Kidney Racket ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ: ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ವಂಚನೆ

|

Updated on: Dec 17, 2020 | 4:35 PM

ರಾಜ್ಯ ರಾಜಧಾನಿಯಲ್ಲಿ ಕೆಲವು ದಶಕಗಳ ಹಿಂದೆ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಗೆ ಕಾಲಕ್ರಮೇಣ ಬ್ರೇಕ್​ ಬಿದ್ದಿತ್ತು. ಆದರೆ, ಇದೀಗ ಸಿಲಿಕಾನ್​ ಸಿಟಿಯಲ್ಲಿ ಈ ಕರಾಳ ದಂಧೆ ಮತ್ತು ಅದರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Kidney Racket ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ: ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ವಂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಶಕಗಳ ಹಿಂದೆ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಗೆ Kidney Racket ಕಾಲಕ್ರಮೇಣ ಬ್ರೇಕ್​ ಬಿದ್ದಿತ್ತು. ಆದರೆ, ಇದೀಗ ಸಿಲಿಕಾನ್​ ಸಿಟಿಯಲ್ಲಿ ಈ ಕರಾಳ ದಂಧೆ ಮತ್ತು ಅದರ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಿಡ್ನಿ ಕೊಟ್ಟವರಿಗೆ 2 ಕೋಟಿ ಹಣ ಕೊಡುತ್ತೇವೆಂದು ನಂಬಿಸಿ ವಂಚನೆ ಮಾಡಿರುವ ಪ್ರಕರಣ ಇದೀಗ ನಡೆದಿದೆ. ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ಅಮಾಯಕರಿಗೆ ಕರೆ ಮಾಡುತ್ತಿದ್ದ ನಯವಂಚಕರು ಕಿಡ್ನಿ ಕೊಡಿಸ್ತೇವೆಂದು ರೋಗಿ ಸಂಬಂಧಿಕರಿಂದ ಮುಂಗಡ ಹಣ ಪಡೆಯುತ್ತಿದ್ದರು. ಇತ್ತ, ಕಿಡ್ನಿ ದಾನಿಗಳಿಗೆ 2 ಕೋಟಿ ಕೊಡುತ್ತೇವೆಂದು ನಂಬಿಸಿ ಕಿಡ್ನಿ ರೋಗಿ​ಗಳ ಜೊತೆ ಮಾತನಾಡಿಸುತ್ತಿದ್ದರು. ರೋಗಿಯ ಸಂಬಂಧಿಕರಿಗೆ ನಂಬಿಕೆ ಬಂದ ಮೇಲೆ ಅವರಿಂದ ಮುಂಗಡ ಹಣ ಪಡೆದ ಆಸಾಮಿಗಳು ಎಸ್ಕೇಪ್​!

ಅಂದ ಹಾಗೆ, ಈ ಕಿಡ್ನಿ ಕಿರಾತಕರು ಹಾಸ್​ಮ್ಯಾಟ್​ ಆಸ್ಪತ್ರೆ ಹೆಸರು ಬಳಸಿ ಹಲವರಿಗೆ ವಂಚನೆ ಮಾಡಿದ್ದರು ಎಂದು ಹೇಳಲಾಗಿದೆ. ನಾನು ಹಾಸ್​ಮ್ಯಾಟ್​ ಆಸ್ಪತ್ರೆ ವೈದ್ಯನೆಂದು ಹೇಳಿ ವಂಚಿಸಿದ್ದನು ಎಂದು ತಿಳಿದುಬಂದಿದೆ. ಸದ್ಯ, ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ನಡುವೆ, ನಮ್ಮ​ ಆಸ್ಪತ್ರೆಯಲ್ಲಿ ಯಾರಿಂದಲೂ ಕಿಡ್ನಿ ಪಡೆಯುತ್ತಿಲ್ಲ. ಸಾರ್ವಜನಿಕರು ಮೋಸ ಹೋಗಬೇಡಿ. ನಮ್ಮ ಆಸ್ಪತ್ರೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ಕಿಡ್ನಿ ಹೆಸರಲ್ಲಿ ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ಸೂಚಿಸಿದೆ.

ಹಾಸ್​ಮ್ಯಾಟ್ ಆಸ್ಪತ್ರೆ ಹೆಸರಲ್ಲಿ ಯಾರಾದರೂ ಕರೆ ಮಾಡಿದ್ರೆ. ಆಸ್ಪತ್ರೆ ಆಡಳಿತ ಮಂಡಳಿ ಅಥವಾ ಪೊಲೀಸರಿಗೆ ದೂರು ನೀಡಿ. ಕಿಡ್ನಿ ಜಾಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಆಸ್ಪತ್ರೆಯ ಎಂಡಿ ಡಾ.ಅಜಿತ್ ಬೆನೆಡಿಕ್ಟ್​ ರಾಯನ್​ ಮನವಿ ಮಾಡಿದ್ದಾರೆ.

ಲಾರಿ ಡಿಕ್ಕಿ ಹೊಡೆದು.. ಪಾದಚಾರಿ ಸ್ಥಳದಲ್ಲೇ ದುರ್ಮರಣ, ಯಾವೂರಲ್ಲಿ?