ಉತ್ತರ ಪ್ರದೇಶ(Uttar Pradesh)ದ ಬಲ್ಲಿಯಾದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಒಂದೂವರೆ ತಿಂಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೋಲೀಸರ ಪ್ರಕಾರ, ಅಪ್ರಾಪ್ತ ಬಾಲಕಿ ಜುಲೈ 9 ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಗ್ರಾಮದಿಂದ ನಾಪತ್ತೆಯಾಗಿದ್ದಾಳೆ. ಮರುದಿನ ಹುಡುಗಿಯ ತಂದೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಆಗಸ್ಟ್ 26 ರಂದು, ಅಪ್ರಾಪ್ತ ಬಾಲಕಿಯನ್ನು ಡಿಯೋರಿಯಾದಿಂದ ರಕ್ಷಿಸಲಾಯಿತು ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ಬಿಹಾರದ ಸಿವಾನ್ ಜಿಲ್ಲೆಯ ನಿವಾಸಿ ರಾಹುಲ್ ಕುಮಾರ್ ಸಿಂಗ್ (19) ತನ್ನನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಅವಳನ್ನು ಅಪಹರಿಸಿದ ನಂತರ ಡಿಯೋರಿಯಾಗೆ ಕರೆದೊಯ್ದಿದ್ದ, ಆಕೆಯನ್ನು ಸೆರೆಯಲ್ಲಿಟ್ಟುಕೊಂಡು ಸುಮಾರು ಒಂದೂವರೆ ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಸೋಮವಾರ ಠಾಣೆ ಕ್ರಾಸಿಂಗ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್, 16 ಜನರ ವಿರುದ್ಧ ಎಫ್ಐಆರ್
ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್
ಜಮೀನಿನಲ್ಲಿ ಉಳುಮೆ ಮಾಡಲು ಹೋದಾಗ ಮಹಿಳೆ ಮೇಲೆ ಸಂಬಂಧಿಕರೇ ಅತ್ಯಾಚಾರ ಎಸಗಿದ ಆರೋಪ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಪ್ರಕರಣ ಸಂಬಂಧ 16 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ನಡುವೆ ಪ್ರಕರಣ ಸಂಬಂಧ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಶ್ರೀನಿವಾಸ್ ಸತ್ಯನಾರಯಣ್, ರಾಧಾ ಶ್ರೀನಿವಾಸ್, ಪ್ರದೀಪ್ ಶ್ರೀನಿವಾಸ್, ಸುದೀಪ್ ಶ್ರೀನಿವಾಸ್ ಹಾಗೂ ಗೋಪಾಲ್ ರಾವ್ ಪುಲ್ಲಯ್ಯ ಕೊಠಾರಿ, ರಾಮರಾವ್ ವೆಂಕಟನಾರಯಣ್ ಸೇರಿದಂತೆ 16 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ