ಐಐಟಿ ಗುವಾಹಟಿಯ ವಿದ್ಯಾರ್ಥಿನಿ ಹೊಸ ವರ್ಷದ ಪಾರ್ಟಿ ಬಳಿಕ ಹೋಟೆಲ್​ ರೂಂನಲ್ಲಿ ಶವವಾಗಿ ಪತ್ತೆ

ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ)ವಿದ್ಯಾರ್ಥಿಯೊಬ್ಬಳು ನಗರದ ಪಲ್ಟಾನ್ ಬಜಾರ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ತೆಲಂಗಾಣ ಮೂಲದ ವಿದ್ಯಾರ್ಥಿನಿಯು ಹೊಸ ವರ್ಷವನ್ನು ಆಚರಿಸಲು ಡಿಸೆಂಬರ್ 31 ರಂದು ಸಂಜೆ ತನ್ನ ಮೂವರು ಬ್ಯಾಚ್‌ಮೇಟ್‌ಗಳೊಂದಿಗೆ ಇನ್‌ಸ್ಟಿಟ್ಯೂಟ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ನಗರದ ಪಲ್ಟನ್ ಬಜಾರ್ ಪ್ರದೇಶಕ್ಕೆ ಪಾರ್ಟಿಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಐಐಟಿ ಗುವಾಹಟಿಯ ವಿದ್ಯಾರ್ಥಿನಿ ಹೊಸ ವರ್ಷದ ಪಾರ್ಟಿ ಬಳಿಕ ಹೋಟೆಲ್​ ರೂಂನಲ್ಲಿ ಶವವಾಗಿ ಪತ್ತೆ
ಸಾವುImage Credit source: India Today
Follow us
ನಯನಾ ರಾಜೀವ್
|

Updated on:Jan 03, 2024 | 2:27 PM

ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ)ವಿದ್ಯಾರ್ಥಿಯೊಬ್ಬಳು ನಗರದ ಪಲ್ಟಾನ್ ಬಜಾರ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ತೆಲಂಗಾಣ ಮೂಲದ ವಿದ್ಯಾರ್ಥಿನಿಯು ಹೊಸ ವರ್ಷವನ್ನು ಆಚರಿಸಲು ಡಿಸೆಂಬರ್ 31 ರಂದು ಸಂಜೆ ತನ್ನ ಮೂವರು ಬ್ಯಾಚ್‌ಮೇಟ್‌ಗಳೊಂದಿಗೆ ಇನ್‌ಸ್ಟಿಟ್ಯೂಟ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ನಗರದ ಪಲ್ಟನ್ ಬಜಾರ್ ಪ್ರದೇಶಕ್ಕೆ ಪಾರ್ಟಿಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ ವಿದ್ಯಾರ್ಥಿನಿ ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿ ಐಶ್ವರ್ಯಾ ಸಾವಿನ ಹಿಂದಿನ ಕಾರಣಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್​ಲೈನ್​ ಮೂಲಕ ರೂಂ ಬುಕ್ ಮಾಡಿ, ಹೋಟೆಲ್​ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಮಧ್ಯರಾತ್ರಿಯ ನಂತರ ಅವರು ಚೆಕ್-ಇನ್‌ಗಾಗಿ ಹೋಟೆಲ್‌ಗೆ ಬಂದಿದ್ದರು. ಹೋಟೆಲ್ ಸಿಬ್ಬಂದಿ ಪ್ರಕಾರ, ಅವರು ಮದ್ಯಪಾನ ಮಾಡಿದ್ದರು. ಆ ವಿಚಾರದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ, ಅದೇ ಕೋಣೆಯಲ್ಲಿ ತಂಗಿದ್ದ ತನ್ನ ಸ್ನೇಹಿತ ವಾಶ್‌ರೂಮ್‌ನಲ್ಲಿ ಹುಡುಗಿ ಪ್ರಜ್ಞಾಹೀನಳಾಗಿದ್ದನ್ನು ಕಂಡಿದ್ದಾರೆ. ಆಕೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ನಾವು ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಆಕೆಯ ಎಲ್ಲಾ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದೇವೆ. ಇತರ ಜನರನ್ನು ಸಹ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಮತ್ತಷ್ಟು ಓದಿ: ವೇಯ್ಟ್​ಲಿಫ್ಟಿಂಗ್​ ರಾಡ್​ಗೆ ನೇಣು ಬಿಗಿದುಕೊಂಡು ಐಐಟಿ ದೆಹಲಿ ವಿದ್ಯಾರ್ಥಿ ಆತ್ಮಹತ್ಯೆ

ಮೃತ ವಿದ್ಯಾರ್ಥಿನಿಯನ್ನು ಐಶ್ವರ್ಯಾ ಪುಲ್ಲೂರಿ ಎಂದು ಗುರುತಿಸಲಾಗಿದ್ದು, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದಲ್ಲಿ ಬಿಟೆಕ್ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಆಕೆಯ ಹೊರತಾಗಿ, ಮತ್ತೊಬ್ಬ ವಿದ್ಯಾರ್ಥಿನಿ ಮತ್ತು ಇಬ್ಬರು ಪುರುಷ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿದ್ದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:26 pm, Wed, 3 January 24