ಓಹ್! ಟರ್ಫ್ ಕ್ಲಬ್ ಇದುವರೆಗೂ ನಯಾಪೈಸೆ GST ಕಟ್ಟಿಲ್ಲ!?

|

Updated on: Dec 07, 2019 | 6:15 PM

ಬೆಂಗಳೂರು: ನಗರದ ಹೈದರ ಭಾಗದಲ್ಲಿರುವ ಟರ್ಫ್ ಕ್ಲಬ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರೋದು ಪತ್ತೆಯಾಗಿದ್ದು, ಇದುವರೆಗೂ ನಯಾಪೈಸೆ GST ಕಟ್ಟಿಲ್ಲ! ಜಿ ಎಸ್ ಟಿ ಶುರುವಾದಾಗಿನಿಂದ BTC ವಂಚನೆ ಮಾಡುತ್ತಾ ಬಂದಿದೆ. ಇದು ಬಹುದೊಡ್ಡ ಮೊತ್ತದ ವಂಚನೆ ಎನ್ನಬಹುದಾಗಿದೆ. ಸದ್ಯ ಪ್ರಕರಣ ಸಂಬಂಧ 40 ಜನರನ್ನು ವಶಕ್ಕೆ ಪಡೆಯಲಾಗಿದೆ. ಕ್ರಿಕೆಟ್ ಬುಕ್ಕಿಗಳ ರೀತಿಯಲ್ಲೆ ರೇಸ್ ನಲ್ಲಿ ಬುಕ್ಕಿಗಳು ಕಾರ್ಯ ನಿರ್ವಹಿಸುತ್ತಾರೆ. ಇತ್ತೀಚೆಗೆ ಟರ್ಫ್ ಕ್ಲಬ್ ವ್ಯವಹಾರಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಅಧಿಕಾರಿಗಳು, […]

ಓಹ್! ಟರ್ಫ್ ಕ್ಲಬ್ ಇದುವರೆಗೂ ನಯಾಪೈಸೆ GST ಕಟ್ಟಿಲ್ಲ!?
Follow us on

ಬೆಂಗಳೂರು: ನಗರದ ಹೈದರ ಭಾಗದಲ್ಲಿರುವ ಟರ್ಫ್ ಕ್ಲಬ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರೋದು ಪತ್ತೆಯಾಗಿದ್ದು, ಇದುವರೆಗೂ ನಯಾಪೈಸೆ GST ಕಟ್ಟಿಲ್ಲ! ಜಿ ಎಸ್ ಟಿ ಶುರುವಾದಾಗಿನಿಂದ BTC ವಂಚನೆ ಮಾಡುತ್ತಾ ಬಂದಿದೆ. ಇದು ಬಹುದೊಡ್ಡ ಮೊತ್ತದ ವಂಚನೆ ಎನ್ನಬಹುದಾಗಿದೆ. ಸದ್ಯ ಪ್ರಕರಣ ಸಂಬಂಧ 40 ಜನರನ್ನು ವಶಕ್ಕೆ ಪಡೆಯಲಾಗಿದೆ. ಕ್ರಿಕೆಟ್ ಬುಕ್ಕಿಗಳ ರೀತಿಯಲ್ಲೆ ರೇಸ್ ನಲ್ಲಿ ಬುಕ್ಕಿಗಳು ಕಾರ್ಯ ನಿರ್ವಹಿಸುತ್ತಾರೆ.

ಇತ್ತೀಚೆಗೆ ಟರ್ಫ್ ಕ್ಲಬ್ ವ್ಯವಹಾರಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಅಧಿಕಾರಿಗಳು, 15 ದಿನಗಳಿಂದ ನಿತ್ಯ ರೇಸ್​ ಕೋರ್ಸ್​ಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ನಿನ್ನೆ ದಾಳಿ ನಡೆಸಿದಾಗ ಹಲವು ದಾಖಲೆಗಳು ಮತ್ತು ಹಣ ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Published On - 1:47 pm, Sat, 7 December 19