ಗದಗ: ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆಮ್ಮದಿ ಮತ್ತು ಸೂಕ್ತ ರಕ್ಷಣೆ ಇಲ್ಲ ಎಂಬುದು ಕಳ್ಳತನ ಪ್ರಕರಣದಿಂದ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಹೆರಿಗೆ, ಮಕ್ಕಳ ವಿಭಾಗಕ್ಕೂ ನುಗ್ಗಿ ಕಳವು ಮಾಡಲಾಗಿದೆ. ಇದರೊಂದಿಗೆ ಮಕ್ಕಳ ಕಳ್ಳರ ಹಾವಳಿಯೊಂದಿಗೆ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿಯ ಭೀತಿ ಎದುರಾಗಿದೆ. ರಾತ್ರಿ ಬಾಣಂತಿಯರು ನಿದ್ರೆಯಲ್ಲಿದ್ದಾಗ ನಗದು ಮೊಬೈಲ್ ಕಳ್ಳತನ ಮಾಡಲಾಗಿದ್ದು, ಮಕ್ಕಳ ಕಳವು ಆತಂಕವೂ ಎದುರಾಗಿದೆ. ಆಸ್ಪತ್ರೆಯಲ್ಲಿ ಸಿಸಿಕ್ಯಾಮರಾ ಇದ್ದೂ ಇಲ್ಲದಂತಾಗಿದೆ ಎಂದು ರೋಗಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಆತಂಕದ ನಡುವೆ ರೋಗಿಗಳು ಆಸ್ಪತ್ರೆಯಲ್ಲಿ ದಿನ ಕಳೆಯುತ್ತಿದ್ದರೂ ಜಿಮ್ಸ್ ಆಸ್ಪತ್ರೆ ಆಡಳಿತ ಕ್ಯಾರೇ ಅನ್ನುತ್ತಿಲ್ಲ ಎಂದು ರೋಗಿಗಳು ಹೇಳುತ್ತಿದ್ದಾರೆ. ಸಿಸಿ ಟಿವಿ ಪರಿಶೀಲನೆ ನಡೆಸುವಂತೆ ಕೇಳಿಕೊಂಡರೂ ಕಳ್ಳರ ಚಲನವಲನ ಪರಿಶೀಲನೆ ಮಾಡದೇ ವೈದ್ಯರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.
ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ
ಬೆಂಗಳೂರು: ನಗರದ ವಿದ್ಯಾರಣ್ಯಪುರ ಹಾಗೂ ಚಿಕ್ಕಜಾಲ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಲಿಗೆಕೋರರಿಂದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವವರನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಅವರನ್ನು ಅಡ್ಡಗಟ್ಟಿ ಮೊಬೈಲ್ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಪ್ರಕರಣ ಸಂಬಂಧ ಚಿಕ್ಕಜಾಲ ಪೊಲೀಸರು ನಾಗೇಶ ಎಂಬ ಆರೋಪಿಯನ್ನು ಬಂಧಿಸಿದರೆ, ವಿದ್ಯಾರಣ್ಯಪುರ ಪೊಲೀಸರಿಂದ ಸಮಾದ್ ಹಾಗೂ ಶಿವಕುಮಾರ್ ಎಂಬವರ ಬಂಧನವಾಗಿದೆ.
ಕೆಲಸ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ
ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಅಭ್ಯರ್ಥಿಗಳಿಗೆ ಪೊಲೀಸರು ಕೋಟಿ ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದ್ದು, ಚಿಕ್ಕಜಾಲ ಠಾಣೆಯ ಎಸ್ಬಿ ಕಾನ್ಸ್ಟೇಬಲ್ ರವಿಯನ್ನ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. BWSSB ನಲ್ಲಿ ಕೆಲಸ ಕೊಡಿಸೂದಾಗಿ ಹೇಳಿ ಚಿಕ್ಕಜಾಲ ಠಾಣೆಯ ಎಸ್ಬಿ ಕಾನ್ಸ್ಟೇಬಲ್ ರವಿ ಮತ್ತು ಇನ್ಸ್ಪೆಕ್ಟರ್ ಪ್ರವೀಣ್ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ. ಸದ್ಯ ರವಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Fri, 7 October 22