ಬೆಂಗಳೂರು: ಹೊಸ ವರ್ಷಾಚರಣೆ ಎಂದು ನಗರದಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿನ್ನೆ ಹೊಸ ವರ್ಷಾಚರಣೆ ಸಂಭ್ರಮ ವೇಳೆ ನೂರಾರು ಡ್ರಿಂಕ್ & ಡ್ರೈವ್ ಪ್ರಕರಣಗಳು ದಾಖಲಾಗಿದ್ದು, ಡ್ರಿಂಕ್ & ಡ್ರೈವ್ ಕೇಸ್ನಲ್ಲಿ ಒಂದೇ ರಾತ್ರಿಗೆ ಲಕ್ಷಗಟ್ಟಲೇ ದಂಡ ಹರಿದು ಬಂದಿದೆ.
ಬೆಂಗಳೂರು ನಗರದಲ್ಲಿ 426 ಡ್ರಿಂಕ್ & ಡ್ರೈವ್ ಪ್ರಕರಣ ದಾಖಲಾಗಿದೆ. ಪೂರ್ವ ವಿಭಾಗದಲ್ಲಿ 99, ಪಶ್ಚಿಮ ವಿಭಾಗದಲ್ಲಿ 254, ಉತ್ತರ ವಿಭಾಗದಲ್ಲಿ 73 ಕೇಸ್ ದಾಖಲಾಗಿದೆ. ನಗರದ ಮೂರು ಸಂಚಾರಿ ವಿಭಾಗದಲ್ಲಿ ಒಟ್ಟು 426 ಡ್ರಿಂಕ್ & ಡ್ರೈವ್ ಕೇಸ್ ಆಗಿದೆ. ದಾಖಲಾದ 426 ಪ್ರಕರಣಗಳಲ್ಲಿ ಎಲ್ಲಾ 426 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸದ್ಯ ಕುಡಿದು ವಾಹನ ಚಲಾಯಿಸಿರೋ 426 ಮಂದಿಯ ಡ್ರೈವಿಂಗ್ ಲೈಸೆನ್ಸ್ ರದ್ದಾಗುವ ಸಾದ್ಯತೆಯಿದೆ.
Published On - 12:42 pm, Wed, 1 January 20