ಕೇರಳ: ದರೋಡೆಗೆಂದು ಬಂದಿದ್ದ ವ್ಯಕ್ತಿಯಿಂದ 70 ವರ್ಷದ ಮಹಿಳೆ ಮೇಲೆ ಅತ್ಯಾಚಾರ

|

Updated on: Aug 26, 2024 | 8:21 AM

ದರೋಡೆಗೆಂದು ಬಂದಿದ್ದ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಕಾಯಂಕುಲಂನಲ್ಲಿರುವ ಅವರ ನಿವಾಸದಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಅರಿತ ವ್ಯಕ್ತಿಯು ಆಕೆಯನ್ನು ಗುರಿಯಾಗಿಸಿಕೊಂಡಿದ್ದ.

ಕೇರಳ: ದರೋಡೆಗೆಂದು ಬಂದಿದ್ದ ವ್ಯಕ್ತಿಯಿಂದ 70 ವರ್ಷದ ಮಹಿಳೆ ಮೇಲೆ ಅತ್ಯಾಚಾರ
ಅಪರಾಧ
Image Credit source: The Leaflet
Follow us on

ದರೋಡೆಗೆಂದು ಮನೆಗೆ ನುಗ್ಗಿದ್ದ ವ್ಯಕ್ತಿ 70 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆ ಅಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ, ದರೋಡೆಗೆಂದು ಮನೆಗೆ ಬಂದಿದ್ದ ಧನೇಶ್​(29) ಎಂಬಾತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಶನಿವಾರ ರಾತ್ರಿ ಮಹಿಳೆಯ ಮೇಲೆ ಮೆಣಸಿನ ಪುಡಿ ಎರಚಿದ ನಂತರ ಕಾಯಂಕುಲಂನಲ್ಲಿರುವ ಅವರ ನಿವಾಸದಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಅರಿತ ವ್ಯಕ್ತಿಯು ಆಕೆಯನ್ನು ಗುರಿಯಾಗಿಸಿಕೊಂಡಿದ್ದ. ದುಷ್ಕರ್ಮಿಯು ಮಹಿಳೆಯಿಂದ ಸುಮಾರು ಏಳು ಪವನ್ ಚಿನ್ನವನ್ನು ಕದ್ದಿದ್ದು, ಕದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಹೊರಗಿನಿಂದ ಬಾಗಿಲನ್ನು ಲಾಕ್​ ಮಾಡಿ ಹೊರಟುಹೋಗಿದ್ದ, ಆಕೆಯ ಮೊಬೈಲ್​ ಫೋನ್​ ಕೂಡ ಕದ್ದೊಯ್ದಿದ್ದ ಕಾರಣ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಅವರನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಪೆರೋಲ್​ ಮೇಲೆ ಬಿಡುಗಡೆಗೊಂಡಿದ್ದ ಕೊಲೆ ಆರೋಪಿಯಿಂದ ಬಾಲಕಿ ಮೇಲೆ ಅತ್ಯಾಚಾರ

ಚಿತ್ರೋದ್ಯಮದಲ್ಲಿ ಹಲವು ನಟಿಯರು ಲೈಂಗಿಕ ದೌರ್ಜನ್ಯದ ದೂರು ನೀಡುತ್ತಿರುವ ಕಾರಣ ಕೇರಳ ಸರ್ಕಾರವು ವಿಶೇಷ ತಂಡವನ್ನು ಸ್ಥಾಪಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಏಳು ಸದಸ್ಯರ ತಂಡವನ್ನು ರಚಿಸಲಾಯಿತು.

ಕ್ರೈಂ ಬ್ರಾಂಚ್ ಎಡಿಜಿಪಿ ಎಚ್ ವೆಂಕಟೇಶ್ ಅವರು ತಂಡದ ಕಾರ್ಯಾಚರಣೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ. ತಂಡದಲ್ಲಿ ಡಿಐಜಿ ಎಸ್ ಅಜೀತಾ ಬೇಗಂ, ಅಪರಾಧ ವಿಭಾಗದ ಹೆಚ್ಕ್ಯು ಎಸ್ಪಿ ಮೆರಿನ್ ಜೋಸೆಫ್, ಕೇರಳ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕಿ ಐಶ್ವರ್ಯ ಡೋಂಗ್ರೆ, ಎಐಜಿ ಅಜಿತ್ ವಿ., ಮತ್ತು ಅಪರಾಧ ವಿಭಾಗದ ಎಸ್ಪಿ ಎಸ್.ಮಧುಸೂಧನ್ ಇದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ