ಬಸವೇಶ್ವರನಗರ: ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಪತಿರಾಯನಿಂದ ಆತ್ಮಹತ್ಯೆಗೆ ಯತ್ನ

|

Updated on: Nov 16, 2020 | 2:31 PM

ಬೆಂಗಳೂರು: ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ. ಸುಮಿತ್ರಾ ಕೊಲೆಯಾದ ದುರ್ದೈವಿ. ಕೊಲೆಗೆ ದಂಪತಿಯ ನಡುವಿನ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ. ಪತ್ನಿ ಸುಮಿತ್ರಾಗೆ ಗುಂಡಿಕ್ಕಿ ಹತ್ಯೆಗೈದ ಪತಿ ಕಾಳಪ್ಪ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತಿ ಕಾಳಪ್ಪ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನೆಡೆಸಿದ್ದಾರೆ.

ಬಸವೇಶ್ವರನಗರ: ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಪತಿರಾಯನಿಂದ ಆತ್ಮಹತ್ಯೆಗೆ ಯತ್ನ
Follow us on

ಬೆಂಗಳೂರು: ಗನ್​ನಿಂದ ಶೂಟ್ ಮಾಡಿ ಪತ್ನಿಯನ್ನು ಕೊಂದು ಪತಿರಾಯನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಸವೇಶ್ವರನಗರದಲ್ಲಿ ನಡೆದಿದೆ. ಸುಮಿತ್ರಾ ಕೊಲೆಯಾದ ದುರ್ದೈವಿ.

ಕೊಲೆಗೆ ದಂಪತಿಯ ನಡುವಿನ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ. ಪತ್ನಿ ಸುಮಿತ್ರಾಗೆ ಗುಂಡಿಕ್ಕಿ ಹತ್ಯೆಗೈದ ಪತಿ ಕಾಳಪ್ಪ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತಿ ಕಾಳಪ್ಪ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನೆಡೆಸಿದ್ದಾರೆ.