Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರ ಬಂದೇ ಬಿಟ್ಟ, ಪತ್ನಿಯ ವ್ರತ ಮುಗೀತಿದೆ, ಬೇಗ ನನ್ನನ್ನು ಮನೆಗೆ ತಲುಪಿಸಿ, ಟ್ರಾಫಿಕ್​ನಲ್ಲಿ ಸಿಲುಕಿದ ಪತಿಯಿಂದ ಪಿಸಿಆರ್​ಗೆ ಕರೆ

ಭಾರತದ ಬಹಳಷ್ಟು ಭಾಗಗಳಲ್ಲಿ ಬುಧವಾರ ಕರ್ವಾ ಚೌತ್ ವ್ರತ ಆಚರಣೆ ಮಾಡಲಾಯಿತು. ಸಂಪ್ರದಾಯದ ಪ್ರಕಾರ ಮಹಿಳೆಯರು ಚಂದ್ರನನ್ನು ಹಾಗೂ ತಮ್ಮ ಗಂಡನನ್ನು ನೋಡುವವರೆಗೆ ಉಪವಾಸವನ್ನು ಮುರಿಯುವುದಿಲ್ಲ. ಹೀಗೆ ಪತಿಯೊಬ್ಬ ಕಚೇರಿಗೆ ಹೋಗಿದ್ದಾರೆ, ದೆಹಲಿಯ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆ, ಚಂದ್ರ ಕಾಣಿಸಿದ್ದಾನೆ, ಅಯ್ಯೋ ಚಂದ್ರ ಕಾಣಿಸ್ತಿದ್ದಾನೆ, ಪತ್ನಿಯ ವ್ರತವೂ ಮುಗಿದಿದೆ, ಉಪವಾಸದಲ್ಲಿದ್ದಾಳೆ ಬೇಗ ಮನೆಗೆ ತಲುಪಿಸಿ ಎಂದು ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿರುವ ಘಟನೆ ವರದಿಯಾಗಿದೆ.

ಚಂದ್ರ ಬಂದೇ ಬಿಟ್ಟ, ಪತ್ನಿಯ ವ್ರತ ಮುಗೀತಿದೆ, ಬೇಗ ನನ್ನನ್ನು ಮನೆಗೆ ತಲುಪಿಸಿ, ಟ್ರಾಫಿಕ್​ನಲ್ಲಿ ಸಿಲುಕಿದ ಪತಿಯಿಂದ ಪಿಸಿಆರ್​ಗೆ ಕರೆ
ಕರ್ವಾ ಚೌತ್Image Credit source: NDTV
Follow us
ನಯನಾ ರಾಜೀವ್
|

Updated on:Nov 02, 2023 | 9:31 AM

ಭಾರತದ ಬಹಳಷ್ಟು ಭಾಗಗಳಲ್ಲಿ ಬುಧವಾರ ಕರ್ವಾ ಚೌತ್(Karwa Chaut) ವ್ರತ ಆಚರಣೆ ಮಾಡಲಾಯಿತು. ಸಂಪ್ರದಾಯದ ಪ್ರಕಾರ ಮಹಿಳೆಯರು ಚಂದ್ರನನ್ನು ಹಾಗೂ ತಮ್ಮ ಗಂಡನನ್ನು ನೋಡುವವರೆಗೆ ಉಪವಾಸವನ್ನು ಮುರಿಯುವುದಿಲ್ಲ. ಹೀಗೆ ಪತಿಯೊಬ್ಬ ಕಚೇರಿಗೆ ಹೋಗಿದ್ದಾರೆ, ದೆಹಲಿಯ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆ, ಚಂದ್ರ ಕಾಣಿಸಿದ್ದಾನೆ, ಅಯ್ಯೋ ಚಂದ್ರ ಕಾಣಿಸ್ತಿದ್ದಾನೆ, ಪತ್ನಿಯ ವ್ರತವೂ ಮುಗಿದಿದೆ, ಉಪವಾಸದಲ್ಲಿದ್ದಾಳೆ ಬೇಗ ಮನೆಗೆ ತಲುಪಿಸಿ ಎಂದು ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿರುವ ಘಟನೆ ವರದಿಯಾಗಿದೆ.

ಕರ್ವಾ ಚೌತ್ ಅನ್ನು ಹಿಂದೂ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಸೂರ್ಯಾಸ್ಥದವರೆಗೆ ಉಪವಾಸವನ್ನು ಆಚರಿಸುತ್ತಾರೆ.

Viral Video: ಕರ್ವಾ ಚೌತ್​ಗೆ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಡುವಾಗ ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಚಪ್ಪಲಿಯೇಟು!

ತಿಹಾರ್ ಜೈಲಿನ ಕನಿಷ್ಠ 195 ಮಹಿಳಾ ಕೈದಿಗಳು ಬುಧವಾರ ಕರ್ವಾ ಚೌತ್ ನಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಅಧಿಕಾರಿಯೊಬ್ಬರ ಪ್ರಕಾರ, ಜೈಲು ಸಂಖ್ಯೆ 6 ರಲ್ಲಿ 140 ಕೈದಿಗಳು ಮತ್ತು ಜೈಲು ಸಂಖ್ಯೆ 16 ರಲ್ಲಿ 55 ಕೈದಿಗಳು ಜೈಲು ಅಧೀಕ್ಷಕರ ಸಮ್ಮುಖದಲ್ಲಿ ಹಬ್ಬವನ್ನು ಆಚರಿಸಿದರು.

ಜೈಲು ಆಡಳಿತವು ಪ್ರಾರ್ಥನೆಗೆ ಬೇಕಾದ ವಸ್ತುಗಳನ್ನು ಮತ್ತು ಇತರ ವಸ್ತುಗಳ ವ್ಯವಸ್ಥೆ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ, ಜೈಲು ಸಂಖ್ಯೆ 6 ರಲ್ಲಿ ಸುಮಾರು 650 ಮಹಿಳಾ ಜೈಲು ಕೈದಿಗಳು ಮತ್ತು ಜೈಲು ಸಂಖ್ಯೆ 16 ರಲ್ಲಿ 150 ಮಂದಿಯನ್ನು ಇರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:30 am, Thu, 2 November 23