ವಿಳಾಸ ಕೇಳುವ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ಬಾಲಕನ ಕಿಡ್ನಾಪ್: ಹಾಸನದಲ್ಲಿ ಬಿಟ್ಟುಹೋದ ಕಿರಾತಕರು
ವಿಳಾಸ ಕೇಳುವ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ಬಾಲಕನನ್ನು ಕಿಡ್ನಾಪ್ ಮಾಡಿ ಕಿರಾತಕರು ಹಾಸನದಲ್ಲಿ ಬಿಟ್ಟುಹೋಗಿರುವಂತಹ ಘಟನೆ ನಿನ್ನೆ ನಡೆದಿದೆ. ಯಾರು ಯಾವ ಕಾರಣಕ್ಕೆ ಕಿಡ್ನಾಪ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದು, ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಗೆ ಕಿಡ್ನಾಪ್ ಬಗ್ಗೆ ದೂರು ನೀಡಲಾಗಿದೆ.
ಹಾಸನ, ನವೆಂಬರ್ 01: ವಿಳಾಸ ಕೇಳುವ ನೆಪದಲ್ಲಿ ಬಂದು ಪ್ರಜ್ಞೆ ತಪ್ಪಿಸಿ ಬಾಲಕನನ್ನು ಕಿಡ್ನಾಪ್ (Kidnapping) ಮಾಡಿ ಕಿರಾತಕರು ಹಾಸನದಲ್ಲಿ ಬಿಟ್ಟುಹೋಗಿರುವಂತಹ ಘಟನೆ ನಡೆದಿದೆ. ಬೆಂಗಳೂರಿನ ಅನಂತಪುರದ ಕೃಷ್ಣೇಗೌಡರ ಮಗ, ನಾಗಾರ್ಜುನ ಪಿಯು ಕಾಲೇಜು ವಿದ್ಯಾರ್ಥಿ ಚಿರಾಗ್ (17) ನನ್ನ ಕಿಡ್ನಾಪ್ ಮಾಡಿ ಬಿಟ್ಟು ಹೋಗಿರುವ ಆರೋಪ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆ ಯುವಕ ಕಾಲೇಜಿಗೆ ತೆರಳುವ ವೇಳೆ ಕಿಡ್ನಾಪ್ ಮಾಡಿರುವುದಾಗಿ ಆರೋಪಿಸಿದ್ದಾರೆ.
ಬೆಳಿಗ್ಗೆ ಕಾಲೇಜಿಗೆ ತೆರಳುವ ವೇಳೆ ಪ್ರಜ್ಞೆ ತಪ್ಪಿ ಎಚ್ಚರಗೊಂಡಾಗ ಹಾಸನ ಜಿಲ್ಲೆಯ ಅರಕಲಗೂಡು ಸಮೀಪದಲ್ಲಿದ್ದ. ಬಳಿಕ ಎಚ್ಚರಗೊಂಡು ಸಮೀಪದ ಮನೆ ಬಳಿ ತೆರಳಿ ಪೋಷಕರಿಗೆ ಯುವಕ ಫೋನ್ ಮಾಡಿದ್ದಾನೆ. ಕೂಡಲೆ ಹಾಸನಕ್ಕೆ ಬಂದು ಮಗನನ್ನ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ
ಅಸ್ವಸ್ಥಗೊಂಡಿದ್ದ ಯುವಕನಿಗೆ ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾರು ಯಾವ ಕಾರಣಕ್ಕೆ ಕಿಡ್ನಾಪ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದು, ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಗೆ ಕಿಡ್ನಾಪ್ ಬಗ್ಗೆ ದೂರು ನೀಡಲಾಗಿದೆ.
ಒಂದೇ ರಾತ್ರಿಯಲ್ಲಿ 12 ಲಕ್ಷ ರೂ. ಬೆಲೆ ಬಾಳುವ ಕೃಷಿ ಉಪಕರಣಗಳ ಕಳ್ಳತನ: ರೈತರು ಕಂಗಾಲು
ದೇವನಹಳ್ಳಿ: ತಡರಾತ್ರಿ ದ್ರಾಕ್ಷಿ ಹಾಗೂ ಕೃಷಿ ತೋಟಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿರುವಂತಹ ಘಟನೆ ದೇವನಹಳ್ಳಿ ತಾಲೂಕಿನ ಆವತಿ ಮತ್ತು ಬುಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ ಲಕ್ಷ ಬೆಲೆ ಬಾಳುವ ಮೋಟರ್ ಪಂಪ್ ಸೆಟ್ ಮತ್ತು ಕೇಬಲ್ಗಳ್ ಕಳವು ಮಾಡಲಾಗಿದೆ. ಸರಣಿ ಕಳ್ಳತನದಿಂದ ಅನ್ನದಾತರು ಬೆಚ್ಚಿಬಿದಿದ್ದಾರೆ. ಶೆಡ್ಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಸ್ನೇಹಿತರಿಂದಲೇ ಹತ್ಯೆ, ವಿಷಯ ತಿಳಿದು ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಸಾಲ ಸೂಲ ಮಾಡಿ ತಂದಿದ್ದ ಲಕ್ಷ ಲಕ್ಷ ಬೆಲೆಯ ಪಂಪ್ ಮತ್ತು ಮೋಟರ್ ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ರಾತ್ರಿಯಲ್ಲಿ 12 ಲಕ್ಷ ರೂ. ಬೆಲೆ ಬಾಳುವ ಕೃಷಿ ಉಪಕರಣಗಳ ಕಳ್ಳತನ ಮಾಡಿದ್ದಾರೆ. ಪೊಲೀಸರು ರಾತ್ರಿ ಗಸ್ತು ಸರಿಯಾಗಿ ಮಾಡದ ಕಾರಣ ಸರಣಿ ಕಳವು ಆರೋಪ ಮಾಡಲಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮಾವನನ್ನು ಕೊಂದು ಅಳಿಯ ಆತ್ಮಹತ್ಯೆ
ಕಲಬುರಗಿ: ಮಾವನನ್ನು ಕೊಂದು ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ನಡೆದಿದೆ. ಈರಪ್ಪ ಕೋಡ್ಲಿ (60) ಅಳಿಯನಿಂದಲೇ ಕೊಲೆಯಾದ ನತದೃಷ್ಟ ಮಾವ. ತವರಿನಲ್ಲಿದ್ದ ಹೆಂಡತಿಯನ್ನು ಕಳುಹಿಸಿಕೊಡುವಂತೆ ಸೊಲ್ಲಾಪೂರದಿಂದ ಬಂದು ಹೊಲದಲ್ಲಿ ಮಾನವೊಂದಿಗೆ ಅಳಿಯ ರಾಜು ಜಗಳಕ್ಕಿಳಿದಿದ್ದ. ಈ ವೇಳೆ ಸಿಟ್ಟಿಗೆದ್ದ ರಾಜು, ಮಾವ ಈರಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಹೊಲದಲ್ಲಿ ಮಾವನನ್ನು ಕೊಂದು ಊರಿಗೆ ಬಂದು ವಿದ್ಯುತ್ ಕಂಬ ಏರಿ ಕರೆಂಟ್ ಹಿಡಿಯಲು ಹೋಗಿ ನೆಲಕ್ಕೆ ಬಿದ್ದು ರಾಜು ಮೃತಪಟ್ಟಿದ್ದಾನೆ. ಸುಲೇಪೇಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.