ಹಾಸನ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ; ಆರೋಪಿ ಪೊಲೀಸ್​ ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 27, 2024 | 3:05 PM

ಆಸ್ತಿಗಾಗಿ ಅಣ್ಣ-ತಮ್ಮಂದಿರು ಹೊಡೆದಾಡಿಕೊಳ್ಳುವ ಹಲವಾರು ಘಟನೆಗಳನ್ನು ನೋಡುತ್ತೇವೆ. ಅದರಂತೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೆಹಳ್ಳಿಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆ ಆರೋಪಿ ಈರಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ವಿಚಾರಣೆ ನಡೆಯುತ್ತಿದೆ.

ಹಾಸನ: ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ; ಆರೋಪಿ ಪೊಲೀಸ್​ ವಶಕ್ಕೆ
ಬೇಲೂರಿನಲ್ಲಿ ಅಣ್ಣನಿಂದ ತಮ್ಮನ ಕೊಲೆ
Follow us on

ಹಾಸನ, ಫೆ.27: ಜಿಲ್ಲೆ‌ಯ ಬೇಲೂರು(Belur) ತಾಲ್ಲೂಕಿನ ಅರೆಹಳ್ಳಿಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಅರೆಹಳ್ಳಿ ಗ್ರಾಮದ ಕೇಶವ ನಗರದ ನಿವಾಸಿ ಸಂಗಯ್ಯ (58) ಮೃತ ರ್ದುದೈವಿ. ಜಮೀನು ವಿವಾದ ಹಿನ್ನೆಲೆ ಅಣ್ಣ ಈರಯ್ಯ ಎಂಬಾತ ಮಚ್ಚಿನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಈರಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅರೆಹಳ್ಳಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್ ಕಳ್ಳತನ ಮಾಡಿದ ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಕೋಲಾರ: ಬೈಕ್ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೋಲಾರ ತಾಲ್ಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುಡಿದು ಬೈಕ್ ಕಳ್ಳತನ ಮಾಡಿದ್ದ ಮೂವರನ್ನು ಪೊಲೀರು ಅರೆಸ್ಟ್​ ಮಾಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟ ಮೇಲೆ ಕಳ್ಳರು ಬೈಕ್ ತಂದು ಕೊಟ್ಟಿದ್ದಾರೆ. ಶ್ರೀಧರ್, ಅರುಣ್, ನವೀನ್ ಬೈಕ್ ಕಳ್ಳತನ ಮಾಡಿದ ಖದೀಮರು. ಮೂವರು ಕಳ್ಳರ ಫೈಕಿ ಇಬ್ಬರು ಸರ್ಕಾರಿ ಉದ್ಯೋಗಿ ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ವೃದ್ಧೆಯ ಬರ್ಬರ ಹತ್ಯೆ; ಡ್ರಮ್​ನಲ್ಲಿ ಮೃತದೇಹ ಇಟ್ಟು ಹಂತಕ ಪರಾರಿ

ದರೋಡೆ ಮಾಡಲು ಹೊಂಚು ಹಾಕಿ ರಸ್ತೆಯಲ್ಲಿ ನಿಂತಿದ್ದ ದರೋಡೆ ಕೋರರ ಬಂಧನ

ಬೀದರ್: ದರೋಡೆ ಮಾಡಲು ಹೊಂಚು ಹಾಕಿ ರಸ್ತೆಯಲ್ಲಿ ನಿಂತುಕೊಂಡಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಸಿದ್ದೇಶ್ವರ ಮಂದಿರದ ಹತ್ತಿರ ಮಾರಕಾಸ್ತ್ರಗಳನ್ನ ಹಿಡಿದುಕೊಂಡು ರಸ್ತೆಯ ಮೇಲೆ ಹೋಗುವ ವಾಹನ ಸವಾರರನ್ನ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಈ ಕುರಿತು ನಿಖರ ಮಾಹಿತಿ ಹಿನ್ನಲೆ ಬಂಧಿಸಲಾಗಿದೆ. ದರೋಡೆ ಕೋರರಿಂದ ಮಾರಕಾಸ್ತ್ರ, ಕಾರದ ಪುಡಿ ಜಪ್ತಿ ಮಾಡಲಾಗಿದ್ದು, ಕಟಕ ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ