ಚಿಕ್ಕಬಳ್ಳಾಪುರ, ಏ.10: ಚಿಂತಾಮಣಿ(Chintamani) ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಎರಡನೇ ಪತ್ನಿಯನ್ನ ಕೊಲೆ ಮಾಡಿ ಓಡಿ ಹೋಗಿದ್ದ ಆರೋಪಿ ಪತಿ ಹರೀಶ್ ಮೂರು ದಿನಗಳ ಬಳಿಕ ಹೊಸಕೋಟೆ ಪೊಲೀಸರಿಗೆ ಶರಣಾಗಿದ್ದಾನೆ. ರೆಡ್ಡಿಲಕ್ಷ್ಮಿ(30) ಮೃತ ರ್ದುದೈವಿ. ಆಂಧ್ರ ಪ್ರದೇಶ ಮೂಲದವರಾಗಿದ್ದ ದಂಪತಿ, ಒಂದು ವರ್ಷದ ಹಿಂದೆ ಸಾರ್ವಜನಿಕರ ಸಮ್ಮೂಖದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು, ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಹರೀಶ್ ಹೋಸಕೋಟೆಯಲ್ಲಿ ಹೂ ವ್ಯಾಪಾರಿಯಾಗಿದ್ರೆ, ರೆಡ್ಡಿಲಕ್ಷ್ಮಿ ಮನೆಯಲ್ಲಿ ಇದ್ದಳು. ಆದ್ರೆ, ಈಗ ಸ್ವತಃ ಹರೀಶ್ ಪತ್ನಿಯನ್ನು ಬರ್ಬರವಾಗಿ ಕೊಂದು ಹೊಸಕೋಟೆ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ಇನ್ನು ಹರೀಶ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಮಮತಾ ಎಂಬುವವರ ಜೊತೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇತ್ತ ವಿವಾತೆಯಾಗಿದ್ದ ರೆಡ್ಡಿಲಕ್ಷ್ಮಿ ಪತಿಯಿಂದ ವಿಚ್ಚೇದನ ಪಡೆದು, ಹರೀಶ್ನನ್ನು ಎರಡನೆ ಮದುವೆಯಾಗಿದ್ದಳು. ಆದ್ರೆ, ಹರೀಶ್ ಮದುವೆಯಾಗಿರುವ ವಿಚಾರ ತಿಳಿಸಿರಲಿಲ್ಲ. ಇದೆ ವಿಚಾರಕ್ಕೆ ಇಬ್ಬರ ಮದ್ಯೆ ಮನಸ್ತಾಪ ಇತ್ತು. ಈ ಹಿನ್ನಲೆ ಸೋಮವಾರ ಬೆಳಿಗ್ಗೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಹರೀಶ್ ಪತ್ನಿಯ ಕತ್ತು ಹಿಸುಕಿದ್ದಾನೆ. ಬಳಿಕ ಉಸಿರಾಡುತ್ತಿದ್ದ ಪತ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೀಗ ಜಡಿದು ಮೊದಲನೆ ಹೆಂಡತಿ ಇದ್ದ ಹೊಸಕೋಟೆಗೆ ಹೋಗಿದ್ದ.
ಇದನ್ನೂ ಓದಿ:ಮಂಗಳೂರು: ಅವಳಿ ಕೊಲೆ ಕೇಸ್ನಲ್ಲಿ ಮೃತಪಟ್ಟಿದ್ದ ಮಹಿಳೆ ಪತಿ ಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು
ಎರಡನೆ ಹೆಂಡತಿ ಕೊಲೆ ಮಾಡಿದ ವಿಷಯ ಮೊದಲನೆ ಪತ್ನಿಗೆ ಇಂದು(ಏ.10) ತಿಳಿಸಿದ ಕಾರಣ, ಪತ್ನಿಯೇ ಆರೋಪಿ ಗಂಡನನ್ನು ಕರೆದುಕೊಂಡು ಹೋಗಿ ಹೋಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾಳೆ. ನಂತರ ವಿಚಾರ ರೆಡ್ಡಿಲಕ್ಷ್ಮಿ ಮನೆಯಲ್ಲಿ ತಿಳಿಸಿದ್ದು, ಹರೀಶ್ನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಂತಾಮಣಿ ನಗರ ಠಾಣೆ ಪೊಲೀಸರು ಆರೋಪಿ ಹರೀಶ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಎರಡನೆ ಪತ್ನಿ ಇದ್ರೆ ಮೊದಲನೆ ಪತ್ನಿಯ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಕೋಪದಲ್ಲಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ