ಮಂಗಳೂರು: ಸೂರತ್ಕಲ್ ಸಮೀಪದ ಎನ್.ಐ.ಟಿ.ಕೆ ಬೀಚ್ ನಲ್ಲಿ ಹಾಡಹಗಲೇ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಜುಲೈ 27 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿಯು ತನ್ನ ಸಹಪಾಠಿ ವಿದ್ಯಾರ್ಥಿಯ ಜೊತೆ ಒಟ್ಟಿಗೆ ಬೀಚ್ ಬಳಿ ಇದ್ದರು. ಅದನ್ನು ಮುನಾಜ್ ಅಹ್ಮದ್ (30) ಎಂಬ ದುಷ್ಕರ್ಮಿ ವೀಡಿಯೊ ಮಾಡಿಕೊಂಡಿದ್ದಾನೆ. ಬಳಿಕ ಮುನಾಜ್ ಅಹ್ಮದ್ ಪದವಿ ವ್ಯಾಸಂಗದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದನ್ನೂ ಕೂಡ ವೀಡಿಯೊ ಮಾಡಿಕೊಂಡಿದ್ದಾನೆ. ಈ ಮಧ್ಯೆ ಹುಡುಗಿಯ ಜೊತೆ ಬಂದಿದ್ದ ಹುಡುಗ ಪರಾರಿಯಾಗಿದ್ದಾನೆ.
ಕಾಮುಕ ಮುನಾಜ್ ಅದಾದ ಮೇಲೆ ಸದರಿ ವಿದ್ಯಾರ್ಥಿನಿಗೆ ಪದೇ ಪದೇ ಕರೆ ಮಾಡಿ, ಬೆತ್ತಲೆ ಫೋಟೋ ಕೇಳಿದ್ದಾನೆ. ಬಾಧಿತ ಯುವತಿಯು ಕೊನೆಗೆ ಸುರತ್ಕಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುನಾಜ್ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಬೆಂಗಳೂರು ಮನೆಯಲ್ಲಿ ಕಳವು ಪ್ರಕರಣ: ಮನೆಗೆಲಸದವ ಒಡಿಶಾದಲ್ಲಿ ಅರೆಸ್ಟ್
ಬೆಂಗಳೂರು: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ (M.B.Patil) ಅವರ ನಿವಾಸದಲ್ಲಿ ನಡೆದ 1 ಲಕ್ಷ 20 ಸಾವಿರ ರೂಪಾಯಿ ವಸ್ತುಗಳ ಕಳ್ಳತನ ಪ್ರಕರಣ ಸಂಬಂಧ ಮನೆಯ ಕೆಲಸಗಾರನನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಎಂ.ಬಿ. ಪಾಟೀಲ್ ಅವರ ನಿವಾಸದಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ ಬಂಧಿತ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯನ್ನು ಕೈಗೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಜಯಂತ್ ದಾಸ್ ಲಾಂಡ್ರಿ ಕೆಲಸ ಮಾಡುತ್ತಿದ್ದನು. ಆದರೆ ಕಳೆದ ತಿಂಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಕರೆನ್ಸಿ, ಬ್ರಾಂಡೆಡ್ ವಾಚ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಯಂತ್ ದಾಸ್ ಕಳವು ಮಾಡಿ ಪರಾರಿಯಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆ ಎಂ.ಬಿ.ಪಾಟೀಲ್ ಅವರು ಅಡುಗೆ ಕೆಲಸಕ್ಕೆ ಇದ್ದ ವ್ಯಕ್ತಿ ಮೂಲಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು, ಜಯಂತ್ನನ್ನು ಒಡಿಶಾದಲ್ಲಿ ಬಂಧಿಸಿದ್ದಾರೆ.
Published On - 8:44 pm, Mon, 1 August 22