ಇಟಲಿಯಿಂದ ಭಾರತಕ್ಕೆ ಹಿಂದಿರುಗಿದ ಕೆಲವೇ ಗಂಟೆಗಳ ಬಳಿಕ ಪತಿಯೊಬ್ಬ ಪತ್ನಿಯನ್ನು ಹೊಡೆದು ಕೊಂದಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಪಂಜಾಬ್ನ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, ಪತಿಯು ಪತ್ನಿಯನ್ನು ಪದೇ ಪದೇ ನೆಲಕ್ಕೆ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ.
ಕಪುರ್ತಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವತ್ಸಲಾ ಗುಪ್ತಾ ಮಾತನಾಡಿ, ಅನಿವಾಸಿ ಭಾರತೀಯನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೋಮವಾರ ಇಟಲಿಯಿಂದ ಸಂಧು ಚಾಥಾ ಗ್ರಾಮದ ತನ್ನ ಮನೆಗೆ ಮರಳಿದ್ದ.
ಅದೇ ದಿನ, ಅವರು ತಮ್ಮ ಪತ್ನಿ ಹರ್‌ಪ್ರೀತ್ ಕೌರ್ (45) ಅವರೊಂದಿಗೆ ಯಾವುದೋ ವಿಷಯಕ್ಕೆ ತೀವ್ರ ಜಗಳವಾಡಿದ್ದರು ಎಸ್ಎಸ್ಪಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಅಮೆರಿಕದ ಜಿಮ್ನಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ
ಸಿಂಗ್ ಕೌರ್ ಅವರನ್ನು ತನ್ನ ಕೋಣೆಗೆ ಎಳೆದೊಯ್ದರು ಮತ್ತು ಆಕೆಯ ತಲೆಯನ್ನು ನೆಲದ ಮೇಲೆ ಪದೇ ಪದೇ ಜಜ್ಜಿದ್ದಾರೆ, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ನಿಜವಾದ ಕಾರಣ ಇನ್ನಷ್ಟೇ ಹೊರಬರಬೇಕಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ