ದಾವಣಗೆರೆ: ವಿನಾಯಕ ನಗರದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕ ಆಶೋಕ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2018ರಲ್ಲಿ ಬಕ್ಲಾಸ್ ಗೇಮ್ ಆಡುವಾಗ ಮಾತಿಗೆ ಮಾತು ಬೆಳೆದು ಭರತ್ ಎಂಬುವನನ ಕೊಲೆಯಾಗಿತ್ತು. ಆಗ ಆಶೋಕ್ ಹಾಗೂ ಆತನ ಸ್ನೇಹಿತರು ಭರತ್ನನ್ನು ಕೊಲೆ ಮಾಡಿದ್ದರು. ಕೆಲ ದಿನಗಳ ಹಿಂದಷ್ಟೇ ಆಶೋಕ್ ಜೈಲಿನಿಂದ ಬಂದಿದ್ದ. ಹೀಗಾಗಿ ಯುವಕರ ಗುಂಪೊಂದು ಅಶೋಕ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ. ಹಲ್ಲೆಗೊಳಗಾದ ಆಶೋಕ್ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.