ಗುರುಗ್ರಾಮ: ಪತ್ನಿಯನ್ನು ಕೊಂದು, ಶವಕ್ಕೆ ಮಗನ ಕಟ್ಟಿಹಾಕಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಪತ್ನಿಯನ್ನು ಕೊಂದು ಆಕೆಯ ಶವಕ್ಕೆ ಮಗನನ್ನು ಕಟ್ಟಿಹಾಕಿ, ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ನಂತರ ಗಾಜಿಯಾಬಾದ್‌ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಗುರುಗ್ರಾಮ: ಪತ್ನಿಯನ್ನು ಕೊಂದು, ಶವಕ್ಕೆ ಮಗನ ಕಟ್ಟಿಹಾಕಿ, ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಗುರುಗ್ರಾಮ
Image Credit source: Siasat.com

Updated on: Jan 02, 2024 | 8:53 AM

ಪತ್ನಿಯನ್ನು ಕೊಂದು ಆಕೆಯ ಶವಕ್ಕೆ ಮಗನನ್ನು ಕಟ್ಟಿಹಾಕಿ, ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ನಂತರ ಗಾಜಿಯಾಬಾದ್‌ನ ಕೌಶಂಬಿ ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

30 ವರ್ಷದ ಗೌರವ್ ಶರ್ಮಾ ಎಂಬುವವರು ಚೂಪಾದ ಆಯುಧದಿಂದ ಪತ್ನಿಯ ಕತ್ತು ಸೀಳಿ, ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ತನ್ನ ಮಗನಿಗೂ ಕೂಡ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಎಲ್‌ಎಫ್ 3 ನೇ ಹಂತದಲ್ಲಿರುವ ಮನೆಯೊಳಗಿಂದ ಬಾಲಕ ಕೂಗುವುದನ್ನು ಅರಿತ ಅಕ್ಕಪಕ್ಕದ ಮನೆಯವರು ತಕ್ಷಣವೇ ಮನೆಗೆ ಧಾವಿಸಿದ್ದರು. ಆದರೆ ಆತನ ಮನೆಗೆ ಬೀಗ ಹಾಕಿತ್ತು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದರು. ಘಟನಾ ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಮತ್ತು ಗಾಯಗೊಂಡ ಮಗು ಅದರ ಬಳಿ ಅಳುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಚಿಕ್ಕಮಗಳೂರು: ಚಲಿಸುತ್ತಿದ್ದ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ ಮತ್ತು ವಿದ್ಯಾರ್ಥಿನಿ

ಮೃತ ಮಹಿಳೆಯ ಮೊಬೈಲ್ ಫೋನ್ ಶೌಚಾಲಯದ ಸೀಟಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮಗುವನ್ನು ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಆತನನ್ನು ಮಹಿಳೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು, ಅವರು ಆಗ್ರಾದ ಅವರ ಸ್ಥಳೀಯ ಸ್ಥಳಕ್ಕೆ ಕರೆದೊಯ್ದರು.

ಮೂಲತಃ ಆಗ್ರಾದವರಾದ ಲಕ್ಷ್ಮಿ ಅವರು ತಮ್ಮ ಪತಿ ಗೌರವ್ ಅವರೊಂದಿಗೆ ಗುರುಗ್ರಾಮ್‌ನಲ್ಲಿ ನೆಲೆಸಿದ್ದರು. ಸುಮಾರು ಆರು ತಿಂಗಳ ಹಿಂದೆ ದಂಪತಿಗಳು ಗುರುಗ್ರಾಮ್‌ಗೆ ಸ್ಥಳಾಂತರಗೊಂಡಿದ್ದರು. ಗೌರವ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಈ ದಿನಗಳಲ್ಲಿ ನಿರುದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿ ನಡುವಿನ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯನ್ನು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರವ್ ರಾತ್ರಿ 11.45ರ ಸುಮಾರಿಗೆ ಗಾಜಿಯಾಬಾದ್​ನ ಕೌಶಂಬಿ ಪೆಟ್ರೋ ನಿಲ್ದಾಣದಿಂದ ಜಿಗಿದು ಸಾವನ್ನಪ್ಪಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಟ್ರಾನ್ಸ್ ಹಿಂಡನ್ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶುಭಂ ಪಟೇಲ್ ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ