Delhi Murder: ಮಹಿಳೆಯನ್ನು ಹತ್ಯೆ ಮಾಡಿ, ಟೆರೇಸ್​ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಆರೋಪಿ

ಮಹಿಳೆಯನ್ನು ಹತ್ಯೆ ಮಾಡಿ, ತನ್ನ ಮನೆಯ ಟೆರೇಸ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯ ದಾಬ್ರಿ ಪ್ರದೇಶದಲ್ಲಿ ನಡೆದಿದೆ.

Delhi Murder: ಮಹಿಳೆಯನ್ನು ಹತ್ಯೆ ಮಾಡಿ, ಟೆರೇಸ್​ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಆರೋಪಿ
ಫೈರಿಂಗ್
Image Credit source: Science ABC

Updated on: Jul 28, 2023 | 8:31 AM

ಮಹಿಳೆಯನ್ನು ಹತ್ಯೆ ಮಾಡಿ, ತನ್ನ ಮನೆಯ ಟೆರೇಸ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯ ದಾಬ್ರಿ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಮನೆಗೆ ತಲುಪಿದಾಗ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ದೆಹಲಿ ಪೊಲೀಸರ ಪ್ರಕಾರ, ಮೃತ ರೇಣು ಮತ್ತು ಆರೋಪಿ ಆಶಿಶ್ ಪರಸ್ಪರ ಮೊದಲೇ ಪರಿಚಯವಿದ್ದರು, ಆರೋಪಿ ಆಶಿಶ್ ತನ್ನ ಮನೆಯ ಮೇಲ್ಛಾವಣಿಯ ಮೇಲೆ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ರೇಣು ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ ಆರೋಪಿ ಆಶಿಶ್ ಮಹಿಳೆಯ ಮನೆಯ ಸಮೀಪ ವಾಸವಾಗಿದ್ದ. ರೇಣು ಮತ್ತು ಆರೋಪಿ ಆಶಿಶ್ ಕೆಲವು ವರ್ಷಗಳ ಹಿಂದೆ ಜಿಮ್‌ನಲ್ಲಿ ಭೇಟಿಯಾಗಿದ್ದರು.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿದೆ, ನಂತರ ಆರೋಪಿಯ ಮನೆಗೆ ತಲುಪಿದಾಗ ಪೊಲೀಸರು ದಿಗ್ಭ್ರಮೆಗೊಂಡರು.

ಮತ್ತಷ್ಟು ಓದಿ: Jharkhand: ಮಗ ಪ್ರೀತಿ ಮಾಡಿದ್ದ ಯುವತಿಯನ್ನು ಅರೆ ಬೆತ್ತಲೆಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪೋಷಕರು

ಆರೋಪಿ ಈಗಾಗಲೇ ತನ್ನ ಮನೆಯ ಟೆರೇಸ್ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. 42ರ ಹರೆಯದ ಮಹಿಳೆಯ ಹತ್ಯೆಯ ಬಗ್ಗೆ ಮಾಹಿತಿ ಬಂದ ಕೂಡಲೇ ನಾವು ಸ್ಥಳಕ್ಕೆ ತಲುಪಿದ್ದೇವೆ ಎಂದು ದ್ವಾರಕಾ ಡಿಸಿಪಿ ಹರ್ಷವರ್ಧನ್ ಹೇಳಿದ್ದಾರೆ.

ಆಕೆ ಗೃಹಿಣಿಯಾಗಿದ್ದಳು ಮತ್ತು ವೈಶಾಲಿ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಕೂಡಲೇ ಆರೋಪಿಯನ್ನು ಗುರುತಿಸಿ ಸ್ಥಳಕ್ಕೆ ಆಗಮಿಸಿ ಆತನನ್ನು ಹಿಡಿಯಲು ನೋಡಿದಾಗ ಮನೆಯ ಟೆರೇಸ್ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮಹಿಳೆಯ ಹತ್ಯೆಯ ಹಿಂದಿನ ಉದ್ದೇಶವಾಗಲಿ, ವ್ಯಕ್ತಿಯ ಆತ್ಮಹತ್ಯೆಯ ಹಿಂದಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ