AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ ಕೇಳಲು ಮನೆಬಾಗಿಲಿಗೆ ಬರುವವರ ಕೈಲಿ ಚಿಕನ್​-ಮಟನ್​ ಪ್ಯಾಕೆಟ್​; ಕೊಪ್ಪಳದಲ್ಲಿ ‘ರಾತ್ರಿ ಆಮಿಷ’ ಮಾಮೂಲು

ಮುದ್ದಾಬಳ್ಳಿಯಲ್ಲಿ ನಿನ್ನೆ ರಾತ್ರಿ ಚಿಕನ್​, ಮಟನ್​ ಹಂಚಿಕೆಯಾಗಿದೆ. ಆದರೆ ಚುನಾವಣಾ ಸ್ಕ್ವಾಡ್​​ಗಳ ಮೌನ ಅಚ್ಚರಿ ತಂದಿದೆ. ಎಲ್ಲಿಯೂ ದಾಳಿ ಮಾಡುತ್ತಿಲ್ಲ.

ಮತ ಕೇಳಲು ಮನೆಬಾಗಿಲಿಗೆ ಬರುವವರ ಕೈಲಿ ಚಿಕನ್​-ಮಟನ್​ ಪ್ಯಾಕೆಟ್​; ಕೊಪ್ಪಳದಲ್ಲಿ ‘ರಾತ್ರಿ ಆಮಿಷ’ ಮಾಮೂಲು
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Dec 17, 2020 | 2:58 PM

ಕೊಪ್ಪಳ: ಅದು ಯಾವುದೇ ಹಂತದ ಚುನಾವಣೆ ಇರಲಿ, ಮತದಾರರನ್ನು ಸೆಳೆಯಲು ಏನೇನೋ ಆಮಿಷಗಳನ್ನು ಒಡ್ಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೇ, ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಜಿಲ್ಲೆಯಲ್ಲಿ ಮತದಾರರಿಗೆ ಚಿಕನ್​-ಮಟನ್ ಆಫರ್​ ಮಾಡಲಾಗುತ್ತಿದೆ !

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ರೈತರಿಗೆ ಸಂಬಂಧಿಸಿದ, ಗೃಹ ಬಳಕೆ ಸಾಮಗ್ರಿಗಳ ಚಿಹ್ನೆಯನ್ನೇ ಇಟ್ಟುಕೊಂಡು ಮತದಾರರ ಮನೆಮನೆಗೆ ತೆರಳಿ, ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಹೀಗೆ ಮತ ಯಾಚನೆಯಲ್ಲಿ ತೊಡಗಿಕೊಂಡಿರುವವರು ಯುವಕರಿಗೆ ಚಿಕನ್​, ಮಟನ್​ ಆಫರ್​ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಚುನಾವಣಾ ರಂಗು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ, ಹಿಂದಿನ ಎಲ್ಲ ಚುನಾವಣೆಗಳನ್ನೂ ಮೀರಿ ಭರ್ಜರಿ ರಂಗು ಪಡೆದಿದೆ. ಕೊವಿಡ್​-19ರ ಭಯ ಮರೆತು ಅಭ್ಯರ್ಥಿಗಳು ತಮ್ಮ ಕುಟುಂಬದ ಸದಸ್ಯರ ಜತೆ ಪ್ರತಿದಿನ ರಾತ್ರಿಯೂ ಮನೆಮನೆಗೆ ತೆರಳಿ, ಮತ ಯಾಚಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರೂ ಸಹ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವುದರಿಂದ ಚುನಾವಣೆ ಇನ್ನಷ್ಟು ಮುಖ್ಯವಾಗಿದೆ.

ತರಹೇವಾರಿ ಚಿಹ್ನೆಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚಾಗಿ ರೈತಾಪಿ ವಲಯಕ್ಕೆ ಸಂಬಂಧಿಸಿದ, ಗೃಹ ಬಳಕೆಯ ವಸ್ತುಗಳನ್ನೇ ಚಿನ್ಹೆಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪಂಪ್​ಸೆಟ್​, ಟ್ರ್ಯಾಕ್ಟರ್​, ಟಿಲ್ಲರ್​, ಸಿಲಿಂಡರ್​, ರಾಟಿ, ಹಣ್ಣಿನ ಬುಟ್ಟಿಯಂತಹ ಚಿನ್ಹೆಗಳು ಗಮನಸೆಳೆಯುತ್ತಿವೆ.

ಚಿಕನ್​-ಮಟನ್​ ಆಮಿಷ ಇನ್ನು ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವವರಿಗೆ, ಮತದಾರರಿಗೆ ಚಿಕನ್​-ಮಟನ್​ಗಳ ಆಫರ್​ ನೀಡಲಾಗುತ್ತಿದೆ. ಬೇಡವೆಂದರೂ ರಾತ್ರಿ ಹೊತ್ತಲ್ಲಿ ಚಿಕನ್​-ಮಟನ್​ ಹೊತ್ತು ಮನೆಗೆ ಬರುತ್ತಾರೆ. ಮನೆಮನೆಗೆ ಒಂದು ಕೆಜಿ ಚಿಕನ್​, ಒಂದು ಕೆಜಿ ಮಟನ್ ನೀಡುತ್ತಿದ್ದಾರೆ ಎಂದು ಜನರೇ ಮಾತನಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುದ್ದಾಬಳ್ಳಿಯಲ್ಲಿ ನಿನ್ನೆ ರಾತ್ರಿ ಚಿಕನ್​, ಮಟನ್​ ಹಂಚಿಕೆಯಾಗಿದೆ. ಆದರೆ ಚುನಾವಣಾ ಸ್ಕ್ವಾಡ್​​ಗಳ ಮೌನ ಅಚ್ಚರಿ ತಂದಿದೆ. ಎಲ್ಲಿಯೂ ದಾಳಿ ಮಾಡುತ್ತಿಲ್ಲ. ಆಮಿಷ ಒಡ್ಡುವ ವ್ಯಕ್ತಿಗಳ ವಿರುದ್ಧ ಕ್ರಮವನ್ನೂ ಕೈಗೊಳ್ಳುತ್ತಿಲ್ಲ.

ಚಿಟ್ಟೆಗಳ ಬೆನ್ನತ್ತಿ: ‘ಕರ್ವಾಲೋ’ದಿಂದ ಪ್ರೇರಣೆ ಪಡೆದವರ ಕ್ಯಾಮರಾದಲ್ಲಿ ಅಮೋಘ ಪಾತರಗಿತ್ತಿ ಸೆರೆ

Published On - 2:55 pm, Thu, 17 December 20

ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು