆನಪುಗಳಲ್ಲಿ ಹರಿಯುತ್ತಿವೆ. ಪ್ರತಿಯೊಬ್ಬ ಭಾರತೀಯನ ಹೋರಾಟ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳುವುದು, ಭಾರತಮಾತೆಯ ಧ್ವನಿಯನ್ನು ಆಲಿಸುವುದು ನೀವು ತೋರಿಸಿಕೊಟ್ಟ ದಾರಿ ಎಂದು ವಿಡಿಯೊ ಶೇರ್ ಮಾಡಿದ ರಾಹುಲ್ ಬರೆದುಕೊಂಡಿದ್ದಾರೆ.
ವಿಡಿಯೊ ಕ್ಲಿಪ್ ರಾಜೀವ್ ಗಾಂಧಿ ಕ್ಯಾಮೆರಾವನ್ನು ನಿರ್ವಹಿಸುತ್ತಿರುವ ಚಿತ್ರದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ರಾಹುಲ್ ಗಾಂಧಿ ಭೇಟಿ ನೀಡುತ್ತಿರುವ ಪ್ಯಾಂಗಾಂಗ್ ಲೇಕ್ ಸೇರಿದಂತೆ ಅವರು ಸೆರೆಹಿಡಿದ ಹಲವಾರು ಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ವಿಡಿಯೊ ತುಣುಕು ರಾಜೀವ್ ಗಾಂಧಿಯವರ ಮಾತಿನೊಂದಿಗೆ ಕೊನೆಗೊಳ್ಳುತ್ತದೆ. ಬಲಿಷ್ಠ, ಸ್ವತಂತ್ರ, ಸ್ವಾವಲಂಬಿ ಮತ್ತು ಮನುಕುಲದ ಸೇವೆಯಲ್ಲಿ ವಿಶ್ವದ ರಾಷ್ಟ್ರಗಳ ಮುಂಚೂಣಿಯಲ್ಲಿರುವ ಭಾರತದ ಕನಸನ್ನು ನಾನು ಹೊಂದಿದ್ದೇನೆ ಎಂದು ಹೇಳುವ ರಾಜೀವ್ ಗಾಂಧಿಯ ಮಾತು ಇಲ್ಲಿದೆ.
पापा, आपकी आंखों में भारत के लिए जो सपने थे, इन अनमोल यादों से छलकते हैं।
आपके निशान मेरा रास्ता हैं – हर हिंदुस्तानी के संघर्षों और सपनों को समझ रहा हूं, भारत मां की आवाज़ सुन रहा हूं। pic.twitter.com/VqkbxoPP7l
— Rahul Gandhi (@RahulGandhi) August 20, 2023
ಆಗಸ್ಟ್ 20, 1944ರಂದು ಜನಿಸಿದ ರಾಜೀವ್ ಗಾಂಧಿ,1984 ರಿಂದ 1989 ರವರೆಗೆ ಭಾರತದ 7 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಗಾಂಧಿ ಕುಟುಂಬದ ಸದಸ್ಯರು ನವದೆಹಲಿಯಲ್ಲಿನ ಅವರ ಸ್ಮಾರಕ ‘ವೀರ್ ಭೂಮಿ’ಯಲ್ಲಿ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
#WATCH | Congress MP Rahul Gandhi pays tribute to his father and former Prime Minister Rajiv Gandhi on his birth anniversary from the banks of Pangong Tso in Ladakh pic.twitter.com/OMXWIXR3m2
— ANI (@ANI) August 20, 2023
ಮೋಟಾರು ಸೈಕಲ್‌ನಲ್ಲಿ 130 ಕಿಲೋಮೀಟರ್‌ಗೂ ಹೆಚ್ಚು ಕ್ರಮಿಸಿದ ನಂತರ ರಾಹುಲ್ ಗಾಂಧಿ ಪ್ಯಾಂಗಾಂಗ್ ಸರೋವರವನ್ನು ತಲುಪಿದ್ದು ರಾಜೀವ್ ಗಾಂಧಿ ಅವರ ಜನ್ಮದಿನದ ಆಚರಣೆಗಾಗಿ ರಾತ್ರಿ ಅಲ್ಲಿ ತಂಗಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಸ್ಥಳ, ದಿನಾಂಕ ಮುಂದೂಡಿಕೆ; ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್ ಗಾಂಧಿಯಿಂದ ಚಾಲನೆಗೆ ಸಿದ್ಧತೆ
ಭಾನುವಾರ, ಅವರು ರಾತ್ರಿ ತಂಗಲು ಮೋಟಾರ್‌ಸೈಕಲ್‌ನಲ್ಲಿ ನುಬ್ರಾ ಕಣಿವೆಗೆ ತೆರಳುತ್ತಿದ್ದಾರೆ. ಮಾರ್ಗದಲ್ಲಿ, ಅವರು ಅಂಗಡಿಯವರು ಮತ್ತು ರೈತರು ಸೇರಿದಂತೆ ಸಾಮಾನ್ಯರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ವಕ್ತಾರ ತ್ಸೇರಿಂಗ್ ನಮ್ಗ್ಯಾಲ್ ಹೇಳಿದ್ದಾರೆ.
ಲಡಾಖ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, ಇಲ್ಲಿ ಚೀನಾ ಭೂಮಿಯನ್ನು ಕಸಿದುಕೊಂಡಿದೆ, ಅದರ ಆತಂಕ ಸಹಜವಾಗಿಯೇ ಇಲ್ಲಿದೆ. ಚೀನಾದ ಸೇನೆ ಈ ಪ್ರದೇಶಕ್ಕೆ ನುಗ್ಗಿ ಅವರ ಗೋಮಾಳವನ್ನು ಕಿತ್ತುಕೊಂಡಿದೆ ಎಂದು ಜನರು ಹೇಳಿದ್ದಾರೆ. ಆದರೆ ಒಂದು ಇಂಚು ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಪ್ರಧಾನಿ ಹೇಳಿದರು, ಆದರೆ ಇದು ಅಲ್ಲ ನಿಜ, ನೀವು ಇಲ್ಲಿ ಯಾರನ್ನಾದರೂ ಕೇಳಬಹುದು. ಲಡಾಖ್‌ನ ಜನರಿಂದ ಸಾಕಷ್ಟು ದೂರುಗಳು ಬಂದವು, ಅವರಿಗೆ ದೊರೆತ ಸ್ಥಾನಮಾನದಿಂದ ಅವರು ಸಂತೋಷವಾಗಿಲ್ಲ, ಅವರಿಗೆ ಪ್ರಾತಿನಿಧ್ಯ ಬೇಕು. ನಿರುದ್ಯೋಗ ಸಮಸ್ಯೆ ಇದೆ. ರಾಜ್ಯವನ್ನು ಅಧಿಕಾರಶಾಹಿಯಿಂದ ನಡೆಸಬಾರದು ಎಂದು ಜನರು ಹೇಳುತ್ತಿದ್ದಾರೆ. ರಾಜ್ಯವು ಜನರ ಧ್ವನಿಯಿಂದ ನಡೆಯಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:46 am, Sun, 20 August 23