ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್

G20 Digital Economy Ministers meeting; ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ಪ್ರಧಾನಿ ಮೋದಿ ನಂಬಿಕೆ ಇಟ್ಟಿದ್ದಾರೆ ಎಂದ ಅಶ್ವಿನಿ ವೈಷ್ಣವ್, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರವರ್ತಕ ಕಂಪನಿಗಳಿಗೆ ಸ್ಥಳಾವಕಾಶ ಒದಗಿಸುವ ಮೂಲಕ ಆವಿಷ್ಕಾರಗಳ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಿರುವುದನ್ನು ಉಲ್ಲೇಖಿಸಿದರು.

ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆ; ಭಾರತದ ಪ್ರಮುಖ ಆದ್ಯತೆಗಳ ಬಗ್ಗೆ ಬೆಳಕುಚೆಲ್ಲಿದ ಅಶ್ವಿನಿ ವೈಷ್ಣವ್
ಜಿ 20 ಡಿಜಿಟಲ್ ಎಕಾನಮಿ ಸದಸ್ಯರಾಷ್ಟ್ರಗಳ ಸಚಿವರ ಸಭೆಯಲ್ಲಿ ಅಶ್ವಿನಿ ವೈಷ್ಣವ್
Follow us
TV9 Web
| Updated By: Ganapathi Sharma

Updated on: Aug 19, 2023 | 4:58 PM

ಬೆಂಗಳೂರು, ಆಗಸ್ಟ್ 19: ಭಾರತದ ಜಿ20 (G20) ಅಧ್ಯಕ್ಷತೆಯಲ್ಲಿ ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್‌ ಆದ್ಯತೆಯ ಮೇರೆಗೆ ಪರಿಗಣಿಸಬೇಕಾಗಿರುವ ಪ್ರಮುಖ ಮೂರು ಕ್ಷೇತ್ರಗಳ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಶನಿವಾರ ಪ್ರಸ್ತಾಪಿಸಿದರು. ಜಿ 20 ಡಿಜಿಟಲ್ ಎಕಾನಮಿ ಸದಸ್ಯರಾಷ್ಟ್ರಗಳ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ (DPI), ಡಿಜಿಟಲ್ ಆರ್ಥಿಕತೆ ಭದ್ರತೆ ಮತ್ತು ಡಿಜಿಟಲ್ ಸ್ಕೇಲಿಂಗ್ ಸದ್ಯ ಪರಿಗಣಿಸಬೇಕಾಗಿರುವ ಪ್ರಮುಖ ಆದ್ಯತೆಯ ಕ್ಷೇತ್ರಗಳಾಗಿವೆ. ಇವು ಮೂರು ಸಹ ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಈ ಆದ್ಯತೆಗಳು ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರಿಗೂ ಸಮಾನವಾಗಿ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ವಿಶಾಲ ಜಾಗತಿಕ ಕಾರ್ಯಸೂಚಿಯೊಂದಿಗೆ ಹೊಂದಾಣಿಕೆಯಾಗುತ್ತವೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ಪ್ರಧಾನಿ ಮೋದಿ ನಂಬಿಕೆ ಇಟ್ಟಿದ್ದಾರೆ ಎಂದ ಅಶ್ವಿನಿ ವೈಷ್ಣವ್, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಕೆಲವು ಪ್ರವರ್ತಕ ಕಂಪನಿಗಳಿಗೆ ಸ್ಥಳಾವಕಾಶ ಒದಗಿಸುವ ಮೂಲಕ ಆವಿಷ್ಕಾರಗಳ ಕೇಂದ್ರವಾಗಿ ಬೆಂಗಳೂರು ಹೊರಹೊಮ್ಮಿರುವುದನ್ನು ಉಲ್ಲೇಖಿಸಿದರು.

ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ವ್ಯಾಖ್ಯಾನಿಸುವ ವಿಷಯಗಳ ಬಗ್ಗೆ ಉದ್ದೇಶಪೂರ್ವಕವಾಗಿ ನಾವು ಒಟ್ಟುಗೂಡಿದ್ದೇವೆ. ವಿಶ್ವದ ಕೆಲವು ಕಂಪನಿಗಳಿಗೆ ಬೆಂಗಳೂರು ನೆಲೆಯಾಗಿದೆ ಎಂದು ಅವರು ಹೇಳಿದರು.

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಅಭೂತಪೂರ್ವ ಡಿಜಿಟಲ್ ಪರಿವರ್ತನೆಗೆ 2015 ರಲ್ಲಿ ಆರಂಭಿಸಲಾಗಿದ್ದ ಡಿಜಿಟಲ್ ಇಂಡಿಯಾ ಉಪಕ್ರಮವೇ ಕಾರಣ ಎಂದು ಅವರು ಹೇಳಿದರು.

ಭಾರತದ ಡಿಜಿಟಲ್ ರೂಪಾಂತರವು ಹೊಸತನದ ಕುರಿತಾದ ಅಚಲ ನಂಬಿಕೆ, ತ್ವರಿತ ಅನುಷ್ಠಾನ ಮತ್ತ ಆ ನಿಟ್ಟಿನಲ್ಲಿ ದೇಶವು ಹೊಂದಿರುವ ಬದ್ಧತೆಯಿಂದ ಸಾಧ್ಯವಾಗಿದೆ ಎಂದೂ ಪ್ರಧಾನಿ ಹೇಳಿದರು.

ದೇಶದ 850 ಮಿಲಿಯನ್ ಇಂಟರ್ನೆಟ್ ಬಳಕೆದಾರರು ವಿಶ್ವದಲ್ಲೇ ಅತಿಕಡಿಮೆ ದರದ ಡೇಟಾ ಸೇವೆಯನ್ನು ಆನಂದಿಸುತ್ತಿದ್ದಾರೆ. ಇದು ಭಾರತದ ಡಿಜಿಟಲ್ ರೂಪಾಂತರದ ಪ್ರಮಾಣ, ವೇಗ ಮತ್ತು ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: 9 ವರ್ಷದಲ್ಲಿ “ಜನ್ ಧನ್ ಖಾತೆ”ಯ ಸದುಪಯೋಗ ಪಡೆದುಕೊಂಡ 50 ಕೋಟಿ ಜನ

ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್, ಯುಪಿಐ ಪಾವತಿ ವ್ಯವಸ್ಥೆಗಳಡಿ ಪ್ರತಿ ತಿಂಗಳು ಸುಮಾರು 10 ಶತಕೋಟಿ ವಹಿವಾಟುಗಳು ನಡೆಯುತ್ತವೆ. ಇದು ಜಾಗತಿಕ ಸಮುದಾಯದಲ್ಲಿ ನಡೆಯುವ ಒಟ್ಟು ಡಿಜಿಟಲ್ ಆರ್ಥಿಕ ವಹಿವಾಟಿನ ಶೇ 45 ರಷ್ಟಾಗಿದೆ ಎಂದು ಅವರು ತಿಳಿಸಿದರು.

ನೇರ ನಗದು ವರ್ಗಾವಣೆಯಿಂದಾಗಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುತ್ತಿವೆ. ಸೋರಿಕೆಗೆ ತಡೆಯಾಗಿದೆ. ಸಂಪೂರ್ಣ ಡಿಜಿಟಲೀಕರಣಗೊಂಡ ತೆರಿಗೆ ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಇ-ಆಡಳಿತವನ್ನು ಉತ್ತೇಜಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್