ಬೆಂಗಳೂರು: ಫಾಸ್ಟ್‌ಟ್ಯಾಗ್ ರೀಚಾರ್ಜ್‌ಗೆ ಲಿಂಕ್ ನೀಡಿ ವಂಚನೆಗೊಳಗಾಗಿರುವ ಸಂಬಂಧ ಮೊದಲ ದೂರು ದಾಖಲಾಗಿದೆ. ಗ್ರಾಹಕ ಸೇವಾ ಕೇಂದ್ರದ ನೆಪದಲ್ಲಿ ವಂಚನೆ ಮಾಡಿರುವ ಬಗ್ಗೆ ರಾಹುಲ್ ಎಂಬುವರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಹುಲ್ ಎಂಬುವರು ಫಾಸ್ಟ್‌ಟ್ಯಾಗ್ ರೀಚಾರ್ಜ್ನಲ್ಲಿ ತಾಂತ್ರಿಕ ದೋಷ ಎದುರಿಸಿದ್ದರು. ಈ ಬಗ್ಗೆ ಬ್ಯಾಂಕ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಮಸ್ಯೆ ಕುರಿತು ದೂರು ನೀಡಿದ್ರು. ಟ್ವೀಟ್ ನೋಡಿ ಕಸ್ಟಮರ್ ಕೇರ್ ಹೆಸರಿನಲ್ಲಿ ರಾಹುಲ್ಗೆ ಕರೆ ಮಾಡಿದ್ದ ವಂಚಕರು, ತಾವು ಕಳುಹಿಸಿರುವ ರಿಚಾರ್ಜ್ ಲಿಂಕ್ಗೆ ಭೇಟಿ ನೀಡಿ ಯುಪಿಐ ಪಿನ್ ದಾಖಲಿಸಲು ಹೇಳಿದ್ದರು. ಯುಪಿಐ ಪಿನ್ ದಾಖಲಿಸುತ್ತಿದ್ದಂತೆ ಹಂತ ಹಂತವಾಗಿ 50 ಸಾವಿರ ರೂಪಾಯಿ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ.
ಫಾಸ್ಟ್‌ಟ್ಯಾಗ್ ರೀಚಾರ್ಜ್ ವೇಳೆ 50 ಸಾವಿರ ರೂ. ಡೆಬಿಟ್ ಆಗಿದೆ ಎಂದು ಮೋಸ ಹೋದ ರಾಹುಲ್ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Published On - 1:55 pm, Sat, 18 January 20