ಕೋಲಾರ: ಚಾಕುವಿನಿಂದ ಇರಿದು ತಂದೆಯಿಂದಲೇ ಮಗನ ಕೊಲೆ

|

Updated on: Mar 28, 2023 | 10:07 AM

ಚಾಕುವಿನಿಂದ ಇರಿದು ತಂದೆಯೇ ಮಗನನ್ನು ಕೊಲೆ ಮಾಡಿರುವ ಅಮಾನುಷ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.

ಕೋಲಾರ: ಚಾಕುವಿನಿಂದ ಇರಿದು ತಂದೆಯಿಂದಲೇ ಮಗನ ಕೊಲೆ
ಸಾಂದರ್ಭಿಕ ಚಿತ್ರ
Follow us on

ಕೋಲಾರ: ಚಾಕುವಿನಿಂದ (Kinfe) ಇರಿದು ತಂದೆಯೇ ಮಗನನ್ನು ಕೊಲೆ (Murder) ಮಾಡಿರುವ ಅಮಾನುಷ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ. ಪುತ್ರ ಭುವನ್(9) ಮೃತ ದುರ್ದೈವಿ. ತಂದೆ ಬಾಲಸುಬ್ರಹ್ಮಣ್ಯಂ ಕೊಲೆಗೈದ ಆರೋಪಿ. ನಂಗಲಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಆರೋಪಿ ಬಾಲಸುಬ್ರಹ್ಮಣ್ಯಂ ಈ ಹಿಂದೆ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ‌ ಬಂದಿದ್ದನು. ಈಗ ಚಾಕುವಿನಿಂದ ಚುಚ್ಚಿ ಮಗನನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನು ನಂಗಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಬಾಗಲಕೋಟೆ: ಮಾರ್ಚ 27 ರಂದು ಪ್ರಿಯತಮೆ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ, ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗುಡೂರು ಗ್ರಾಮದಲ್ಲಿ ನಡೆದಿತ್ತು. ಪ್ರಿಯತಮೆ ನೇತ್ರಾವತಿ ವಡ್ಡರ್​(21), ಅಫ್ಜಲ್ ಸೊಲ್ಲಾಪುರ (27) ಗಾಯಾಳುಗಳು. ನೇತ್ರಾವತಿ ವಡ್ಡರ ಅವರ ದೇಹ ಶೇ 70 ರಷ್ಟು ಸುಟ್ಟಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಫ್ಜಲ್ ಸೊಲ್ಲಾಪುರ ಅವರನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ತುಮಕೂರು: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ, ಇಬ್ಬರು ಶಿಕ್ಷಕರು ಅಮಾನತು

ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಅಫ್ಜಲ್

​ನೇತ್ರಾವತಿ ವಡ್ಡರ್ ಅವರನ್ನು, ಅಫ್ಜಲ್ ಸೊಲ್ಲಾಪುರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ನೇತ್ರವಾತಿ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರಿಂದ ಕ್ರೋದಿತನಾಗಿದ್ದ ಅಫ್ಜಲ್​, ಮಾ.27 ರಂದು ನೇತ್ರಾವತಿ ಕೋಳಿ ಫಾರಂಗೆ ತೆರಳುತ್ತಿದ್ದ ವೇಳೆ, ಎಳೆದೊಯ್ದು ಕೃತ್ಯ ಎಸಗಿದ್ದನು. ಇದನ್ನು ಕಂಡು ಸ್ಥಳಕ್ಕೆ ಧಾವಿಸಿದ ಸ್ಥಳಿಯರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನೇತ್ರಾವತಿಯ ದೇಹ ಶೇ 70 ರಷ್ಟು ಸುಟ್ಟಿದೆ. ಘಟನಾ ಸ್ಥಳಕ್ಕೆ ಅಮೀನಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ