ಒಡವೆ ವಾಪಸ್ ತರುವಂತೆ ಮಾಲೀಕ ಕಳಿಸಿದಾಗ ಕೈಚಳಕ: 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್ ಬ್ರದರ್ಸ್!
ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್ ಇಬ್ಬರ ಫೋನ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್!
ಬೆಂಗಳೂರು: 1 ಕೆ.ಜಿ 87 ಗ್ರಾಂ ಚಿನ್ನಾಭರಣ ಕದ್ದು ಸಹೋದರರಿಬ್ಬರು ಪರಾರಿಯಾಗಿರುವ ಘಟನೆ ನಗರದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಸಹೋದರರ ರಾಬರಿ ಪ್ರಕರಣ? ಅಂದ ಹಾಗೆ, ಸಹೋದರರಾದ ಧನ್‌ವೀರ್ ಹಾಗೂ ಆತನ ಅಣ್ಣ ಮಹಾವೀರ್ ನಗರ್ತಪೇಟೆಯ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಿದ್ರು. ಸಂಕಿತ್ ಜೈನ್ ಎಂಬುವವರ M.P.ಜ್ಯುವೆಲರ್ಸ್ ಕ್ರಾಫ್ಟ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು.
ಕಳೆದ ಕೆಲವು ದಿನಗಳ ಹಿಂದೆ, ಅಂಗಡಿ ಮಾಲೀಕ ಸಂಕಿತ್, ಬಿಕ್ಸು ಎಂಬುವವರ ಚಿನ್ನದ ಅಂಗಡಿಗೆ 1 ಕೆ.ಜಿ 87 ಗ್ರಾಂ ಚಿನ್ನಾಭರಣವನ್ನ ಸ್ಯಾಂಪಲ್ ಆಗಿ ನೀಡಿದ್ರು. ಈ ವೇಳೆ, ಇದನ್ನು ವಾಪಸ್ ತರುವಂತೆ ಸಂಕಿತ್ ಸಹೋದರರಿಗೆ ಹೇಳಿದ್ರು.
ಅಂತೆಯೇ, ಧನ್‌ವೀರ್ ಮತ್ತು ಮಹಾವೀರ್ ಬಿಕ್ಸು ಅವರ ಬಳಿ ತೆರಳಿ ಚಿನ್ನ ತೆಗೆದುಕೊಂಡರು. ಆದರೆ, ಅಲ್ಲಿಂದ ಹೊರಟ ಆಸಾಮಿಗಳು ಮತ್ತೆ ಎಲ್ಲೂ ಪತ್ತೆನೇ ಇಲ್ಲ. ಸಂಕಿತ್ ಇಬ್ಬರ ಫೋನ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್!
ಈ ಸಂಬಂಧ ಸಂಕಿತ್ ಜೈನ್ ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕಿಲಾಡಿ ಬ್ರದರ್ಸ್ಗಾಗಿ ಶೋಧ ನಡೆಸುತ್ತಿದ್ದಾರೆ.
ಅಡ್ರೆಸ್ ಕೇಳೋ ನೆಪದಲ್ಲಿ.. ಹೊಲದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಕಿರಾತಕರು!