Viral Video: ಕರ್ವಾ ಚೌತ್ಗೆ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಡುವಾಗ ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಚಪ್ಪಲಿಯೇಟು!
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಕರ್ವಾ ಚೌತ್‌ನಲ್ಲಿ ತನ್ನ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆ ಮಾತೊಂದಿದೆ. ನಾವು ಮಾಡಿದ ತಪ್ಪನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಒಂದಲ್ಲ ಒಂದು ದಿನ ಸಿಕ್ಕಿಹಾಕಿಕೊಳ್ಳುವುದು ಖಚಿತ. ಉತ್ತರ ಭಾರತದಲ್ಲಿ ಕರ್ವಾ ಚೌತ್ (Karwa Chauth) ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಇದು ವಿವಾಹಿತ ಮಹಿಳೆಯರ ಪಾಲಿನ ವಿಶೇಷ ಹಬ್ಬ. ಆದರೆ, ತನ್ನ ಪ್ರೇಯಸಿಯೊಂದಿಗೆ ಕರ್ವಾಚೌತ್ ಹಬ್ಬದ ಶಾಪಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದ ಕರ್ವಾ ಚೌತ್ ದಿನ ಹೆಂಡತಿಯಿಂದ ಪೂಜೆ ಮಾಡಿಸಿಕೊಳ್ಳುವ ಬದಲು ಅದೇ ಹೆಂಡತಿಯಿಂದ ಚಪ್ಪಲಿಯೇಟು ತಿಂದಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಕರ್ವಾ ಚೌತ್‌ನಲ್ಲಿ ತನ್ನ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಥಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆತನ ಹೆಂಡತಿ ತನ್ನ ಕೆಲವು ಸ್ನೇಹಿತರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಥಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಪತ್ನಿ ತನ್ನ ಚಪ್ಪಲಿ ತೆಗೆದು ಪತಿ ಮತ್ತು ಆತನ ಪ್ರೇಯಸಿಗೆ ತೀವ್ರವಾಗಿ ಥಳಿಸಿದ್ದಾಳೆ. ಇದರಿಂದ ಆ ಸ್ಥಳದಲ್ಲಿ ಅಪಾರ ಜನಸ್ತೋಮ ಜಮಾಯಿಸಿತ್ತು.
ಇದನ್ನೂ ಓದಿ: Shocking Video: ನದಿಯಲ್ಲಿ ಸ್ನಾನ ಮಾಡುವಾಗ ಹೆಂಡತಿಗೆ ಮುತ್ತು ಕೊಟ್ಟ ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಜನ!
ಅಂಗಡಿಯೊಂದಕ್ಕೆ ನುಗ್ಗಿದ ಮಹಿಳೆ ಅಲ್ಲಿದ್ದ ತನ್ನ ಗಂಡ ಮತ್ತು ಆತನ ಪ್ರಿಯತಮೆಯನ್ನು ಹೊರಗೆ ರಸ್ತೆಗೆ ಎಳೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಇದನ್ನು ಅಲ್ಲಿದ್ದವರು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
#पुरुष वर्ग कृपया ध्यान दे.. आज घर वाली पर ही संपूर्ण आस्था केंद्रित रखें. अन्यथा.. गाजियाबाद तुराबनगर मार्केट में करवाचौथ के दिन दूसरी महिला को शॉपिंग करवा रहा था पति. पत्नी ने मार्केट में रंगे हाथों पकड़ा..फिर क्या हुआ विडियो में देखें. pic.twitter.com/M7byodsbCB
— Yogesh Tiwari (@yogirishuNBT) October 13, 2022
ಪ್ರೀತಿ ಎಂಬ ಮಹಿಳೆ 2017ರಲ್ಲಿ ರಾಹುಲ್ ಜೊತೆ ವಿವಾಹವಾಗಿದ್ದರು. ಮದುವೆಯ ನಂತರ ಇಬ್ಬರ ನಡುವೆ ಜಗಳ ನಡೆದಿದ್ದು, ಕಳೆದ ಮೂರು ವರ್ಷಗಳಿಂದ ಪ್ರೀತಿ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಾಳೆ. ಇಬ್ಬರ ನಡುವಿನ ವಿವಾದಕ್ಕೆ ಸಂಬಂಧಿಸಿದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ, ತನ್ನ ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ತನಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರೀತಿ ಆರೋಪಿಸಿದ್ದಾರೆ.