ರಾಜಸ್ಥಾನ: ಬಾಲಕಿಯನ್ನು ಭೇಟಿಯಾಗಲು ಹೋಗಿದ್ದ ಯುವಕನಿಗೆ ಥಳಿಸಿ, ಮೂತ್ರ ಕುಡಿಸಿದ ಗ್ರಾಮಸ್ಥರು

|

Updated on: Feb 07, 2023 | 5:36 PM

ಮಾಹಿತಿ ಪಡೆದ ಕುಟುಂಬದ ಸದಸ್ಯರು ಕೂಡ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸುವಂತೆ ಮನವಿ ಮಾಡಿದರು. ಆದರೆ ಗ್ರಾಮಸ್ಥರು ಎಚ್ಚರಿಕೆ ನೀಡಿ ಬಿಡುವ ಮುನ್ನ ಆತನ ಬಾಯಿಗೆ ಮೂತ್ರ ಸುರಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜಸ್ಥಾನ: ಬಾಲಕಿಯನ್ನು ಭೇಟಿಯಾಗಲು ಹೋಗಿದ್ದ  ಯುವಕನಿಗೆ ಥಳಿಸಿ, ಮೂತ್ರ ಕುಡಿಸಿದ ಗ್ರಾಮಸ್ಥರು
ಪ್ರಾತಿನಿಧಿಕ ಚಿತ್ರ
Follow us on

ಜೋಧ್‌ಪುರ: ರಾಜಸ್ಥಾನದ (Rajasthan) ಜಲೋರ್‌ ಜಿಲ್ಲೆಯಲ್ಲಿ ಬಾಲಕಿಯನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿಯನ್ನು ಗ್ರಾಮಸ್ಥರ ಗುಂಪೊಂದು ಹಿಡಿದು ಮರಕ್ಕೆ ಕಟ್ಟಿ, ಥಳಿಸಿ, ಬಾಯಿಗೆ ಮೂತ್ರ ಸುರಿದಿರುವ ಘಟನೆ ವರದಿಯಾಗಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯೂ ಅವರು ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ ಹಲ್ಲೆಗೊಳಗಾದ ವ್ಯಕ್ತಿ ಭಾನುವಾರ ರಾತ್ರಿ ಹತ್ತಿರದ ಹಳ್ಳಿಯಲ್ಲಿ ಹುಡುಗಿಯನ್ನು ಭೇಟಿಯಾಗಲು ಬಂದಿದ್ದರು. ಆ ವೇಳೆ ಗ್ರಾಮಸ್ಥರು ಮತ್ತು ಬಾಲಕಿಯ ಕುಟುಂಬಸ್ಥರು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದಾರೆ.

ಮಾಹಿತಿ ಪಡೆದ ಕುಟುಂಬದ ಸದಸ್ಯರು ಕೂಡ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸುವಂತೆ ಮನವಿ ಮಾಡಿದರು. ಆದರೆ ಗ್ರಾಮಸ್ಥರು ಎಚ್ಚರಿಕೆ ನೀಡಿ ಬಿಡುವ ಮುನ್ನ ಆತನ ಬಾಯಿಗೆ ಮೂತ್ರ ಸುರಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಮವಾರ ವೈರಲ್ ಆಗಿದೆ ಎಂದು ಜಲೋರ್  ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್‌ವಾಲಾ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಂತ್ರಿಮಾಲ್‌ ಹಿಂಭಾಗದ ಮನೆ ಬೆಂಕಿ ಅವಘಡ, ಓರ್ವ ಮಹಿಳೆ ಸಜೀವದಹನ

“ಎಫ್‌ಐಆರ್ ದಾಖಲಿಸಲು ಯಾರೂ ಮುಂದೆ ಬರದಿದ್ದರೂ, ನಾವು ಸಂತ್ರಸ್ತ ವ್ಯಕ್ತಿಯನ್ನು ಗುರುತಿಸಿದ್ದೇವೆ ಮತ್ತು ಸಂಪರ್ಕಿಸಿದ್ದೇವೆ. ಅವರಿಂದ ಎಫ್‌ಐಆರ್ ತೆಗೆದುಕೊಂಡಿದ್ದೇವೆ” ಎಂದು ಅಗರ್‌ವಾಲಾ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಅವನು ಭೇಟಿಯಾಗಲು ಹೋಗಿದ್ದ ಹುಡುಗಿ ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ಮುಂದಿನ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಅಗರ್‌ವಾಲಾ ಹೇಳಿದರು.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ