Rules for fasting: ದೇವರಿಗಾಗಿ ಉಪವಾಸ ವ್ರತ ಆಚರಿಸುವಾಗ ಈ ಸರಳ ನಿಯಮಗಳನ್ನು ತಪ್ಪದೆ ಪಾಲಿಸಿ
ಪ್ರಪಂಚದಲ್ಲಿ ಒಂದಲ್ಲಾ ಒಂದು ರೂಪದಲ್ಲಿ ವ್ರತಾಚರಣೆ ಇರುತ್ತದೆ. ಅದಕ್ಕೆ ತಕ್ಕಂತೆ, ಸೂಕ್ತವಾದ ನಿಯಮಗಳೂ ಇರುತ್ತವೆ. ಉಪವಾಸ ವ್ರತವೆಂದರೆ ಇಂದಿನ ದಿನಗಳಲ್ಲಿ ವಿಭಿನ್ನ ರೀತಿಯ ಫಲಾಹಾರಗಳನ್ನು ಸೇವಿಸಿ, ಆರಾಮವಾಗಿ ಇರುವುದು ಎಂಬಂತಾಗಿದೆ.
ಸನಾತ ಧರ್ಮದಲ್ಲಿ ದುಃಖಗಳನ್ನು ದೂರ ಮಾಡಲು ಮತ್ತು ಮನೋಕಾಮನೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ದೇವರು ಮತ್ತು ದೇವತೆಗಳನ್ನು ಒಲಿಸಿಕೊಳ್ಳಲು ಉಪವಾಸ ವ್ರತಗಳನ್ನು ಅದರ ನಿಜವಾದ ಕ್ರಮಗಳು ಏನು? ನಿಯಮಗಳು ಏನು? ಎಂಬುದನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ವ್ರತ ಎಂಬುದು ತಪ್ಪಸ್ಸಿನಂತೆ.ಅದನ್ನು ಈ ಲೇಖನದಲ್ಲಿ ಸವಿವರವಾಗಿ ಹೇಳಲಾಗಿದೆ. ಪ್ರಪಂಚದಲ್ಲಿ ಒಂದಲ್ಲಾ ಒಂದು ರೂಪದಲ್ಲಿ ವ್ರತಾಚರಣೆ ಇರುತ್ತದೆ. ಅದಕ್ಕೆ ತಕ್ಕಂತೆ, ಸೂಕ್ತವಾದ ನಿಯಮಗಳೂ ಇರುತ್ತವೆ. ಉಪವಾಸ ವ್ರತವೆಂದರೆ ಇಂದಿನ ದಿನಗಳಲ್ಲಿ ವಿಭಿನ್ನ ರೀತಿಯ ಫಲಾಹಾರಗಳನ್ನು ಸೇವಿಸಿ, ಆರಾಮವಾಗಿ ಇರುವುದು ಎಂಬಂತಾಗಿದೆ.
1. ಸನಾತನ ಪರಂಪರೆಯಲ್ಲಿ ಯಾವುದೇ ವ್ರತವನ್ನು ಆಚರಿಸುವ ಮೊದಲು ಯಾವ ದೇವರು-ದೇವತೆಗಾಗಿ ನೀವು ವ್ರತವನ್ನು ಇಟ್ಟುಕೊಂಡಿದ್ದೀರೋ ಆ ದೇವರು-ದೇವತೆಯಲ್ಲಿ ನಿಮಗೆ ಅಖಂಡ ಶ್ರದ್ಧೆ, ಭಕ್ತಿ ಮತ್ತು ವಿಶ್ವಾಸ ಇರಬೇಕು.
2. ವ್ರತ ಆರಂಭಿಸುವ ಮೊದಲೇ ನಿಮ್ಮಲ್ಲಿ ದೃಢ ಸಂಕಲ್ಪ ಇರಲಿ. ವ್ರತ ಎಷ್ಟು ದಿನಗಳ ಕಾಲ ಆಚರಿಸಲಿದ್ದೀರಿ? ಯಾವೆಲ್ಲ ವ್ರತ ನಿಯಮಗಳನ್ನು ಪಾಲನೆ ಮಾಡಲಿದ್ದೀರಿ ಎಂಬುದನ್ನು ಅರಿತುಕೊಳ್ಳೀ.
3. ವ್ರತವನ್ನು ಸದಾ ಶುಭ ದಿನ ಮತ್ತು ಶೂಬ ಮುಹೂರ್ತದಲ್ಲಿ ಪ್ರಾರಂಭಿಸಿ. ಇದರಿಂದ ನಿಮ್ಮ ಸಂಕಲ್ಪ ನಿರ್ವಿಘ್ನವಾಗಿ ಸಂಪನ್ನವಾಗಲಿದೆ.
4. ಸನಾತನ ಧರ್ಮದಲ್ಲಿ ಹೇಳಿರುವಂತೆ ಕ್ಷಮೆ, ಸತ್ಯ, ದಯೆ, ದಾನ, ಶೌರ್ಯ, ಇಂದ್ರಿಯ ಸಂಯಮ, ದೇವ ಪೂಜೆ, ಅಗ್ನಿ ಹೋತ್ರ ಇವೇ ಮುಂತಾದ ನಿಯಮಗಳನ್ನು ಖಡಕ್ಕಾಗಿ ಪಾಲಿಸಬೇಕು.
5. ವ್ರತದ ಅಂಗವಾಗಿ ಬ್ರಹ್ಮಚರ್ಯೆ ಪಾಲಿಸಬೇಕು. ಮನಸ್ಸಿನಲ್ಲಿಯೂ ಯಾವುದೇ ಕಾಮ ಅಥವಾ ಪಾಪದ ಭಾವನೆಗಳು ಪ್ರಕಟವಾಗಬಾರದು.
6. ವ್ರತದ ದಿನ ಮರೆತೂ ನಿದ್ದೆ ಮಾಡಬಾರದು. ಇದರಿಂದ ವ್ರತಕ್ಕೆ ಭಂಗ ಬರುತ್ತದೆ. ವ್ರತದ ದಿನ ಭಜನೆ, ಕೀರ್ತನೆ, ಧ್ಯಾನ, ಸ್ವಯಂ ಅಧ್ಯಯನ ಮಾಡಬೇಕು.
7. ವ್ರತದ ಸಂದರ್ಭದಲ್ಲಿ ನಿಮ್ಮ ಇಷ್ಟಾರ್ಥ ದೇವರ ಮಂತ್ರಗಳನ್ನು ಮೌನವಾಗಿ ಜಪದಂತೆ ಪಠಿಸಬೇಕು. ದೇವರ ಕತೆ, ದೇವರ ಕೀರ್ತನೆಗಳನ್ನು ಹೇಳಬೇಕು. ವ್ರತದ ಸಂದರ್ಭದಲ್ಲಿ ಕ್ರೋಧಗೊಳ್ಳಬೇಡಿ. ಅದರಿಂದ ಮಕ್ಕಳ ಮೇಲಾಗಲಿ ಅಥವಾ ಮನೆಯವರ ಮೇಲಾಗಲಿ ಕೂಗಾಡಬೇಡಿ, ರೇಗಾಡಬೇಡಿ.
8. ಯಾವುದೇ ಕಾರಣಕ್ಕೂ ನಿಮ್ಮ ವ್ರತ ಭಂಗವಾದಲ್ಲಿ, ಅಥವಾ ವ್ರತವನ್ನು ಅರ್ಧದಲ್ಲೇ ನಿಲ್ಲಿಸಬೇಕಾದಲ್ಲಿ ಆ ಬಗ್ಗೆ ನಿಮ್ಮ ಆರಾಧ್ಯ ದೇವರಲ್ಲಿ ಕ್ಷಮೆ ಕೇಳಿ. ಮುಖ್ಯವಾಗಿ ನಿಂತುಹೋದ ವ್ರತವನ್ನು ಮುಂದೆ ಯಾವಾಗಾಲಾದರೂ ಪೂರ್ಣಗೊಳಿಸುವುದನ್ನು ಮರೆಯಬೇಡಿ.
9. ವ್ರತ ಪೂರ್ಣವಾದ ಬಳಿಕ ಅದರ ವಿಧಿ ವಿಧಾನ ಉದ್ಯಾಪನ ಮಾಡಿ, ಹಿರಿಯರ ಆಶೀರ್ವಾದವನ್ನು ತಪ್ಪದೆ ಪಡೆಯಿರಿ.
(to get blessings of god know the important fasting rules)