ಮಥುರಾದಲ್ಲಿ 5 ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕೊಂದ ವೃದ್ಧ; ವಿಡಿಯೊ ವೈರಲ್

|

Updated on: Aug 20, 2023 | 5:51 PM

ಸ್ವಾಮೀಜಿ ವೇಷ ಧರಿಸಿದ್ದ ಈ ವೃದ್ಧನನ್ನು 52 ವರ್ಷದ ಓಂಪ್ರಕಾಶ್ ಎಂದು ಪೊಲೀಸರು ಗುರುತಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮಧ್ಯಪ್ರದೇಶದ ಭಿಂಡ್ ನಿವಾಸಿ ಓಂಪ್ರಕಾಶ್ (52) ಎಂಬಾತ ಬಾಲಕನ ಮೇಲೆ ಹಲ್ಲೆ ನಡೆಸಿದ್ದು, ಘಟನೆಯ ಹಿಂದಿನ ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ತ್ರಿಗುನ್ ಬಿಸೆನ್ ಹೇಳಿದ್ದಾರೆ.

ಮಥುರಾದಲ್ಲಿ 5 ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕೊಂದ ವೃದ್ಧ;  ವಿಡಿಯೊ ವೈರಲ್
Follow us on

ಮಥುರಾ ಆಗಸ್ಟ್ 20: ಉತ್ತರ ಪ್ರದೇಶದ (Uttar Pradesh) ಮಥುರಾದಲ್ಲಿ (Mathura) 5 ವರ್ಷದ ಬಾಲಕನನ್ನು ವೃದ್ಧನೊಬ್ಬ ಹೊಡೆದು ಕೊಂದಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಪದೇ ಪದೇ ಮಗುವನ್ನು ನೆಲಕ್ಕೆ ಎಸೆಯುತ್ತಿರುವುದನ್ನು ತೋರಿಸುತ್ತದೆ. ಸ್ವಾಮೀಜಿ ವೇಷ ಧರಿಸಿದ್ದ ಈ ವೃದ್ಧನನ್ನು 52 ವರ್ಷದ ಓಂಪ್ರಕಾಶ್ ಎಂದು ಪೊಲೀಸರು ಗುರುತಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಮಧ್ಯಪ್ರದೇಶದ ಭಿಂಡ್ ನಿವಾಸಿ ಓಂಪ್ರಕಾಶ್ (52) ಎಂಬಾತ ಬಾಲಕನ ಮೇಲೆ ಹಲ್ಲೆ ನಡೆಸಿದ್ದು, ಘಟನೆಯ ಹಿಂದಿನ ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ತ್ರಿಗುನ್ ಬಿಸೆನ್ ಹೇಳಿದ್ದಾರೆ.

ಸ್ಥಳೀಯರ ಪ್ರಕಾರ ಆರೋಪಿ ಸಪ್ತಕೋಸಿ ಯಾತ್ರೆ ನಡೆಸುತ್ತಿದ್ದ. ಮಗುವಿನ ತಂದೆ ಯಾತ್ರೆಯ ಮಾರ್ಗದಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ.

ಅದೇನು ಕಾರಣವೋ ಗೊತ್ತಿಲ್ಲ ಓಂಪ್ರಕಾಶ್ ಅಪ್ರಾಪ್ತನನ್ನು ಎತ್ತಿಕೊಂಡು ಹಲವಾರು ಬಾರಿ ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ತ್ರಿಪುರಾ: ವಿವಾಹೇತರ ಸಂಬಂಧ ಆರೋಪ; ಜೋಡಿಯನ್ನು ಇಲೆಕ್ಟ್ರಿಕ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ

ಆಸ್ಪತ್ರೆಯಲ್ಲಿ ಅವರ ಸ್ಥಿತಿ ಸ್ಥಿರವಾದ ನಂತರ, ಅವರನ್ನು ವಿಚಾರಣೆಗೊಳಪಡಿಸಲಾಗುವುದು. ನಂತರ ಘಟನೆಯ ಹಿಂದಿನ ಉದ್ದೇಶವು ಸ್ಪಷ್ಟವಾಗುತ್ತದೆ ಎಂದು ಪೊಲೀಸ್ ಅಧೀಕ್ಷಕ ಹೇಳಿದ್ದಾರೆ. ಘಟನೆಯ ನಂತರ ಸ್ಥಳೀಯ ಜನರು ಪರಿಕ್ರಮ ಮಾರ್ಗವನ್ನು ತಡೆದರು. ಪೊಲೀಸ್ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ನಂತರ ರಸ್ತೆಯನ್ನು ತೆರವುಗೊಳಿಸಲಾಯಿತು.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ