IPS ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ: ಸಿಐಡಿ ಸೈಬರ್​ ಠಾಣೆಗೆ ರಮೇಶ್ ಬಾನೋತ್‌ ದೂರು

|

Updated on: Feb 01, 2021 | 10:55 AM

ಐಪಿಎಸ್ ಅಧಿಕಾರಿ ಹೆಸರು ದುರ್ಬಳಕೆ ಮಾಡಿಕೊಂಡು ಅಧಿಕಾರಿಯ ನಿಕಟವರ್ತಿಗಳ ಬಳಿ ಖಾಸಗಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿಐಡಿ ಎಸ್​ಐಟಿಯ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾನೂತ್ ತಮ್ಮ ಫೇಸ್ ಬುಕ್ ಖಾತೆ ಪರಿಶೀಲನೆ ವೇಳೆ ಈ ನಕಲಿ ಅಕೌಂಟ್ ಪತ್ತೆಯಾಗಿದೆ.

IPS ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ: ಸಿಐಡಿ ಸೈಬರ್​ ಠಾಣೆಗೆ ರಮೇಶ್ ಬಾನೋತ್‌ ದೂರು
ಐಪಿಎಸ್ ಅಧಿಕಾರಿ ರಮೇಶ್ ಬಾನೂತ್
Follow us on

ಬೆಂಗಳೂರು: ಪೊಲೀಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ದುಷ್ಕರ್ಮಿಗಳು, ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿರುವ ಕೃತ್ಯ ನಗರದಲ್ಲಿ ಬೆಳಕಿಗೆ ಬಂದಿದೆ.

IPS ಅಧಿಕಾರಿ ರಮೇಶ್ ಬಾನೂತ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳು, ಐಪಿಎಸ್ ಅಧಿಕಾರಿ ಹೆಸರು ದುರ್ಬಳಕೆ ಮಾಡಿಕೊಂಡು ಅಧಿಕಾರಿಯ ನಿಕಟವರ್ತಿಗಳ ಬಳಿ ಖಾಸಗಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಿಐಡಿ ಎಸ್​ಐಟಿಯ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾನೂತ್ ತಮ್ಮ ಫೇಸ್ ಬುಕ್ ಖಾತೆ ಪರಿಶೀಲನೆ ವೇಳೆ ಈ ನಕಲಿ ಅಕೌಂಟ್ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ, ಸಿಐಡಿ ಸೈಬರ್​ಗೆ ಈ ಬಗ್ಗೆ ದೂರು ನೀಡಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕೆ ಕೃತ್ಯಕ್ಕೆ ಎಸಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಫೇಸ್​ಬುಕ್​ನಲ್ಲಿ ನಕಲಿ ಅಕೌಂಟ್ ತೆರೆದು ಹಣ ದೋಚುತ್ತಿದ್ದ ನಕಲಿ ಪೊಲೀಸ್ ಕಮಿಷನರ್ ಅಂದರ್​, ಯಾವೂರಲ್ಲಿ?

Published On - 10:51 am, Mon, 1 February 21