ಬೆಂಗಳೂರು: ಬೊಗಳಿದ್ದಕ್ಕೆ ನಾಯಿಯನ್ನು ಡಿಲೆವರಿ ಬಾಯ್ ಹೊಡೆದು ಸಾಯಿಸಿರುವ ಘಟನೆ ಹೆಚ್ಎಸ್ಆರ್ ಲೇಔಟ್ನ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್ ಬಳಿ ನಡೆದಿದೆ.
ಕಳೆದ ಬುಧವಾರ ಫುಡ್ ಡಿಲೆವರಿ ಮಾಡಲು ತೇಜ ಎಂಬುವನ ಬಂದಿದ್ದ. ಈ ವೇಳೆ ಡಿಲೆವರಿ ಬಾಯ್ ತೇಜನನ್ನು ನೋಡಿ ನಾಯಿಗಳು ಬೊಗಳಿವೆ. ಈ ವೇಳೆ ಕಟ್ಟಿಗೆ ಹಿಡಿದು ನಾಯಿಗಳನ್ನ ಅಟ್ಟಾಡಿಸಿದ್ದಾನೆ. ಆಗ ತೇಜನ ಕೈಗೆ ನಾಯಿ ಮರಿಯೊಂದು ಸಿಕ್ಕಿಹಾಕಿಕೊಂಡಿದೆ. ನಾಯಿಯನ್ನು ಮನ ಬಂದಂತೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಹರೀಶ್ ಎಂಬುವರು ದೂರು ನೀಡಿದ್ದಾರೆ. ಡಿಲೆವರಿ ಬಾಯ್ ತೇಜ ವಿರುದ್ಧ ಐಪಿಸಿ ಸೆಕ್ಷನ್ 428ರಡಿಯಲ್ಲಿ ಪ್ರಕರಣ ದಾಖಲಾಗಿದೆ.