ನೆಲಮಂಗಲ: ಜಮೀನು ವಿವಾದ ಹಿನ್ನೆಲೆಯಲ್ಲಿ ಅಪ್ಪ, ಚಿಕ್ಕಪ್ಪನಿಂದಲೇ ಮಗನ ಬರ್ಬರ ಹತ್ಯೆಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಳ್ಳಿಯಲ್ಲಿ ದುಷ್ಕೃತ್ಯ ನಡೆದಿದೆ. ಹರೀಶ್(32)ಅಪ್ಪ, ಚಿಕ್ಕಪ್ಪನಿಂದ ಕೊಲೆಗೊಳಗಾದ ಮೃತ ದುರ್ದೈವಿ.
ಆರೋಪಿಗಳಾದ ಅಪ್ಪ ದೊಡ್ಡಯ್ಯ ಹಾಗೂ ಚಿಕ್ಕಪ್ಪ ರಾಮಕೃಷ್ಣ ಇಬ್ಬರು ಹರೀಶ್ನನ್ನು ಜಮೀನಿನಲ್ಲೆ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಈ ಹಿಂದೆ ಸಹ ಜಮೀನು ವಿವಾದದಲ್ಲಿ ಕೊಲೆ ಯತ್ನ ನಡೆದು ಹರೀಶ್ ಬಚಾವ್ ಆಗಿದ್ದ. ಮೃತ ಹರೀಶ್ನ ತಾತ ಇವನ ಹೆಸರಲ್ಲಿ ಆಸ್ತಿ ವಿಲ್ ಮಾಡಿದ್ದರು.
ಹೀಗಾಗಿ ತಂದೆ ಹಾಗೂ ಚಿಕ್ಕಪ್ಪನ ಮುಂದೆ ಆಗಾಗ ದರ್ಪ ತೋರುತ್ತಿದ್ದ. ಆಸ್ತಿ ಕೈ ಮೀರಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೇವಲ ಆಸ್ತಿಗಾಗಿ ತನ್ನ ಸ್ವಂತ ಮಗನನ್ನೆ ಕೊಲ್ಲಲು ತಂದೆ ಮುಂದಾಗಿದ್ದು ನಿಜಕ್ಕೂ ಹೀನಾಯ ಸಂಗತಿ.