Crime News: ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ಅಪ್ಪ-ಮಗ ಇಬ್ಬರೂ ಅರೆಸ್ಟ್

ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದ್ದಕ್ಕೆ ಗಲಾಟೆ ಶುರುವಾಗಿದ್ದು ಅದೇ ಅಪಾರ್ಟ್‌ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಪುತ್ರ ಅವಿನಾಶ್ ಕಿಣಿ ವಾಗ್ವಾದ ವೇಳೆ ವಿನಾಯಕ್ ಕಾಮತ್ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

Crime News: ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ಅಪ್ಪ-ಮಗ ಇಬ್ಬರೂ ಅರೆಸ್ಟ್
ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ಅಪ್ಪ-ಮಗ ಇಬ್ಬರೂ ಅರೆಸ್ಟ್
Updated By: ಸಾಧು ಶ್ರೀನಾಥ್​

Updated on: Nov 04, 2021 | 10:24 AM

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿಯ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ರಥಬೀದಿಯ ವೀರವೆಂಕಟೇಶ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಚೂರಿಯಿಂದ ಎದೆಗೆ ಇರಿದು ವಿನಾಯಕ್ ಕಾಮತ್(44) ಕೊಲೆ ಮಾಡಲಾಗಿದೆ.

ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದ್ದಕ್ಕೆ ಗಲಾಟೆ ಶುರುವಾಗಿದ್ದು ಅದೇ ಅಪಾರ್ಟ್‌ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಪುತ್ರ ಅವಿನಾಶ್ ಕಿಣಿ ವಾಗ್ವಾದ ವೇಳೆ ವಿನಾಯಕ್ ಕಾಮತ್ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳು ಕೃತ್ಯ ಫ್ಲಾಟ್ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿಯನ್ನು ಪೊಲೀಸರು ಬಂಧಿಸಿದ್ದು ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯದ ವೇಳೆ ಕುಸಿದು ಬಿದ್ದು ಪೌರಕಾರ್ಮಿಕ ಸಾವು
ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಮುರುಗೇಶ್(40) ಎಂಬ ಪೌರಕಾರ್ಮಿಕ ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮೃತ ಮುರುಗೇಶ್ ಶವ ಇಟ್ಟು ನಗರಸಭೆ ಮುಂಭಾಗ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ನೇರ ನೇಮಕಾತಿ ಮೂಲಕ ಪೌರಕಾರ್ಮಿಕನಾಗಿ ಆಯ್ಕೆಯಾಗಿದ್ದ ಮುರುಗೇಶ್ಗೆ ಯಾವುದೇ ಪರಿಹಾರ ಸಿಗದ ಹಿನ್ನೆಲೆ ಕುಟುಂಬಸ್ಥರ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ಮುರುಗೇಶ್ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಮುರುಗೇಶ್ ಹುಣಸೂರು ನಗರಸಭೆಯಲ್ಲಿ ಹದಿನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ನೇರ ನೇಮಕಾತಿ ಮೂಲಕ 50 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನೇರ ನೇಮಕಾತಿ ಮೂಲಕ ಆಯ್ಕೆಯಾದ 4 ಮಂದಿ ಮೃತಪಟ್ಟಿದ್ದಾರೆ. ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೋಡೆತ್ತಿನ ಸ್ಪರ್ಧೆ ವೇಳೆ ವ್ಯಕ್ತಿ ಮೇಲೆ ನುಗ್ಗಿದ ಎತ್ತಿನ ಗಾಡಿ
ಚಿಕ್ಕಮಗಳೂರು ತಾಲೂಕಿನ ಕಡೂರು ಪಟ್ಟಣದ APMC ಆವರಣದಲ್ಲಿ ನಡೆದ ಜೋಡೆತ್ತಿನ ಸ್ಪರ್ಧೆ ವೇಳೆ ವ್ಯಕ್ತಿ ಮೇಲೆ ಎತ್ತಿನ ಗಾಡಿ ನುಗ್ಗಿದೆ. ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೀರಭದ್ರ ಯುವಕ ಸಂಘದಿಂದ ಆಯೋಜಿಸಲಾದ ಜೋಡೆತ್ತಿನ ಸ್ಪರ್ಧೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ 70 ಕ್ಕೂ ಹೆಚ್ಚು ಸ್ಪರ್ಧಿಗಳು ಆಗಮಿಸಿದ್ರು. ಆದ್ರೆ ಖುಷ್ ಖುಷಿಯಾಗಿ ನಡೆಯುತ್ತಿದ್ದ ಸ್ಪರ್ಧೆಯಲ್ಲಿ ಇಂತಹದೊಂದು ದುರ್ಘಟನೆ ನಡೆದಿದೆ.

ಕೌಟುಂಬಿಕ ಕಲಹ ಹಿನ್ನೆಲೆ, ಪತ್ನಿ ಆತ್ಮಹತ್ಯೆಗೆ ಶರಣು
ಬೆಂಗಳೂರು ಉತ್ತರ ತಾಲೂಕಿನ ಕಿರ್ಲೋಸ್ಕರ್ ಲೇಔಟ್‌ನಲ್ಲಿ ಶ್ರುತಿ(30) ನೇಣಿಗೆ ಶರಣಾಗಿದ್ದಾರೆ. 3 ವರ್ಷಗಳ ಹಿಂದೆ ವಿನಯ್ ಜತೆ ಶ್ರುತಿ ವಿವಾಹವಾಗಿತ್ತು. ನಿನ್ನೆ ರಾತ್ರಿ ವಿನಯ್, ಶ್ರುತಿ ಆರಾಧ್ಯ ಮಧ್ಯೆ ಜಗಳವಾಗಿತ್ತು. ಜಗಳದ ಬಳಿಕ ಪತ್ನಿ ಶ್ರುತಿ ಆರಾಧ್ಯ ನೇಣಿಗೆ ಶರಣಾಗಿದ್ದಾರೆ. ಶ್ರುತಿ ಪತಿ ವಿನಯ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದ್ದು ಶ್ರುತಿ ಪೋಷಕರ ದೂರು ನೀಡಿರುವ ಹಿನ್ನೆಲೆ ವಿನಯ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ವರ್ಷದ ಗಂಡು ಮಗು ಈಗ ಅನಾಥವಾಗಿದೆ.

ಇದನ್ನೂ ಓದಿ: Crime News: ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಬರ್ಬರ ಕೊಲೆ

Published On - 9:55 am, Thu, 4 November 21