ಬೆಂಗಳೂರು, ಜ.04: ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ (Cheating) ನಡೆದಿದೆ. ಪ್ರತಿಷ್ಠಿತ ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ ಹೆಸರಲ್ಲಿ ಕಿಡಿಗೇಡಿಗಳು ಮಹಿಳೆಗೆ ವಂಚಿಸಿದ್ದಾರೆ. ಹೊಸ ವರ್ಷಕ್ಕೆ (New Year Party) ಫುಲ್ ಪಾರ್ಟಿ ಮಾಡೋಣ ಎಂದು ಹೇಮ ಮಾಲಿನಿ ಎಂಬ ಮಹಿಳೆ ಪಾರ್ಟಿ ಟಿಕೆಟ್ಗಾಗಿ ಹೋಟೆಲನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಸುರೇಂದರ್ ಕುಮಾರ್ ಎಂಬಾತ ಸಂಪರ್ಕಕ್ಕೆ ಬಂದಿದ್ದು ಟಿಕೆಟ್ ನೀಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ್ದಾನೆ.
ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಬೇಕು ಎಂದು ಹೇಮ ಅವರು ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ಗೆ ಕರೆ ಮಾಡಿ ಪಾರ್ಟಿ ಟಿಕೆಟ್ ಬೇಕೆಂದಿದ್ದರು. ಕರೆ ಮಾಡಿದಾಗ ಹೇಮಾ ಅವರ ಸಂಪರ್ಗಕ್ಕೆ ಬಂದ ಸುರೇಂದರ್ ಕುಮಾರ್ ಎಂಬಾತ ಒಂದು ಟಿಕೆಟ್ಗೆ ಬರೋಬ್ಬರಿ 19,500 ರೂ, ಇದೆ. ಈಗಲೇ ಪೇ ಮಾಡಿ ಎಂದಿದ್ದ. ಇದನ್ನು ಒಪ್ಪಿದ ಹೇಮ ಹಣವನ್ನು ಗೂಗಲ್ ಪೇ ಮಾಡಿದ್ದರು. ನಂತರ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚಿಸಿದ್ದ. ಸರಿ ಎಂದು ಹೇಮ ಅವರು ಹೋಟೆಲ್ ಬಳಿ ಹೋಗಿ ಮ್ಯಾನೇಜರ್ ಹೆಸರು ಹೇಳಿದಾಗ ಆ ಹೆಸರಿನ ಸಿಬ್ಬಂದಿಯೇ ಇಲ್ಲ ಎನ್ನುವುದು ಪತ್ತೆಯಾಗಿದೆ. ನಂತರ ವಂಚನೆಯಾಗಿರುವುದು ಪತ್ತೆಯಾಗಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ದುರ್ವರ್ತನೆ ತೋರಿದ ಯುವಕನಿಗೆ ಯುವತಿಯೊಬ್ಬಳು ಕಪಾಳಮೋಕ್ಷ ಮಾಡಿದ್ದಾಳೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ನೇಹಿತರ ಜೊತೆಗಿದ್ದ ಯುವತಿ ಬಳಿ ಬಂದ ಯುವಕ ಏಕಾಏಕಿ ಅಸಭ್ಯವಾಗಿ ಮಾತನಾಡಿದ್ದಾನೆ. ಇದ್ರಿಂದ ಸಿಟ್ಟಾದ ಯುವತಿ, ಪೊಲೀಸರ ಎದುರೇ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ತಕ್ಷಣವೇ ಯುವತಿ ಸ್ನೇಹಿತರು ಪುಂಡ ಯೋಗೇಶ್ಗೆ ಗೂಸಾ ನೀಡಿದ್ರು. ಬಳಿಕ ಅತ್ತಿಬೆಲೆ ಠಾಣೆ ಪೊಲೀಸರು ಪುಂಡನನ್ನು ವಶಕ್ಕೆ ಪಡೆದು ಕರೆದೊಯ್ದರು.
ಇದನ್ನೂ ಓದಿ: ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಜಿಗಿದ ಆರೋಪಿ, ಗಂಭೀರ ಗಾಯ, ಚಿಕಿತ್ಸೆ ಫಲಕಾರಿಯಾಗದೆ ಸಾವು
2023ರ ಅಪರಾಧ ಕೃತ್ಯಗಳ ಅಂಕಿ ಅಂಶಗಳನ್ನ ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ರು. 2022ಕ್ಕೆ ಹೋಲಿಸಿದ್ರೆ 2023ರಲ್ಲಿ ಹೆಚ್ಚು ಕೊಲೆಗಳು ವರದಿಯಾಗಿವೆ. 2022ರಲ್ಲಿ 156 ಕೊಲೆಗಳಾಗಿದ್ರೆ, 2023ರಲ್ಲಿ 207 ಕೊಲೆಗಳಾಗಿವೆ. ಇದ್ರಲ್ಲಿ 202 ಪ್ರಕರಣ ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ರು. ಇನ್ನೂ ಕ್ಷುಲ್ಲಕ ವಿಚಾರಕ್ಕೆ 49ಮತ್ತು ಅಕ್ರಮ ಸಂಬಂಧಕ್ಕೆ 32 ಕೊಲೆ ಕೇಸ್ ದಾಖಲಾಗಿವೆ. ಅಲ್ದೇ, 2023ರಲ್ಲಿ ಬೆಂಗಳೂರಿನಲ್ಲಿ 7 ರೌಡಿಶೀಟರ್‌ಗಳ ಕೊಲೆಗಳು ನಡೆದಿವೆ ಎಂದು ಮಾಹಿತಿ ನೀಡಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ