ಈ 3 ರಾಶಿಯ ಜನರು ಪ್ರೇಮ-ಪ್ರಣಯದ ಉತ್ಕರ್ಷದಲ್ಲಿ ಇರುತ್ತಾರೆ! ಯಾವುವು ಆ ಮೂರು ರೋಮ್ಯಾಂಟಿಕ್ ರಾಶಿ ತಿಳಿಯೋಣ ಬನ್ನೀ

ವೃಷಭ ರಾಶಿಯವರು ತನ್ನ ಸಂಗಾತಿಯೆಡೆಗೆ ಇರುವ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸುತ್ತಾರೆ. ಹಾಗೆಂದು ಅದು ತೋರಿಕೆಯ ಪ್ರೀತಿಯಲ್ಲ. ನೈಜ ಪ್ರೀತಿ ಅವರದಾಗಿರುತ್ತದೆ. ಈ ಗುಣ ಲಕ್ಷಣ ವೃಷಭ ರಾಶಿಯವರಲ್ಲಿ ಮಾತ್ರ ಕಾಣಲು ಸಾಧ್ಯ. ವೃಷಭ ರಾಶಿಯವರು ಆಳವಾಗಿ ಪ್ರೀತಿಯಲ್ಲಿ ಬೇರೂರುತ್ತಾರೆ. ಎಂಥಹದೇ ಸಮಸ್ಯೆ ಎದುರಾದರೂ ಎದೆಗುಂದದೆ ಎದುರಿಸುತ್ತಾರೆ.

ಈ 3 ರಾಶಿಯ ಜನರು ಪ್ರೇಮ-ಪ್ರಣಯದ ಉತ್ಕರ್ಷದಲ್ಲಿ ಇರುತ್ತಾರೆ! ಯಾವುವು ಆ ಮೂರು ರೋಮ್ಯಾಂಟಿಕ್ ರಾಶಿ ತಿಳಿಯೋಣ ಬನ್ನೀ
ಈ 3 ರಾಶಿಯ ಜನರು ಪ್ರೇಮ-ಪ್ರಣಯದ ಉತ್ಕರ್ಷದಲ್ಲಿ ಇರುತ್ತಾರೆ! ಯಾವುವು ಆ ರೋಮ್ಯಾಂಟಿಕ್ ರಾಶಿಗಳು ತಿಳಿಯೋಣ ಬನ್ನೀ
Follow us
TV9 Web
| Updated By: preethi shettigar

Updated on: Oct 20, 2021 | 9:07 AM

ರೋಮ್ಯಾಂಟಿಕ್​ ಆಗಿರುವುದು, ಪ್ರೇಮ ಪ್ರಣಯದ ಉತ್ಕರ್ಷದಲ್ಲಿ ಇರುವುದು ಅಂದರೆ ಅದೊಂದು ತುಂಬಾ ಸುಂದರವಾದ ಅನುಭೂತಿ. ಕೆಲವರಿಗೆ ಅದು ಕೇವಲ ಒಂದು ಭಾವನೆಯಷ್ಟೆ ಅಲ್ಲ. ಜೀವನದ ಒಂದು ಅವಿಭಾಜ್ಯ ಅಂಗ. ಇಂತಹವರು ಹೃದಯಾಂತರಾಳದಿಂದ ಪ್ರೀತಿ ಮಾಡಲು ಬಯಸುತ್ತಾರೆ.

ಹೀಗೊಂದು ಅನುಭೂತಿ ಕಲ್ಪಿಸಿಕೊಳ್ಳಿ. ಹಿನ್ನೆಲೆಯಲ್ಲಿ ಸುಮಧುರವಾದ ಸಂಗೀತ ಅಲೆಅಲೆಯಾಗಿ ತೇಲಿಬರುತ್ತಿರುತ್ತದೆ, ಒಂದು ಸುಳಿಗಾಳಿ ನಿಮ್ಮ ಮೈಮುಟ್ಟಲು ತಹತಹಿಸುತ್ತಿದೆ, ಹೊಟ್ಟೆಯಲ್ಲಿ ಚಿಟ್ಟೆಗಳು ಸುತ್ತ ತೊಡಗುತ್ತಿವೆ ಎಂಬ ಅನುಭವ ನಿಮ್ಮದಾದರೆ ಯಾವುದೇ ಸಂದೇಹವಿಲ್ಲ ನೀವು ಲವ್ ನಲ್ಲಿ ಬಿದ್ದಿರಿ, ರೋಮ್ಯಾಂಟಿಕ್ ಆಗತೊಡಗಿದಿರಿ ಎಂದೇ ಅರ್ಥ. ​​

ಇಂತಹ ರೋಮ್ಯಾಂಟಿಕ್ ಅನುಭೂತಿ ನಿಮ್ಮದಾಗಿದ್ದರೆ ನೀವು ಈ ಕೆಳಗಿನ ಮೂರು ರಾಶಿಗಳ ಪೈಕಿ ಒಬ್ಬರು ಎಂಬುದು ಅರ್ಥವಾದೀತು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರದಲ್ಲಿಯೇ ಇದನ್ನು ಹೇಳಲಾಗಿದೆ. ಹಾಗಾದರೆ ಯಾವುವು ಆ ಮೂರು ರೋಮ್ಯಾಂಟಿಕ್​ ರಾಶಿಗಳು ತಿಳಿಯೋಣ ಬನ್ನೀ.

ಸಿಂಹ ರಾಶಿ: ನೀವು ಸಿಂಹ ರಾಶಿಯವರು ಆಗಿದ್ದರೆ ನಿಜಕ್ಕೂ ನೀವು ರೋಮ್ಯಾಂಟಿಕ್ ಜೀವಿಗಳು. ಅವರು ವಿಶಿಷ್ಟವಾಗಿ ಪ್ರೇಮ ಮತ್ತು ಪ್ರಶಂಸೆಯ ಭಾವನೆಗಳಲ್ಲಿ ತೇಲುತ್ತಿರುತ್ತಾರೆ. ಸಿಂಹ ರಾಶಿಯವರು ತಮ್ಮಲ್ಲಿ ಪುಟಿಯುತ್ತಿರುವ ರೋಮ್ಯಾಂಟಿಕ್ ಭಾವನೆಗಳಿಂದಾಗಿ ಸುತ್ತಮುತ್ತಲ ವಾತಾವರಣವೂ ಪ್ರೀತಿಯಿಂದ ತುಂಬಿರುವಂತೆ ಮಾಡುತ್ತಾರೆ. ತನ್ನ ಸಂಗಾತಿ ಯಾವುದೇ ರಾಜ ಅಥವಾ ರಾಣಿಗಿಂತ ಕಡಿಮೆಯಲ್ಲ ಎಂಬಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ರತಿ ಚಟುವಟಿಕೆಯಲ್ಲೂ ಪ್ರೀತಿಯನ್ನು ತುಳುಕಿಸುತ್ತಾರೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಸದಾ ಪ್ರೀತಿ ಪ್ರೇಮದಲ್ಲಿ ಮುಳುಗಿರುತ್ತಾರೆ. ತಮ್ಮ ಪ್ರೇಮವನ್ನು ಮರೆಯುವುದಿಲ್ಲ. ಅದೆಲ್ಲೇ ಕಾಲ ಕಳೆಯುತ್ತಿರುತ್ತಾರೆ. ಹೊರಗಿನಿಂದ ಬಲಿಷ್ಠರಂತೆ ಕಂಡರೂ ಪ್ರೀತಿ ಪ್ರೇಮದ ವಿಷಯದಲ್ಲಿ ಕರಗಿಬಿಡುತ್ತಾರೆ. ಅದು ಅವರ ಸಂಗಾತಿಗೆ ಮಧುರ ಅನುಭವ ಕೊಡುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರು ತನ್ನ ಸಂಗಾತಿಯೆಡೆಗೆ ಇರುವ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸುತ್ತಾರೆ. ಹಾಗೆಂದು ಅದು ತೋರಿಕೆಯ ಪ್ರೀತಿಯಲ್ಲ. ನೈಜ ಪ್ರೀತಿ ಅವರದಾಗಿರುತ್ತದೆ. ಈ ಗುಣ ಲಕ್ಷಣ ವೃಷಭ ರಾಶಿಯವರಲ್ಲಿ ಮಾತ್ರ ಕಾಣಲು ಸಾಧ್ಯ. ವೃಷಭ ರಾಶಿಯವರು ಆಳವಾಗಿ ಪ್ರೀತಿಯಲ್ಲಿ ಬೇರೂರುತ್ತಾರೆ. ಎಂಥಹದೇ ಸಮಸ್ಯೆ ಎದುರಾದರೂ ಎದೆಗುಂದದೆ ಎದುರಿಸುತ್ತಾರೆ.

(people with these 3 zodiac signs are very romantic know about these zodiacs)

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ