Karwa Chauth 2021: ಈ ಮೂರು ಕಾಯಿಲೆಯಿಂದ ಬಳಲುತ್ತಿರುವವರು ಕರ್ವಾ ಚೌತ್ ಉಪವಾಸ ಮಾಡುವ ಮುನ್ನ ಇರಲಿ ಎಚ್ಚರ

ಮಹಿಳೆಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುತ್ತವೆ ಅಂತವರು ದೀರ್ಘಕಾಲದವರೆಗೆ ಹಸಿವು ಮತ್ತು ಬಾಯಾರಿಕೆಯನ್ನು ಸಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಬಲವಂತವಾಗಿ ಆಚರಣೆಯ ಹೆಸರಿನಲ್ಲಿ ಉಪವಾಸ ಮಾಡುವುದರಿಂದ ತೊಂದರೆಗಳು ಎದುರಾಗಬಹುದು.

Karwa Chauth 2021: ಈ ಮೂರು ಕಾಯಿಲೆಯಿಂದ ಬಳಲುತ್ತಿರುವವರು ಕರ್ವಾ ಚೌತ್ ಉಪವಾಸ ಮಾಡುವ ಮುನ್ನ ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 23, 2021 | 8:41 AM

ಅಕ್ಟೋಬರ್ 24 ರಂದು ಕರ್ವಾ ಚೌತ್ ( Karwa Chauth 2021) ಹಬ್ಬ ಆಚರಿಸಲಾಗುತ್ತದೆ. ಪ್ರತಿವರ್ಷ ಈ ಹಬ್ಬವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವನ್ನು ಮಾಡುತ್ತಾರೆ. ಸಂಜೆ ಪೂಜೆ ನಂತರ ಚಂದ್ರನನ್ನು ನೋಡಿದ ಬಳಿಕ ಅರ್ಘ್ಯವನ್ನು ಅರ್ಪಿಸಲಾಗುತ್ತದೆ. ಪೂಜೆ ನಂತರ ತನ್ನ ಗಂಡನ ಕೈಯಿಂದ ನೀರು ಕುಡಿಯುವ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸಲಾಗುತ್ತದೆ. ಪತಿ ಮತ್ತು ಪತ್ನಿಯರ ನಡುವಿನ ಸಂಬಂಧವನ್ನು ಮಧುರವಾಗಿಸುವುದು ಕರ್ವ ಚೌತ್ ಉಪವಾಸದ ಉದ್ದೇಶವಾಗಿದೆ.

ಪತಿಯ ಒಳಿತಿಗಾಗಿ ಪ್ರತಿ ವರ್ಷವೂ ಇದನ್ನು ಆಚರಿಸಲಾಗುತ್ತದೆ. ಆದರೆ ಇದರ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಇದನ್ನು ಕೇವಲ ಆಚರಣೆಯನ್ನಾಗಿ ಮಾಡಲಾಗಿದೆ. ಆದರೆ ಯಾವ ಸಂದರ್ಭದಲ್ಲಿ ಉಪವಾಸ ಮಾಡಬೇಕು ಎಂದು ತಿಳಿಯುವುದು ಸೂಕ್ತ.  ನಿಮಗೆ ಅಥವಾ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಯಾವುದೇ ವಿಧಾನಗಳಿದ್ದರೆ ಅದನ್ನು ಬಿಡುವುದು ಉತ್ತಮ. ಅನೇಕ ಮಹಿಳೆಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುತ್ತವೆ ಅಂತವರು ದೀರ್ಘಕಾಲದವರೆಗೆ ಹಸಿವು ಮತ್ತು ಬಾಯಾರಿಕೆಯನ್ನು ಸಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಬಲವಂತವಾಗಿ ಆಚರಣೆಯ ಹೆಸರಿನಲ್ಲಿ ಉಪವಾಸ ಮಾಡುವುದರಿಂದ ತೊಂದರೆಗಳು ಎದುರಾಗಬಹುದು.

ಕರ್ವಾ ಚೌತ್ ಉಪವಾಸ ಯಾರು ಮಾಡಬಾರದು? ಮಧುಮೇಹ ಒಂದು ಕಾಲವಿತ್ತು ವಯಸ್ಸಾದವರಿಗೆ ಮಾತ್ರ ವಿವಿಧ ಕಾಯಿಲೆಗಳು ಕಾಡುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಇಂದಿನ ಕಾಲದಲ್ಲಿ ಕಾಯಿಲೆ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಬರಬಹುದು. ಅಂತೆಯೇ ಮಧುಮೇಹ ಕೂಡ. ಮಧುಮೇಹಕ್ಕೆ ಒಳಗಾದ ಮಹಿಳೆಯರು ಕೂಡ ಕರ್ವಾ ಚೌತ್ ಉಪವಾಸ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಗಂಭೀರ ಪರಿಣಾಮಗಳು ಉಂಟಾಗಬಹುದು. ಮಧುಮೇಹಿ ರೋಗಿಗಳು ದೀರ್ಘಕಾಲದವರೆಗೆ ಹಸಿವಿನಿಂದ ಅಥವಾ ಬಾಯಾರಿಕೆಯಿಂದ ಇರುವುದು ಒಳ್ಳೆಯದಲ್ಲ. ದೀರ್ಘಕಾಲದ ಹಸಿವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಹೈಪೊಗ್ಲಿಸಿಮಿಯಾ ಅಥವಾ ಹೈಪರ್ಗ್ಲೈಸೀಮಿಯಾ ಅಪಾಯ ಹೆಚ್ಚಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಉಪವಾಸ ಕೈ ಬಿಡುವುದು ಉತ್ತಮ. ಹಾಗೊಂದು ವೇಳೆ ಉಪವಾಸ ಮಾಡಲೇ ಬೇಕೆಂದಾದರೆ ವೈದ್ಯರ ಸಲಹೆ ಪಡೆಯಿರಿ.

ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹಕ್ಕೆ ಹೆಚ್ಚಿನ ಪೋಷಣೆಯ ಅಗತ್ಯವಿದೆ. ಮಗುವಿನ ಬೆಳವಣಿಗೆ ಕೂಡ ತಾಯಂದಿರ ದೇಹ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಉಪವಾಸವು ಗರ್ಭಿಣಿಯರಿಗೆ ಮತ್ತು ಮಗುವಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಮೊದಲ ಮತ್ತು ಮೂರನೇ ತಿಂಗಳಲ್ಲಿ ಉಪವಾಸ ಮಾಡುವುದು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಎಲ್ಲವೂ ಸರಿಯಾಗಿದ್ದರೆ, ಕೆಲವು ಸೂಚನೆಗಳೊಂದಿಗೆ ಎರಡನೇ ತಿಂಗಳಲ್ಲಿ ಉಪವಾಸ ಮಾಡಬಹುದು. ಆದರೆ ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ.

ಅಸಮತೋಲಿತ ರಕ್ತದೊತ್ತಡ ಕೆಲವು ಜನರು ಅಸಮತೋಲಿತ ರಕ್ತದೊತ್ತಡವನ್ನು ಹೊಂದಿರುತ್ತಾರೆ. ರಕ್ತದೊತ್ತಡ ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತದೆ. ಈ ಸಮಸ್ಯೆಯನ್ನು ಹೊಂದಿರುವವರು ಕರ್ವ ಚೌತ್​ನ ಉಪವಾಸವನ್ನು ಮಾಡದಂತೆ ಸೂಚಿಸಲಾಗಿದೆ. ದೀರ್ಘಾವಧಿಯ ಹಸಿವು ಮಹಿಳೆಯರಲ್ಲಿ ರಕ್ತದೊತ್ತಡದ ಮಟ್ಟದ ಏರಿಳಿತಕ್ಕೆ ಕಾರಣವಾಗಬಹುದು. ಏಕೆಂದರೆ ಬಿಪಿ ಆಹಾರ ಮತ್ತು ಔಷಧಿಗಳಿಂದ ನಿಯಂತ್ರಿಸಲ್ಪಡುತ್ತದೆ. ತಜ್ಞರ ಸಲಹೆ ಪಡೆದು ಉಪವಾಸ ಮಾಡಿ.

ಇದನ್ನೂ ಓದಿ: Bheemana Amavasya: ಭೀಮನ ಅಮಾವಾಸ್ಯೆಯ ಹಿಂದಿದೆ ರೋಚಕ ಇತಿಹಾಸ; ಇದನ್ನು ಕೊಡೆ ಅಮಾವಾಸ್ಯೆ ಎಂದು ಕರೆಯುವುದೇಕೆ?

Rules for fasting: ದೇವರಿಗಾಗಿ ಉಪವಾಸ ವ್ರತ ಆಚರಿಸುವಾಗ ಈ ಸರಳ ನಿಯಮಗಳನ್ನು ತಪ್ಪದೆ ಪಾಲಿಸಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ