ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ಸಾಲುಸಾಲು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದರೂ ಪೊಲೀಸರು ಮಾತ್ರ ನಿಷ್ಕ್ರಿಯ
ಹಾಪುರನಿಂದ ವಾಪಸ್ಸಾಗುವಾಗ ಅರೋಪಿಗಳು ನೀರು ಕುಡಿಯವ ನೆಪದಲ್ಲಿ ವಾಹನವನ್ನು ಒಂದು ಹೋಟೆಲ್ ಬಳಿ ನಿಲ್ಲಿಸಿದ್ದಾರೆ. ಹೋಟೆಲ್ನ ಒಂದು ರೂಮಿನಲ್ಲಿ ಆರೋಪಿತರು ಆಕೆಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ.
ಶಿಂಭೌಲಿ: ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಎಷ್ಟೋ ಪ್ರಕರಣಗಳು ಬೇಳಕಿಗೆ ಬಾರದೆ ಮುಚ್ಚಿಹೋಗುತ್ತವೆ. ಬೇಳಕಿಗೆ ಬಂದರೂ ಸಂತ್ರಸ್ತರಿಗೆ ನೆರವು ಸಿಗುವ ಸಾಧ್ಯತೆಗಳು ತೀರ ಕಡಿಮೆ ಎನ್ನುವ ವಿದ್ಯಮಾನಗಳು ನಮ್ಮ ದೇಶದಲ್ಲಿವೆ. ಇಂಥ ಹೇಯ ಘಟನೆಗಳ ನಂತರ ಸಂತ್ರಸ್ತೆ ಅನುಭವಿಸುವ ನೋವು, ಮಾನಸಿಕ ಯಾತನೆ, ಸಮಾಜದ ತಿರಸ್ಕಾರ ಮೊದಲಾದವುಳ ಜೊತೆಗೆ ಕುಟುಂಬದ ಸದಸ್ಯರೇ ಅಕೆಯನ್ನು ನಿರ್ಲಕ್ಷಿಸಿರುವ ಅನೇಕ ಪ್ರಕರಣಗಳು ನಮ್ಮೆದುರಿಗಿವೆ. ಈ ಕಾರಣಗಳಿಂದಾಗೇ ಹಲವಾರು ಮಹಿಳೆಯರು ದೂರು ದಾಖಲಿಸುವ ಗೋಜಿಗೆ ಹೋಗದೆ, ತಮ್ಮೊಳಗೆ ಕೊರಗುತ್ತಾ ಜೀವನ ಸವೆಸುತ್ತಾರೆ. ಆದರೆ, ಕೆಲ ದಿಟ್ಟ ಮಹಳೆಯರು ನ್ಯಾಯಕ್ಕಾಗಿ ಹೋರಾಡುತ್ತಾರೆ.
ಅಂಥ ದಿಟ್ಟ ಮಹಿಳೆಯರಲ್ಲಿ ಉತ್ತರ ಪ್ರದೇಶ ಹಾಪುರ ಜಿಲ್ಲೆಯ ಮುಕ್ತೇಶ್ವರ ಪ್ರದೇಶದ ಈ ಮಹಿಳೆಯೂ ಸೇರಿದ್ದಾರೆ. ಆಕೆ, ಆರೋಪಿ ಗರ್ಹ್ ಕೊತ್ವಾಲಿ ಹೆಸರಿನ ಒಬ್ಬ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯು ವಿಧವೆಯಾಗಿದ್ದು ಗರ್ಹ್ ಮುಕ್ತೇಶ್ವರ ಪಟ್ಟಣದ ನಿವಾಸಿಯಾಗಿದ್ದಾರೆ. ತನ್ನ ದೂರಿನಲ್ಲಿ ಆಕೆ, ಇಬ್ಬರು ಪರಿಚಿತ ಪುರುಷರು ವಿಧವಾ ವೇತನ ಅರ್ಜಿ ಭರ್ತಿ ಮಾಡಿಸುವುದಕ್ಕೆ ಹಾಪುರ್ಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಹಾಪುರನಿಂದ ವಾಪಸ್ಸಾಗುವಾಗ ಅರೋಪಿಗಳು ನೀರು ಕುಡಿಯವ ನೆಪದಲ್ಲಿ ವಾಹನವನ್ನು ಒಂದು ಹೋಟೆಲ್ ಬಳಿ ನಿಲ್ಲಿಸಿದ್ದಾರೆ. ಹೋಟೆಲ್ನ ಒಂದು ರೂಮಿನಲ್ಲಿ ಆರೋಪಿತರು ಆಕೆಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಿಸಿದ್ದಾರೆ.
ಆದರೆ, ಆಕೆ ಅದ್ಹೇಗೋ ಅವರ ಕಪಿಮುಷ್ಟಿಯಯಿಂದ ತಪ್ಪಿಸಿಕೊಂಡು ತಮ್ಮ ಊರಿಗೆ ವಾಪಸ್ಸು ಹೋಗಿದ್ದಾರೆ ಮತ್ತು ಮರುದಿನವೇ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಆಕೆ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.
ಆದರೆ, ಶಿಂಭೌಲಿ ಪೊಲೀಸರ ಮಾತ್ರ ಅತ್ಯಾವಾರ ನಡೆದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಹಾಪುರ ಜಿಲ್ಲೆಯ ಇದೇ ಶಿಂಭೌಲಿ ಪ್ರದೇಶದಲ್ಲಿ ತನ್ನ ಪಕ್ಕದ ಮನೆಯವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ 15-ವರ್ಷ ವಯಸ್ಸಿನ ಅಪ್ರಾಪ್ತೆ ಬುಧವಾರದಂದು ಪ್ರಾಣ ಬಿಟ್ಟಿದ್ದಾಳೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದೌರ್ಜನ್ಯವೆಸಗಿದ ವ್ಯಕ್ತಿಯು, ಸಾಕ್ಷ್ಯವನ್ನು ನಾಶ ಮಾಡುವುದಕ್ಕೋಸ್ಕರ ಅಕೆಗೆ ವಿಷಪ್ರಾಶನ ಮಾಡಿಸಿದ್ದ. ಪ್ರಕರಣ ಬೆಳಕಿಗೆ ಬರುತ್ತಲೇ, ಆರೋಪಿಯು, ಸಂತ್ರಸ್ತ ಬಾಲಕಿಗೆ ತಂಪು ಪಾನೀಯವೊಂದಕ್ಕೆ ವಿಷ ಬೆರೆಸಿ ಕುಡಿಸಿದ್ದಾನೆ.
ಆಕೆಯ ದೇಹಸ್ಥಿತಿ ಬಿಗಡಾಯಿಸುತ್ತಿದ್ದಂತೆ ಹಾಪುರ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ಆಕೆಯನ್ನು ಕರೆದೊಯ್ಯಲಾಗಿದೆ. ಆದರೆ ಆಕೆಯ ಸ್ಥಿತಿ ಚಿಂತಾಕನಕವಾಗಿದ್ದರಿಂದ ಮೀರತ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಏಳು ದಿನಗಳ ಕಾಲ ಹೋರಾಡಿದ ಬಾಲಕಿ ಬುಧವಾರದಂದು ಕೊನೆಯುಸಿರೆಳೆದಿದ್ದಾಳೆ.
ಇದೇ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಮನೆಯಿಂದ ನಾಪತ್ತೆಯಾಗಿದ್ದ 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯರ್ಥಿನಿಯೊಬ್ಬಳು ನೊಯಿಡಾ ಆಸ್ಪತ್ರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಆಕೆಯ ಕುಟುಂಬವು, ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿತ್ತು. ದೂರಿನಲ್ಲಿ ಉಲ್ಲೇಖಿಸಿದ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸದ ಕಾರಣ ಕುಟುಂಬದ ಸದಸ್ಯರು ಮತ್ತು ಬಂಧುಗಳು ಹಿಮ್ಮತ್ಪುರ್ ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದರು.
ಹತ್ತನೇ ತರಗತಿಯಲ್ಲಿ ಓದುತ್ತಿದ್ದ 14-ವರ್ಷದ ಬಾಲಕಿಯು ಮಾರ್ಚ್ 22 ರಂದು ಶಾಲೆಯಿಂದ ಮನೆಗೆ ಹೋಗುವಾಗ ಕಾಣೆಯಾಗಿದ್ದಳು. ಕೂಡಲೇ ಕುಟುಣಬದ ಸದಸ್ಯರು ಶೋಧ ಕಾರ್ಯವನ್ನು ಆರಂಭಿಸಿದ್ದರು. ಕುಟುಂಬದ ಮೂಲಗಳ ಪ್ರಕಾರ ಅವರಿಗೆ ಮಾರ್ಚ್ 31 ರಂದು ಒಂದು ಪೋನ್ ಕಾಲ್ ಬಂದು, ಅವರ ಮಗಳು ನೊಯಿಡಾದ ಸೆಕ್ಟರ್ 33ರಲ್ಲಿರುವ ಸುರಭಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂದು ತಿಳಿಸಲಾಗಿತ್ತು.ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಬಾಲಕಿ ಮರಣವನ್ನಪ್ಪಿದ್ದಳು.
ಕುಟುಂಬದ ದೂರನ್ನು ಆಧರಿಸಿ ನೊಯಿಡಾ ಪೊಲೀಸರು ತನಿಖೆಯ ಭಾಗವಾಹಿ ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಅವರ ಕುಟುಂಬಕ್ಕೆ ಸೇರಿದ ಯುವಕನೊಬ್ಬ ಬಾಲಕಿಯೊಂದಿಗೆ ಕಾಣಿಸಿದ್ದಾನೆ. ಅದರ ಆಧಾರದ ಮೇಲೆ ಆಕೆಯ ಪಾಲಕರು, ಶಿಂಭೌಲಿ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರು ಮತ್ತು ಮೂವರು ಯುವತಿಯರ ವಿರುದ್ಧ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಕೇಸ್ ದಾಖಲಿಸಲು ನಿರಾಕರಿಸಿದ್ದರಿಂದ ಕುಟುಂಬದವರು ಪ್ರತಿಭಟನೆ ನಡೆಸಿದ್ದರು.
ಏತನ್ಮಧ್ಯೆ, ಹಾಪುರ್ ಪೊಲೀಸ್ ಈಗ ಒಣದು ಎಫ್ಐರ್ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಬಾಂಗ್ಲಾದೇಶ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಅಂತಿಮ ಘಟ್ಟ ತಲುಪಿದ ಪೊಲೀಸರ ತನಿಖೆ, ಹಲವು ಅಂಶಗಳು ಲಭ್ಯ