ಸ್ನೇಹಿತರಿಂದಲೇ ಹತ್ಯೆ, ವಿಷಯ ತಿಳಿದು ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಆತ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ,ಕಳೆದ ವರಮಹಾಲಕ್ಷ್ಮೀ ಹಬ್ಬದ ದಿನ ಹೊರಗೆ ಬಂದವನು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡಿ ಕಾಪಾಡಿ ಎಂದು ಪ್ರಾಣ ಬಿಟ್ಟಿದ್ದು, ತನ್ನ ಸ್ನೇಹಿತರಿಂದಲೇ ಕೊಲೆ ಆಗಿದ್ದಾನೆ. ಎಲ್ಲಿ ಅಂತೀರಾ? ಇಲ್ಲಿದೆ ನೋಡಿ.
ತುಮಕೂರು, ಅ.31: ಆತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ತನ್ನ ತಾಯಿ ಜೊತೆ ವಾಸಿಸುತ್ತಿದ್ದ. ಆಗಾಗ ಮನೆಯಿಂದ ಹೊರಗೆ ಬಂದರೆ 15 ರಿಂದ 20 ದಿನಕ್ಕೆ ವಾಪಸ್ ಮನೆಗೆ ಹೋಗುತ್ತಿದ್ದ. ಹೀಗೆ ಎಲ್ಲಿಯೋ ಹೋಗಿರಬಹುದು, ಮನೆಗೆ ವಾಪಸ್ ಬರಬಹುದು ಎಂದು ಆತನ ತಾಯಿ, ತನ್ನ ಪಾಡಿಗೆ ತಾನು ಇದ್ದಳು. ಹೀಗಿರುವಾಗ ಕಳೆದ ಶನಿವಾರ ಬೆಳಗಿನ ಜಾವ ರಕ್ತದ ಮಡುವಿನಲ್ಲಿ ಒದ್ದಾಡಿ ಸತ್ತಿದ್ದಾನೆ. ಹೌದು, ಬೆಂಗಳೂರಿ(Bengaluru)ನ ಕಾಮಾಕ್ಷಿಪಾಳ್ಯದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಮಹೇಂದ್ರ ಎಂಬುವವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದವರು. ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದರಂತೆ. ಒಂದಷ್ಟು ವರ್ಷ ಲಗ್ಗೆರೆಯಲ್ಲಿದ್ದಾಗ, ಸ್ನೇಹಿತರ ಸಂಘ ಹೆಚ್ಚಾಗಿದ್ದ ಕಾರಣ ಮನೆ ಖಾಲಿ ಮಾಡಿಕೊಂಡು ಕಾಮಾಕ್ಷಿಪಾಳ್ಯಕ್ಕೆ ಶಿಪ್ಟ್ ಆಗಿದ್ದರಂತೆ.
ತಾಯಿ ಇಂದ್ರಳಿಗೆ ಪತಿಯಿರಲಿಲ್ಲ,ಇಬ್ಬರು ಗಂಡು ಮಕ್ಕಳು ಅದರಲ್ಲಿ ಹಿರಿಯ ಮಗನೇ ಈ ಮಹೇಂದ್ರ. ಮಹೇಂದ್ರನ ಜೊತೆ ತಾಯಿ ವಾಸವಾಗಿದ್ದಳು. ಹೀಗಿರುವಾಗ ಆಗಾಗ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನುವುದನ್ನು ಬಿಟ್ಟರೇ ತಾಯಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದನಂತೆ. ಇನ್ನೂ ಚಿಕ್ಕ ಮಗ ಮದುವೆಯಾಗಿ ಬೇರೆ ವಾಸವಿದ್ದರಂತೆ. ಮಹೇಂದ್ರನಿಗೆ ಸ್ನೇಹಿತರ ಜೊತೆ ದಿನಗಟ್ಟಲೇ ಹೋಗಿ ಬರುವುದು ವಾಡಿಕೆಯಿದ್ದು, ಒಂದು ಬಾರಿ ಹೋದರೆ ಸುಮಾರು 15-20 ದಿನ ಆದ್ರೂ ಮನೆಗೆ ವಾಪಸ್ ಬರುತ್ತಿರಲಿಲ್ಲವಂತೆ. ಹೀಗೆ ಎಲ್ಲೋ ತನ್ನ ಮಗ ಹೋಗಿರಬಹುದು ಎಂದು ತಾಯಿ ಹಾಗೂ ಸಂಬಂಧಿಕರು ಅಂದುಕೊಂಡು ಸುಮ್ಮನೆ ಇದ್ದರು.
ಇದನ್ನೂ ಓದಿ:ರಾಯಚೂರು: ಮಾರಕಾಸ್ತ್ರಗಳಿಂದ ಕೊಚ್ಚಿ, ಮುಂಗೈ ತುಂಡರಸಿ ದಲಿತ ಮುಖಂಡನ ಬರ್ಬರ ಹತ್ಯೆ
ಮಗನ ಸಾವಿನ ಸುದ್ದಿ ಕೇಳಿ ಶಾಕ್ ಆದ ತಾಯಿ
ಹೌದು, ಎಲ್ಲೋ ಸ್ನೇಹಿತರ ಜೊತೆ ಇದ್ದಾನೆ ಎಂದುಕೊಂಡಿದ್ದ ತಾಯಿ-ಕುಟುಂಬಸ್ಥರಿಗೆ ಶಾಕ್ ಆಗಿದೆ. ಕಳೆದ ಶನಿವಾರ ಬೆಳಗಿನ ಜಾವ ತುಮಕೂರು ಜಿಲ್ಲೆಯ ತಿಪಟೂರು ನಗರದ ಕೆಆರ್ ಬಡವಾಣೆಯ ಮೂರನೇ ಕ್ರಾಸ್ನಲ್ಲಿ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡಿ ಮಹೇಂದ್ರ ಜೀವ ಬಿಟ್ಟಿದ್ದು, ಅರೆ ನಗ್ನ ಸ್ಥಿತಿಯಲ್ಲಿ ಮಹೇಂದ್ರ ಶವ ಪತ್ತೆ ಯಾಗಿದೆ. ಇನ್ನು ಮಹೇಂದ್ರ ಆಟೋವನ್ನ ಮಾರಾಟ ಮಾಡಿ ವರಮಹಾಲಕ್ಷ್ಮೀ ಹಬ್ಬದ ದಿನ ಹೊರಬಂದು ಇದುವರೆಗೂ ಕೂಡ ಮನೆ ಕಡೆ ಹೋಗಿರಲಿಲ್ಲವಂತೆ.
ಸ್ನೇಹಿತರಿಂದಲೇ ಹತ್ಯೆಯಾದ ಮಹೇಂದ್ರ
ಮೃತ ಮಹೇಂದ್ರನಿಗೆ ಸ್ನೇಹಿತರ ಗುಂಪು ಜಾಸ್ತಿ ಇತ್ತು. ಹೀಗಾಗಿ ತನ್ನ ಸ್ನೇಹಿತರ ಜೊತೆ ಒಂದು ಬಾರಿ ಹೊರಗೆ ಬಂದರೆ ವಾಪಸ್ ಮನೆಗೆ ಹೋಗುತ್ತಿರಲಿಲ್ಲ. ಹೀಗಾಗಿ ತಿಪಟೂರಿಗೆ ತನ್ನ ಸ್ನೇಹಿತರಾದ ಗಗನದಿಪ್, ಸುಭಾಸ್ ಎಂಬಾತರ ಜೊತೆ ಬಂದಿದ್ದ ಎನ್ನಲಾಗಿದೆ. ಮಹೇಂದ್ರನ ಸ್ನೇಹಿತರಾದ ಗಗನ್ ದಿಪ್, ಸುಭಾಶ್ ಹಾಗೂ ದರ್ಶನ್ ಮೂವರು ಕೂಡ ಶುಕ್ರವಾರ ರಾತ್ರಿ ಎಲ್ಲರೂ ಪಾರ್ಟಿ ಮಾಡಿದ್ದಾರೆ. ರಾತ್ರಿಯಿಡಿ ಪಾರ್ಟಿ ಮಾಡಿದ ಸುಭಾಸ್ ಗ್ಯಾಂಗ್ ಹಾಗೂ ಮಹೇಂದ್ರನ ನಡುವೆ ಅದೆನಾಯ್ತೋ ಗೊತ್ತಿಲ್ಲ, ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮಹೇಂದ್ರ ನ ಎಡಗಾಲಿಗೆ ಚಾಕುವಿನಿಂದ ಚಾಕುವಿನಿಂದ ಚುಚ್ಚಿದ್ದಾರೆ.
ಇದನ್ನೂ ಓದಿ:ಬಂಟ್ವಾಳ: ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವ ವಧು
ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣಬಿಟ್ಟ
ಚಾಕುವಿನಿಂದ ಚುಚ್ಚಿದ ಪರಿಣಾಮ ಮಹೇಂದ್ರ ತಪ್ಪಿಸಿಕೊಳ್ಳಲು ಓಡಿದ್ದಾನೆ ಎನ್ನಲಾಗಿದೆ. ಈ ವೇಳೆ ಕೆಆರ್ ಬಡಾವಣೆಯಲ್ಲಿ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದ್ದಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ಆಗಿದೆ. ಇನ್ನು ಇದೇ ವೇಳೆ ಮಹೇಂದ್ರ ಕಾಪಾಡಿ ಎಂದು ಕೂಗಿಕೊಂಡಿದ್ದಾನಂತೆ. ಆದರೆ, ಯಾರು ಕೂಡ ಸಹಾಯಕ್ಕೆ ಬಂದಿಲ್ಲ ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಇದೊಂದು ವೈಯಕ್ತಿಕ ಗಲಾಟೆ, ಕೊಲೆ ಮಾಡಬೇಕೆಂದು ಮಾಡಿಲ್ಲ. ಕುಡಿದು ಪರಸ್ಪರ ಜಗಳ ಆಗಿದೆ. ಈ ವೇಳೆ ಚಾಕುವಿನಿಂದ ಚುಚ್ಚಿದ ಕಾರಣ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.
ಇನ್ನು ಆರೋಪಿಗಳೆ ಆಸ್ಪತ್ರೆಗೆ ಸಾಗಿಸಿ ರಕ್ಷಣೆ ಮಾಡಲು ಪ್ರಯತ್ನ ಮಾಡಿದ್ದರು. ಆದರೆ, ಭಯದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಎಷ್ಟರಮಟ್ಟಿಗೆ ಇದು ನಿಜವೋ ಗೊತ್ತಿಲ್ಲ. ಸದ್ಯ ಗಗನ್ ದೀಪ್, ಸುಭಾಶ್ ಹಾಗೂ ದರ್ಶನ್ರನ್ನ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಇವರಿಗೆ ಸಹಾಯ ಮಾಡಿದ್ದ ಯತಿರಾಜ್ ಹಾಗೂ ಸುಮನ್ರವರು ಅಪ್ರಾಪ್ತರು ಎನ್ನಲಾಗಿದೆ. ನಾಲ್ವರು ಕೂಡ ತಿಪಟೂರು ನಗರದವರೇ ಆಗಿದ್ದು, ಸಣ್ಣ ಪುಟ್ಟ ಕೆಲಸ , ಮನೆಯ ಕಡೆ ವ್ಯವಸಾಯ ಮಾಡಿಕೊಂಡಿದ್ದರು ಎನ್ನಲಾಗಿದೆ. ಒಟ್ಟಾರೆ ಸ್ನೇಹಿತರಿಂದಲೇ ಕ್ಷುಲಕ ಕಾರಣಕ್ಕೆ ಕೊಲೆಯಾಗಿದ್ದು, ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ