ಬಾಗಲಕೋಟೆ: ಒಣ ದ್ರಾಕ್ಷಿಯನ್ನು ತಮಗೆ ಮಾರಾಟ ಮಾಡದ ಹಿನ್ನೆಲೆ ಗುಂಪೊಂದು ರೈತನ ಮೇಲೆ ಹಲ್ಲೆ
ಒಣ ದ್ರಾಕ್ಷಿಯನ್ನು ತಮಗೆ ಮಾರಾಟ ಮಾಡದ ಹಿನ್ನೆಲೆ ಮಹಾರಾಷ್ಟ್ರದ ಥಾಸಗಾವ ಮೂಲದ 8 ಜನರ ಗುಂಪೊಂದು ಮಾಜಿ ಯೋಧ, ರೈತನ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ: ಒಣ ದ್ರಾಕ್ಷಿಯನ್ನು (Dry Grapes) ತಮಗೆ ಮಾರಾಟ ಮಾಡದ ಹಿನ್ನೆಲೆ ಮಹಾರಾಷ್ಟ್ರದ (Maharashtra) ಥಾಸಗಾವ ಮೂಲದ 8 ಜನರ ಗುಂಪೊಂದು ಮಾಜಿ ಯೋಧ (Ex- Servicemen), ರೈತನ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ (Jamakandi) ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಮಾಜಿ ಯೋಧ ಶ್ರೀಧರ ಕಾಸೇರ ಹಲ್ಲೆಗೊಳಗಾದ ರೈತ. ರೈತ ಶ್ರೀಧರ ಕಾಸೇರನನ್ನು ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಧರ ಕಾಸೇರ ದ್ರಾಕ್ಷಿ ಬೆಳೆಗಾರ ಹಾಗೂ ದ್ರಾಕ್ಷಿ ಘಟಕದ ಮಾಲಿಕರಾಗಿದ್ದಾರೆ. ಒಣ ದ್ರಾಕ್ಷಿಯನ್ನು ಪ್ರತಿ ವರ್ಷ ಮಹಾರಾಷ್ಟ್ರದ ಥಾಸಗಾವನ ಅನಿಲ ಪಾಟಿಲ್ ವ್ಯಾಪಾರಸ್ಥನಿಗೆ ಒಣ ದ್ರಾಕ್ಷಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಇತರೆ ರೈತರಿಂದಲೂ ಒಣ ದ್ರಾಕ್ಷಿಯನ್ನು ಖರೀದಿಸಿ ಅನಿಲ ಪಾಟಿಲ್ ಅವರಿಗೆ ಮಾರುತ್ತಿದ್ದರು. ಆದರೆ ಈ ವರ್ಷ ಬೇರೆ ಕಡೆ ಒಣ ದ್ರಾಕ್ಷಿಯನ್ನು ಮಾರಾಟ ಮಾಡಿದ್ದರು.
ಇದನ್ನೂ ಓದಿ: ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಣೆಕಟ್ಟಿ ಕೆರೆಯಲ್ಲಿ ಗರ್ಭಿಣಿ ಶವ ಪತ್ತೆ
ಇದರಿಂದ ಕೋಪಗೊಂಡ ಅನಿಲ್ ಪಾಟೀಲ್ ಮತ್ತು ಆತನ 7 ಜನರ ಗುಂಪು ಕಾರಿನಲ್ಲಿ ತೊದಲಬಾಗಿ ಗ್ರಾಮಕ್ಕೆ ಬಂದು ಗಲಾಟೆ ಮಾಡಿದೆ. ನಂತರ ಕೋಲು, ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಗಾಳಿಯಲ್ಲಿ 2 ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದರಿಂದ ಶ್ರೀಧರ ಕಾಸೇರಗೆ ತಲೆ ಹಾಗೂ ಮುಖದ ಮೇಲೆ ಗಾಯಗಳಾಗಿದ್ದು, ಕಾಸೇರ ಅವರನ್ನು ಸ್ಥಳಿಯರು ಕೂಡಲೆ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಸಿದ್ದಾರೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Mon, 27 March 23