ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡುತ್ತಿದ್ದ ಕಿರಾತಕ ಅರೆಸ್ಟ್
ಹಾಸನ: ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೇಡಿಗೆ ಗ್ರಾಮದ ನಿವಾಸಿ ಪ್ರಶಾಂತ ರಾಜಶೇಖರ್ ವಾಮ ಬಂಧಿತ ಆರೋಪಿ. ಮೊದಲಿಗೆ ಫೇಸ್ಬುಕ್ನಲ್ಲಿ ಯುವತಿಯರ ಫೋಟೋ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ಯುವತಿಯರ ಫೋಟೋಗಳಿಗೆ ನಗ್ನ ರೂಪ ಕೊಡುತ್ತಿದ್ದರು. ನಂತರ ಯುವತಿಯರ ಫೋನ್ ನಂಬರ್ ಸಂಗ್ರಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದರು. ಹಣ ಕೊಡದಿದ್ದರೆ ನಗ್ನ ಫೋಟೋ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಹಾಸನದ ಯುವತಿಯೊಬ್ಬಳಿಗೆ […]
ಹಾಸನ: ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೇಡಿಗೆ ಗ್ರಾಮದ ನಿವಾಸಿ ಪ್ರಶಾಂತ ರಾಜಶೇಖರ್ ವಾಮ ಬಂಧಿತ ಆರೋಪಿ.
ಮೊದಲಿಗೆ ಫೇಸ್ಬುಕ್ನಲ್ಲಿ ಯುವತಿಯರ ಫೋಟೋ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ಯುವತಿಯರ ಫೋಟೋಗಳಿಗೆ ನಗ್ನ ರೂಪ ಕೊಡುತ್ತಿದ್ದರು. ನಂತರ ಯುವತಿಯರ ಫೋನ್ ನಂಬರ್ ಸಂಗ್ರಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದರು. ಹಣ ಕೊಡದಿದ್ದರೆ ನಗ್ನ ಫೋಟೋ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು.
ಹಾಸನದ ಯುವತಿಯೊಬ್ಬಳಿಗೆ 25 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದ. ಒಮ್ಮೆ ಹಣ ವಸೂಲಿ ಮಾಡಿ ಮತ್ತೊಮ್ಮೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.