ವಿಜಯಪುರ: ಮಕ್ಕಳ ಅಕ್ರಮ (Illegal) ಸಾಗಾಟ (Trafficking) ಪ್ರಕರಣ ಪತ್ತೆ ಸಂಬಂಧ ಓರ್ವ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಯಮಾಲಾ ಬಂಧಿತ ಆರೋಪಿಯಾಗಿದ್ದಾಳೆ. ಈಕೆ ವಿಜಯಪುರ ನಗರದ ಅಥಣಿ ಗಲ್ಲಿ ವಾಸಿಯಾಗಿದ್ದಾಳೆ. ಐದು ಮಕ್ಕಳ ಸಾಕಾಣಿಕೆ ಹಾಗೂ ಸಾಗಾಟ ಮಾಡಿದ್ದ ಆರೋಪದ ಮೇಲೆ ವಿಜಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಯಿಯಿಂದ ಪರಿತ್ಯಕವಾದ, ಪೋಷಕರಿಂದ ದೂರವಾದ ಮಕ್ಕಳನ್ನು ಆರೋಪಿ ಜಯಮಾಲಾ ಅನಧಿಕೃತವಾಗಿ ಸಾಕಿದ್ದಳು. ತನ್ನ ಮನೆಯಲ್ಲಿ 5 ವರ್ಷದ ಗಂಡು ಹಾಗೂ 3 ವರ್ಷದ ಹೆಣ್ಣು ಮಗುವನ್ನು ಸಾಕಿದ್ದಳು. ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಬಳಿ 3 ವರ್ಷದ ಹೆಣ್ಣು ಮಗು ಹಾಗೂ ಅಥಣಿ ಗಲ್ಲಿಯ ಚಂದ್ರಮ್ಮಾ ಮಾದರ ಬಳಿಯ ಮನೆಯಲ್ಲಿ 11 ತಿಂಗಳ ಹೆಣ್ಣು ಮಗುವನ್ನು ಬಿಟ್ಟಿದ್ದಳು. ಜಯಮಾಲಾಳನ್ನು ಬಂಧಿಸಿದ ನಗರದ ಮಹಿಳಾ ಪೊಲೀಸ್ ಠಾಣೆಯ ಆಧಿಕಾರಿಗಳು ಮತ್ತು ಸಿಬ್ಬಂದಿಗಳು ಆಕೆಯ ಮನೆಯಿಂದ 2 ಮಗುವನ್ನು ಮತ್ತು ಇತರರಿಬ್ಬರ ಮನೆಯಿಂದ 2 ಮಕ್ಕಳನ್ನು ರಕ್ಷಿಸಿದ್ದರು.
ಇದನ್ನೂ ಓದಿ: Crime News: ದೆಹಲಿಯಲ್ಲಿ ನಕಲಿ ನೋಟುಗಳನ್ನು ಪೂರೈಕೆ ಮಾಡುತ್ತಿದ್ದ ಗುಂಪು ಕ್ರೈಂ ಬ್ರಾಂಚ್ ವಶಕ್ಕೆ
ಬಂಧಿತ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ, ಮಹಾರಾಷ್ಟ್ರದ ಸೊಲ್ಲಾಪುರ ನಗರದ ಒಂದು ಕುಟುಂಬಕ್ಕೆ ಮಗುವನ್ನು ಸಾಗಾಟ ಮಾಡಿದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾಳೆ. ಅದರಂತೆ ಇಂದು ಸೊಲ್ಲಾಪುರಕ್ಕೆ ತೆರಳಿದ ಪೊಲೀಸರ ತಂಡ 5 ವರ್ಷದ ಹೆಣ್ಣು ಮಗುವನ್ನು ರಕ್ಷಿಸುವಲ್ಲಿ ಯಶ್ವಿಯಾಗಿದ್ದಾರೆ. ಮಹಿಳಾ ಪೊಲೀಸ್ ಠಾಣೆಯ ಪಿ.ಎಂ ಚೌರ್, ಎಎಸ್ಐ ಆರ್.ಎಸ್ ಬನಸೋಡೆ, ಹೆಡ್ ಕಾನ್ಸ್ಟೇಬಲ್ ಆರ್.ಆರ್ ವಾಲೀಕಾರ, ಕಾನ್ಸ್ಟೇಬಲ್ ವಿಠಲ್ ಕಟ್ಟಿಮನಿ ಅವರನ್ನೊಳಗೊಂಡ ತಂಡ ಮಗುವನ್ನು ರಕ್ಷಿಸಿದ್ದಾರೆ.
ಸದ್ಯ ಜಯಮಾಲಾ ವಶದಲ್ಲಿದ್ದ ಹಾಗೂ ಮಾರಾಟ ಮಾಡಿದ್ದ ಒಟ್ಟು ಐದು ಮಕ್ಕಳನ್ನು ರಕ್ಷಿಸಿ ನಗರದ ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಇರಿಸಿ ಆಶ್ರಯ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಸಮಂತಾ-ವಿಜಯ್ ದೇವರಕೊಂಡ ಅಪಘಾತ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್
ಆದಿಕೇಶವುಲು ಮಗ ಶ್ರೀನಿವಾಸ್ ಎನ್ಸಿಬಿ ವಶಕ್ಕೆ
ಡ್ರಗ್ಸ್ ಪ್ರಕರಣ ಸಂಬಂಧ ದಿವಂಗತ ಆದಿಕೇಶವುಲು ನಾಯ್ಡು ಮಗ ಶ್ರೀನಿವಾಸ್ನನ್ನು ನಾಕ್ರೋಟಿಕ್ ಕಂಟ್ರೋಲ್ ಬ್ಯೂರೋ (NCB) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಶ್ರೀನಿವಾಸ್ ನಿವಾಸದ ಮನೆ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಶ್ರೀನಿವಾಸ್ನ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ. ನಂತರ ಆತನನ್ನು ತೀವ್ರ ವಿಚಾರಣೆ ನೆಡೆಸಿ ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Tue, 24 May 22