ವೇಯ್ಟ್ಲಿಫ್ಟಿಂಗ್ ರಾಡ್ಗೆ ನೇಣು ಬಿಗಿದುಕೊಂಡು ಐಐಟಿ ದೆಹಲಿ ವಿದ್ಯಾರ್ಥಿ ಆತ್ಮಹತ್ಯೆ
ವೇಯ್ಟ್ ಲಿಫ್ಟಿಂಗ್ ರಾಡ್ಗೆ ನೇಣುಬಿಗಿದುಕೊಂಡು ಐಐಟಿ ದೆಹಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 23 ವರ್ಷದ ಐಐಟಿ ವಿದ್ಯಾರ್ಥಿ ವಿವೇಕ್ ವಿಹಾರದಲ್ಲಿರುವ ತನ್ನ ಮನೆಯಲ್ಲಿ ಭಾರ ಎತ್ತುವ ರಾಡ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿ ಪಣವ್ ಜೈನ್ ಮೃತದೇಹ ಪೋಷಕರು ರಾತ್ರಿ ವಾಕಿಂಗ್ ಮುಗಿಸಿ ಹಿಂದಿರುಗಿದಾಗ ಪತ್ತೆಯಾಗಿದೆ.
ಪನವ್ ತಮ್ಮ ಮನೆಯಲ್ಲಿ ಅಳವಡಿಸಲಾಗಿದ್ದ ಭಾರ ಎತ್ತುವ ರಾಡ್‌ನಲ್ಲಿ ದುಪಟ್ಟಾ (ಸ್ಕಾರ್ಫ್) ದಿಂದ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ವಿಳಾಸ ಕೇಳುವ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ಬಾಲಕನ ಕಿಡ್ನಾಪ್: ಹಾಸನದಲ್ಲಿ ಬಿಟ್ಟುಹೋದ ಕಿರಾತಕರು
ವಿದ್ಯಾರ್ಥಿಯ ಪೋಷಕರು ಅವರನ್ನು ಪುಷ್ಪಾಂಜಲಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪಣವ್ ಅವರ ತಂದೆ ತಮ್ಮ ಮಗ ಕಳೆದ ಕೆಲವು ತಿಂಗಳುಗಳಿಂದ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾನೆ ಮತ್ತು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ