ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ನಕಲಿ ಐಎಎಸ್‌ ಅಧಿಕಾರಿ ಪೊಲೀಸರ ಅತಿಥಿ

|

Updated on: Nov 16, 2019 | 8:56 PM

ರಾಮನಗರ: ನಕಲಿ ಐಎಎಸ್‌ ಅಧಿಕಾರಿ ಸೇರಿ ಓರ್ವ ಗನ್ ಮ್ಯಾನ್, ಇಬ್ಬರು ಸಹಚರರನ್ನು ಚನ್ನಪಟ್ಟಣ ಪುರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ 37 ವರ್ಷದ ಮಹಮ್ಮದ್ ಸಲ್ಮಾನ್ ಬಂಧಿತ ನಕಲಿ ಐಎಎಸ್ ಅಧಿಕಾರಿ. ಈತನ ಜೊತೆ ಗನ್ ಮ್ಯಾನ್ ಕಮ್ ಡ್ರೈವರ್ ರವಿ, ಸಹಚರರಾದ ಮಂಜು, ಗೋವಿಂದರಾಜು ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಸಲ್ಮಾನ್ ಇನೋವಾ ಕಾರಿನಲ್ಲಿ ಕರ್ನಾಟಕ ಸರ್ಕಾರ ಎಂದು ಬೋರ್ಡ್‌ ಹಾಕಿಕೊಂಡು ನಕಲಿ ಐಎಎಸ್ ಅಧಿಕಾರಿಯಾಗಿ ಚನ್ನ ಪಟ್ಟಣದ ಐಬಿಗೆ ಬಂದಿದ್ದಾನೆ. ಆಫಿಸ್​ಗೆ ತಾಲೂಕಿನ […]

ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ನಕಲಿ ಐಎಎಸ್‌ ಅಧಿಕಾರಿ ಪೊಲೀಸರ ಅತಿಥಿ
Follow us on

ರಾಮನಗರ: ನಕಲಿ ಐಎಎಸ್‌ ಅಧಿಕಾರಿ ಸೇರಿ ಓರ್ವ ಗನ್ ಮ್ಯಾನ್, ಇಬ್ಬರು ಸಹಚರರನ್ನು ಚನ್ನಪಟ್ಟಣ ಪುರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ 37 ವರ್ಷದ ಮಹಮ್ಮದ್ ಸಲ್ಮಾನ್ ಬಂಧಿತ ನಕಲಿ ಐಎಎಸ್ ಅಧಿಕಾರಿ. ಈತನ ಜೊತೆ ಗನ್ ಮ್ಯಾನ್ ಕಮ್ ಡ್ರೈವರ್ ರವಿ, ಸಹಚರರಾದ ಮಂಜು, ಗೋವಿಂದರಾಜು ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಸಲ್ಮಾನ್ ಇನೋವಾ ಕಾರಿನಲ್ಲಿ ಕರ್ನಾಟಕ ಸರ್ಕಾರ ಎಂದು ಬೋರ್ಡ್‌ ಹಾಕಿಕೊಂಡು ನಕಲಿ ಐಎಎಸ್ ಅಧಿಕಾರಿಯಾಗಿ ಚನ್ನ ಪಟ್ಟಣದ ಐಬಿಗೆ ಬಂದಿದ್ದಾನೆ. ಆಫಿಸ್​ಗೆ ತಾಲೂಕಿನ ಬೆಳಕೆರೆ ಗ್ರಾಮದ, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರನ್ನ ಕರೆಸಿಕೊಂಡಿದ್ದಾನೆ.

ಬೆಳಕೆರೆ ಗ್ರಾಮದ ಗೋಮಾಳಕ್ಕೆ ತಿದ್ದುಪಡಿ ಮಾಡಲು ತಾಕೀತು ಮಾಡಿದ್ದಾನೆ. ಐಎಎಸ್ ಅಧಿಕಾರಿ ಬಂದಿರುವ ವಿಷಯ ತಿಳಿದು ತಹಶೀಲ್ದಾರ್ ಸುದರ್ಶನ್ ಭೇಟಿಗೆ ಬಂದ ವೇಳೆ ಅಧಿಕಾರಿ ನಕಲಿ ಎಂಬುದು ಬೆಳಕಿಗೆ ಬಂದಿದೆ.

ನಕಲಿ ಐಎಎಸ್ ಅಧಿಕಾರಿ ಮಹಮ್ಮದ್ ಸಲ್ಮಾನ್​ಗೆ ನೀವು ಯಾವ ಬ್ಯಾಚ್​ನ ಅಧಿಕಾರಿ ಎಂದು ಪ್ರಶ್ನಿಸಿದಾಗ ತಡವರಿಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಮಯ ಪ್ರಜ್ಞೆಯಿಂದ ತಹಶಿಲ್ದಾರ್ ಸುದರ್ಶನ್ ನಕಲಿ ಐಎಎಸ್ ಅಧಿಕಾರಿಯಾದ ಮಹಮ್ಮದ್ ಸಲ್ಮಾನ್​ನನ್ನ ಹಿಡಿದು ಚನ್ನಪಟ್ಟಣ ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಕಲಿ ಐಎಎಸ್ ಅಧಿಕಾರಿ ರಾಜ್ಯದ ಹಲವೆಡೆ ಇದೇ ರೀತಿ ಮೋಸ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಾರ್ ಸೇರಿದಂತೆ ಹಲವಾರು ಸೀಲ್, ಪೊಲೀಸ್ ಲಾಠಿ, ಟೋಪಿ, ಲ್ಯಾಪ್ ಟಾಪ್, ಮೂರು ಮೊಬೈಲ್, ಕ್ಯಾಮೆರಾ, ಫೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published On - 8:55 pm, Sat, 16 November 19