DySP ಲಕ್ಷ್ಮೀ ಮರಣೋತ್ತರ ಪರೀಕ್ಷೆಗೆ ಸಮ್ಮತಿ ಸಹಿ ಹಾಕಲು ನಿರಾಕರಿಸಿದ ತಂದೆ..
ಮೃತ DySP ಲಕ್ಷ್ಮೀ ತಂದೆ ವೆಂಕಟೇಶ್ ಮರಣೋತ್ತರ ಪರೀಕ್ಷೆಗೆ ಅನುಮತಿ ಸಹಿ ಹಾಕಲು ನಿರಾಕರಿಸಿದ್ದಾರೆ. ಲಕ್ಷ್ಮೀ ಪತಿ ನವೀನ್ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಪೊಲೀಸರಿಗೆ ವೆಂಕಟೇಶ್ ಸೂಚಿಸಿದ್ದಾರೆ.
ಬೆಂಗಳೂರು: ರಾಜಧಾನಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಅನುಮಾನಾಸ್ಪದ ಸಾವು ಸಂಭವಿಸಿದೆ. ಈ ಘಟನೆ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಇದಲ್ಲದೆ ಪೊಲೀಸ್ ಇಲಾಖೆಯನ್ನು ಹಲವಾರು ಕಾನೂನು ಸಂಕೋಲೆಯಲ್ಲಿ ಕಟ್ಟಿ ಹಾಕಿದೆ.
ಮರಣೋತ್ತರ ಪರೀಕ್ಷೆಗೆ ಅನುಮತಿ ಸಹಿ ನೀಡದ ತಂದೆ: ಮೃತ DySP ಲಕ್ಷ್ಮೀ ತಂದೆ ವೆಂಕಟೇಶ್ ಮರಣೋತ್ತರ ಪರೀಕ್ಷೆಗೆ ಅನುಮತಿ ಸಹಿ ಹಾಕಲು ನಿರಾಕರಿಸಿದ್ದಾರೆ. ಲಕ್ಷ್ಮಿಯ ಪತಿ ನವೀನ್ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಪೊಲೀಸರಿಗೆ ವೆಂಕಟೇಶ್ ಆಗ್ರಹಿಸಿದ್ದಾರೆ. ಆದರೆ ಲಕ್ಷ್ಮೀ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು, DySP ಲಕ್ಷ್ಮೀ ಅವರ ಚಿಕ್ಕಮ್ಮ ನಾಗಮ್ಮ ಮತ್ತು ಸಹೋದರಿ ಸಹಿ ಪಡೆದಿದ್ದಾರೆ. ಸದ್ಯ ಈಗ ಲಕ್ಷ್ಮಿಯ ತಾಯಿ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.
ತಾಯಿ ಬಂದ ಬಳಿಕ ಮರಣೋತ್ತರ ಪರೀಕ್ಷೆ ಸಾಧ್ಯತೆ: ಮೃತ DySP ಲಕ್ಷ್ಮೀ ತಾಯಿ ಕೋಲಾರ ಜಿಲ್ಲೆ ಮಾಲೂರಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಲಿದ್ದಾರೆ. ತಾಯಿ ಬಂದ ಬಳಿಕ ಡಿವೈಎಸ್ಪಿ ಲಕ್ಷ್ಮೀ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪರೀಕ್ಷೆ ನಂತರ ಹುಟ್ಟೂರಿನಲ್ಲಿ ಶವಸಂಸ್ಕಾರ ನೆರವೇರಲಿದೆ.
ಮಗಳ ಶವ ಪರೀಕ್ಷೆಗೆ ಅನುಮತಿ ಸಹಿ ಹಾಕಲು ತಂದೆ ವೆಂಕಟೇಶ್ ನಿರಾಕರಿಸಿದ್ದಾರೆ. ಆದರೆ ಇದರ ಹಿಂದೆ ಅವರ (ಅಂದ್ರೆ ತಂದೆ ವೆಂಕಟೇಶ್) ಹಾಗೂ ಅವರ ಮಗಳ ನಡುವಿನ ಯಾವುದೋ ಒಂದು ಕಾರಣ ಅಡ್ಡಿಯಾಗಿದೆ ಎಂಬ ಅನುಮಾನ ಹುಟ್ಟಿದೆ. ಹಾಗೂ ಹೈದರಾಬಾದ್ಗೆ ಹೋಗಿರುವ ಅಳಿಯನಿಗಾಗಿ ಕಾಯುತ್ತಿರುವುದು ಇದೀಗ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
DySP Lakshmi ದಾಂಪತ್ಯದಲ್ಲಿ ಎದ್ದ ಬಿರುಗಾಳಿ ಯಾವುದು? ಲಕ್ಷ್ಮೀ ಪ್ರೇಮ ವಿವಾಹದ ಇನ್ಸೈಡ್ ಸ್ಟೋರಿ ಇಲ್ಲಿದೆ