ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿ ಎನ್‌ಕೌಂಟರ್‌ನ ಪ್ರಮುಖ ಆರೋಪಿ ದಿವ್ಯಾ ಪಹುಜಾ ಕೊಲೆ
ಸಿಸಿಟಿವಿ ದೃಶ್ಯಾವಳಿ ಮತ್ತು ದಿವ್ಯಾ ಕುಟುಂಬದವರ ದೂರಿನ ಆಧಾರದ ಮೇಲೆ ಗುರ್ಗಾಂವ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕ್ರೈಂ ಬ್ರಾಂಚ್‌ನ ಹಲವು ತಂಡಗಳು ಪಂಜಾಬ್‌ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಗುರ್ಗಾಂವ್ ಜನವರಿ 03: ಈ ಹಿಂದೆ ಸಂದೀಪ್ ಗಡೋಲಿ (Sandeep Gadoli) ಎಂಬಾತನ “ನಕಲಿ” ಎನ್‌ಕೌಂಟರ್‌ನಲ್ಲಿ ಹೆಸರಿಸಲಾದ 27 ವರ್ಷದ ಮಾಜಿ ಮಾಡೆಲ್ ದಿವ್ಯಾ ಪಹುಜಾರನ್ನು (Divya Pahuja) ಗುರ್ಗಾಂವ್ನ (Gurgaon) ಹೋಟೆಲ್ ಕೋಣೆಯಲ್ಲಿ ಅದರ ಮಾಲೀಕರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂದೀಪ್ ಗಡೋಲಿ ದಿವ್ಯಾಳ ಬಾಯ್ ಫ್ರೆಂಡ್ ಆಗಿದ್ದ. ಹೋಟೆಲ್ ನಲ್ಲಿ ದಿವ್ಯಾಳನ್ನು ಕೊಲೆ ಮಾಡಿದ ನಂತರ ಇಬ್ಬರು ಪುರುಷರು ಆಕೆಯ ಶವವನ್ನು ಹೋಟೆಲ್‌ನಿಂದ ಹೊರಗೆ ಎಳೆದೊಯ್ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಿವ್ಯಾ ಪಹುಜಾ ಅವರನ್ನು ಅಭಿಜೀತ್ ಸಿಂಗ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಿಎಂಡಬ್ಲ್ಯು ಕಾರಿನಲ್ಲಿ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ ನೀಡಿದ್ದ ಎನ್ನಲಾಗಿದೆ. ನಗರದ ಸಿಟಿ ಪಾಯಿಂಟ್ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ದಿವ್ಯಾ ಜನವರಿ 1 ರಂದು ಅಭಿಜೀತ್ ಮತ್ತು ಇನ್ನೊಬ್ಬರೊಂದಿಗೆ ಆಗಮಿಸಿ ಕೊಠಡಿ ಸಂಖ್ಯೆ 111 ಗೆ ಹೋಗುವುದನ್ನು ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
गुरुग्राम के एक होटल में 27 साल की मॉडल दिव्या पाहुजा की हत्या. हत्या के बाद मॉडल की लाश को आरोपी बीएमडब्ल्यू (BMW Car) में लेकर भाग गए. देखें कैसे लाश को कमरे से बाहर लाया गया. #Gurugram #Divyapahuja #Modelmurder @gurgaonpolice pic.twitter.com/Kn75En9nFp
— Sunil Maurya (@smaurya_journo) January 3, 2024
ನಂತರ ರಾತ್ರಿ, ಅಭಿಜೀತ್ ಮತ್ತು ಅವನ ಸಹಚರರು ಶವವನ್ನು ಶೀಟ್‌ನಲ್ಲಿ ಸುತ್ತಿ ಕೋಣೆಯಿಂದ ಹೊರಗೆ ಸಾಗಿಸಿ ಮೃತದೇಹವನ್ನು ಟ್ರಂಕ್‌ನಲ್ಲಿ ಇರಿಸಿ ಕಾರಿನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿಯಲ್ಲಿದೆ.
ಸಿಸಿಟಿವಿ ದೃಶ್ಯಾವಳಿ ಮತ್ತು ದಿವ್ಯಾ ಕುಟುಂಬದವರ ದೂರಿನ ಆಧಾರದ ಮೇಲೆ ಗುರ್ಗಾಂವ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕ್ರೈಂ ಬ್ರಾಂಚ್‌ನ ಹಲವು ತಂಡಗಳು ಪಂಜಾಬ್‌ನಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಸಂದೀಪ್ ಗಡೋಲಿ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ
2016 ರಲ್ಲಿ ದರೋಡೆಕೋರ ಸಂದೀಪ್ ಗಡೋಲಿಯ ಎನ್‌ಕೌಂಟರ್‌ನಲ್ಲಿ ದಿವ್ಯಾ ಪ್ರಮುಖ ಆರೋಪಿಯಾಗಿದ್ದಾಳೆ. ಅವಳನ್ನು ಕೊಲ್ಲುವ ಸಂಚು ಗಡೋಲಿಯ ಸಹೋದರಿ ಸುದೇಶ್ ಕಟಾರಿಯಾ ಮತ್ತು ಸಹೋದರ ಬ್ರಹ್ಮ್ ಪ್ರಕಾಶ್ ಅವರ ಆಜ್ಞೆಯ ಮೇರೆಗೆ ಸೇಡಿನ ಕ್ರಮವಾಗಿ ಅಭಿಜೀತ್ ಈ ಕೃತ್ಯವೆಸಗಿದ್ದಾನೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಇದನ್ನೂ ಓದಿ: ಅನೈತಿಕ ಸಂಬಂಧ: ಪರಸ್ಪರ ಕಿತ್ತಾಟ, ಇಬ್ಬರು ಆಸ್ಪತ್ರೆ ಪಾಲು, ಮಚ್ಚಿನೇಟು ತಿಂದ ಯುವಕನ ಸ್ಥಿತಿ ಗಂಭೀರ
ದಿವ್ಯಾ ಅವರು ಪೊಲೀಸರಿಗೆ ರಹಸ್ಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಕೊಲ್ಲುವ ಸಮಯದಲ್ಲಿ ಗಡೋಲಿಯ ಗೆಳತಿಯಾಗಿದ್ದರು. ಮುಂಬೈನಲ್ಲಿ ಗಡೋಲಿಯ ಎನ್‌ಕೌಂಟರ್, ಅದಕ್ಕೆ ಕಾರಣವಾದ ಸಂದರ್ಭಗಳ ಸತ್ಯಾಸತ್ಯತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತು. ಆದಾಗ್ಯೂ, ದಿವ್ಯಾಗೆ ಬಾಂಬೆ ಹೈಕೋರ್ಟ್ ಜೂನ್ 2023 ರಲ್ಲಿ ಜಾಮೀನು ನೀಡಿತು. ಫೆಬ್ರವರಿ 6, 2016 ರಂದು ಅಂಧೇರಿಯ ಹೋಟೆಲ್ ಕೋಣೆಯಲ್ಲಿ ಗ್ಯಾಂಗ್ ಸ್ಟರ್ ನ ನಕಲಿ ಎನ್‌ಕೌಂಟರ್‌ನಲ್ಲಿ ಮುಂಬೈ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಆಕೆ ಮತ್ತು ಆಕೆಯ ತಾಯಿ ಮತ್ತು ಐದು ಗುರ್ಗಾಂವ್ ಪೊಲೀಸ್ ಅಧಿಕಾರಿಗಳನ್ನು ದಾಖಲಿಸಿದೆ. ಜಾಮೀನು ಪಡೆಯುವ ಮುನ್ನ ದಿವ್ಯಾ ಏಳು ವರ್ಷಗಳ ಜೈಲಿನಲ್ಲಿ ಕಳೆದಿದ್ದಳು.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ